News Kannada
Saturday, January 28 2023

ಮಂಗಳೂರು

ಬೆಳ್ತಂಗಡಿ: ಅಡಿಕೆ ಮರ ತಲೆ ಮೇಲೆ ಬಿದ್ದು ಕಾರ್ಮಿಕ ಸಾವು

Journalist's son shot dead in Uttar Pradesh
Photo Credit : Pixabay

ಬೆಳ್ತಂಗಡಿ: ಇಂದಬೆಟ್ಟು ಗ್ರಾಮದ ಕುವೆತ್ಯಾರು ಎಂಬಲ್ಲಿ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಡಿಕೆ ಮರ ತಲೆ ಮೇಲೆ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.

ಮೃತ ವ್ಯಕ್ತಿ ಮುಂಡಾಜೆ ಗ್ರಾಮದ ಕುಂಟಾಲಪಳಿಕೆ ಮಂಜುಶ್ರೀ ನಗರದ ನಿವಾಸಿ ಅಣ್ಣು ನಲ್ಕೆ (66) ಎಂಬವರಾಗಿದ್ದಾರೆ.

ಇವರು ಕುವೆತ್ಯಾರು ನಿವಾಸಿ ನವೀನ್ ಎಂಬವರ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ತೋಟದ ಹಳೆಯ ಅಡಿಕೆ ಮರಗಳನ್ನು ನೌಫಾಲ್ ಎಂಬರು ಕಡಿಯುತ್ತಿದ್ದರು ಈವೇಳೆ ಅಡಿಕೆ ಮರವೊಂದು ಆಕಸ್ಮಿಕವಾಗಿ ಅಣ್ಣು ಅವರ ತಲೆ ಮೇಲೆ ಬಿದ್ದಿದ್ದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೂಡಲೇ ಅವರನ್ನು ಆಸ್ಪತ್ರೆಗೆ ಕರೆತಂದರೂ ಆವೇಳೆಗೆ ಅವರು ಮೃತಪಟ್ಟಿದ್ದರು.ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

See also  ಮಂಗಳೂರು: ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಹನ್ನೆರಡನೇ ಪದವಿ ಪ್ರದಾನ ಸಮಾರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು