News Kannada
Sunday, December 04 2022

ಮಂಗಳೂರು

ಬಂಟ್ವಾಳ : ಹತ್ತೂರಿಗೂ ಬೆಳಕಾಗಿದ್ದವರು ಬಜಾರ್ ಗೋಪಾಲಕೃಷ್ಣ ಆಚಾರ್ಯರು

Bantwal: It was Bazar Gopalakrishna Acharya who was the light of all the 10th.
Photo Credit : By Author

ಬಂಟ್ವಾಳ : ಜಾತ್ಯಾತೀತ ಮನಸ್ಸಿನ ಜೊತೆಗೆ ಮಾನವೀಯತೆಯನ್ನು ಉಸಿರಾಗಿಸಿಕೊಂಡಿದ್ದ ಬಜಾರ್ ಗೋಪಾಲಕೃಷ್ಣ ಆಚಾರ್ಯರು ಸಜಿಪಮುನ್ನೂರು ಗ್ರಾಮಕ್ಕೆ ಮಾತ್ರವಲ್ಲದೆ ಹತ್ತೂರಿಗೂ ಬೆಳಕಾಗಿದ್ದರು ಎಂದು ನಂದಾವರ ಶ್ರೀ ದುರ್ಗಾಂಬಾ ಶಂಕರನಾರಾಯಣ ವಿನಾಯಕ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಎ.ಸಿ‌.ಭಂಡಾರಿ‌ ಹೇಳಿದರು.

ನಂದಾವರ ದೇವಳದ ಸಭಾಭವನದಲ್ಲಿ ನಡೆದ ಇತ್ತೀಚೆಗೆ ನಿಧನರಾದ ಬಜಾರ್ ಸಮೂಹ ಸಂಸ್ಥೆಗಳ ಪಾಲುದಾರ ಎಂ.ಗೋಪಾಲಕೃಷ್ಣ ಆಚಾರ್ಯರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಮಂಗಳೂರು ಕಾಳಿಕಾಂಬಾ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಲೋಕೇಶ್ ಆಚಾರ್ಯರು ಮಾತನಾಡಿ, ಗೋಪಾಲಕೃಷ್ಣ ಆಚಾರ್ಯರ ನಡೆ ನುಡಿಯಲ್ಲಿ ವಿಶಾಲ ಮನಸ್ಸು ಉಳ್ಳವರಾಗಿದ್ದು, ವಿಶ್ವಕರ್ಮ ಸಮಾಜ ಮಾತ್ರವಲ್ಲದೆ ಒಟ್ಟು ಸಾಮಾಜಿಕ‌ ವ್ಯವಸ್ಥೆಯ ಮೇಲೆ ಅಪಾರ ಪ್ರೀತಿ ಉಳ್ಳ ಆದರ್ಶ ವ್ಯಕ್ತಿ ಎಂದರು.

ಮೂರ್ತೆದಾರರ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿಯವರು ಮಾತನಾಡಿ, ಗೋಪಾಲಕೃಷ್ಣ ಆಚಾರ್ಯರ ಮಾನವೀಯತೆಯ ಗುಣ ಎಲ್ಲರೂ ಮೆಚ್ಚುವಂತಿದ್ದು, ತನ್ನ ಜೊತೆಗೆ ಇತರರೂ ಬೆಳೆಯಬೇಕೆನ್ನುವ ದೊಡ್ಡ ಗುಣ ಉಳ್ಳವರು ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಹತ್ತು ಬಡಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು.

ಇದೇ ಸಂದರ್ಭ ಕೋಟ ಚಂದ್ರಯ್ಯ ಆಚಾರ್, ಲ.ವಸಂತ್ ಕುಮಾರ್ , ವಿಶ್ವಕರ್ಮ ಸಂಘದ ಕಾರ್ಯದರ್ಶಿ ಸಂದೀಪ್ ಆಚಾರ್ಯ, ವಿಶ್ವಕರ್ಮ‌ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹರೀಶ್ ಆಚಾರ್ಯ, ಸುರೇಶ ಆಚಾರ್ಯ ಮಂಚಕಲ್ ನುಡಿನಮನ ಸಲ್ಲಿಸಿದರು.

ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ರುಕ್ಮಯ ಪೂಜಾರಿ, ಪ್ರಮುಖರಾದ ಅಶ್ವನಿ ಕುಮಾರ್ ರೈ, ಜಯಶಂಕರ ಬಾಸ್ರಿತ್ತಾಯ ಮೊದಲಾದ ಗಣ್ಯರು ಭಾಗವಹಿಸಿದ್ದರು. ಸುಧಾಕರ ಆಚಾರ್ಯ ಸ್ವಾಗತಿಸಿದರು, ರಾಧಾಕೃಷ್ಣ ಬಂಟ್ವಾಳ ಕಾರ್ಯಕ್ರಮ‌ ನಿರೂಪಿಸಿ, ವಂದಿಸಿದರು.

See also  ಮಂಗಳೂರು: ಜುಲೈ 1ರಿಂದ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲಾಗುವುದು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು