News Kannada
Saturday, February 04 2023

ಮಂಗಳೂರು

ಪುಂಜಾಲಕಟ್ಟೆ: ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ತುಳು ನಾಟಕ ಸ್ಪರ್ಧೆಗೆ ತಂಡಗಳ ಆಹ್ವಾನ

Photo Credit : By Author

ಬಂಟ್ವಾಳ: ಕಳೆದ ೪೧ ವರ್ಷಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಹಾಗೂ ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ವತಿಯಿಂದ ತುಳು ಭಾಷೆಯ ಬೆಳವಣಿಗೆಗೆ ಪೂರಕವಾದ ತುಳು ನಾಟಕೋತ್ಸವ, ಆಟಿಡೊಂಜಿ ಕೂಟ, ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ತುಳು ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವ ಹಾಗೂ ತುಳು ನಾಟಕ ಮತ್ತು ಪ್ರತಿಭಾನ್ವಿತ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ೫ ನೇ ಬಾರಿಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆಯನ್ನು ಫೆಬ್ರವರಿ ೪, ೨೦೨೩ ರಿಂದ ಫೆಬ್ರವರಿ ೧೦, ೨೦೨೩ ನೇ ತಾರೀಕಿನವರೆಗೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಆಯೋಜಿಸಿದ್ದು, ಭಾಗವಹಿಸುವ ತಂಡಗಳ ನೊಂದಾವಣೆಗೆ ಕೃತಿಗಳನ್ನು ಆಹ್ವಾನಿಸುತ್ತಿರುವುದಾಗಿ ಸಂಘದ ಗೌರವಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮೇಲ್ಮನೆ ಅವರು ತಿಳಿಸಿದ್ದಾರೆ.

ಅವರು ಬುಧವಾರ ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಗೋಷ್ಠಿಯಲ್ಲಿ ಮಾತನಾಡಿದರು.ಸ್ಪರ್ಧೆಯಲ್ಲಿ ೭ ನಾಟಕಗಳು ಭಾಗವಹಿಸಲು ಅವಕಾಶವಿದ್ದು, ಫೆ.೧೧ರಂದು ಸಮಾರೋಪ ನಡೆಯಲಿದೆ. ಅಶ್ಲೀಲತೆಯ ಸೋಂಕಿಲ್ಲದ ತುಳು ಸಾಮಾಜಿಕ ನಾಟಕಕ್ಕೆ ಆದ್ಯತೆ. ಜಾತಿ,ಧರ್ಮ, ದೈವಾರಾಧನೆಗೆ ನಿಂದನೆಗಳು ನಿಷಿದ್ದವಾಗಿರುತ್ತದೆ. ನಾಟಕದ ಅವದಿ ಕನಿಷ್ಟ ೨:೧೫ ಗಂಟೆಯಾಗಿದ್ದು, ಗರಿಷ್ಟ ೨:೪೫ ಗಂಟೆಗಳಿಗೆ ಮೀರಬಾರದು. ಅವಽ ತಲುಪದ ಹಾಗೂ ಅವಽ ಮೀರಿದ ನಾಟಕಗಳು ಸ್ಪರ್ಧೆಯ ಯಾವುದೇ ಬಹುಮಾನಗಳಿಗೆ ಪರಿಗಣಿಸಲ್ಪಡುವುದಿಲ್ಲ ಮತ್ತು ಠೇವಣಿಯನ್ನು ಹಿಂದುರುಗಿಸಲಾಗುವುದಿಲ್ಲ. ಯಾವುದೇ ವಿಭಾಗದಲ್ಲಿ ಒಬ್ಬರಿಗೆ ಒಂದು ತಂಡದಲ್ಲಿ ಮಾತ್ರ ಭಾಗವಹಿಸುವ ಅವಕಾಶ. ಪರಿಮಿತ ಧ್ವನಿ ಮತ್ತು ಬೆಳಕಿನೊಂದಿಗೆ ಮೂರು ಪರದೆಗಳನ್ನು(ರಸ್ತೆ, ಮನೆ, ನೀಲಿ ಪರದೆ, ಅಂಕದ ಪರದೆ) ಒದಗಿಸಲಾಗುವುದು. ಹೆಚ್ಚಿನ ಅಗತ್ಯತೆಗಳನ್ನು ಸ್ಪರ್ಧಾ ತಂಡವೇ ಪೂರೈಸಿಕೊಳ್ಳಬೇಕು. ಸ್ಪರ್ಧಾ ತಂಡಕ್ಕೆ ಆಂಶಿಕ ಪ್ರಯಾಣ ಭತ್ಯೆಯನ್ನು ( ರೂ. ೭೦೦೦ /-) ನೀಡಲಾಗುವುದು. ಸ್ಪರ್ಧೆಗೆ ಆಯ್ಕೆಗೊಂಡ ತಂಡವು ರೂ. ೫,೦೦೦ /- ವನ್ನು ಠೇವಣಿಯಾಗಿ ನೀಡತಕ್ಕದ್ದು, ಹಾಗೂ ನಾಟಕ ಸ್ಪರ್ಧಾ ಸಮಿತಿಯು ನೀಡುವ ದಿನಾಂಕದಂದು ತಮ್ಮ ನಾಟಕವನ್ನು ಪ್ರzರ್ಶಿಸಲು ಒಪ್ಪಿಕೊಳ್ಳತಕ್ಕದ್ದು. ಯಾವುದೇ ಬದಲಾವಣೆ ಅಥವಾ ನಾಟಕ ಹಿಂತೆಗೆದುಕೊಂಡಲ್ಲಿ ಠೇವಣಿ ಮೊತ್ತ ಹಿಂತಿರುಗಿಸಲಾಗುವುದಿಲ್ಲ. ಈಗಾಗಲೇ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡು ಬಹುಮಾನ ವಿಜೇತ ನಾಟಕಗಳಿಗೆ ಅವಕಾಶ ಇರುವುದಿಲ್ಲ ಎಂದು ಅವರು ವಿವರಿಸಿದರು.

ಬಹುಮಾನಗಳ ವಿವರ:

ಶ್ರೇಷ್ಠ ನಾಟಕ ಪ್ರಥಮ: ೩೩ಸಾವಿರ ರೂ. ದ್ವಿತೀಯ: ೨೨ಸಾವಿರ ರೂ. ತೃತೀಯ: ೧೫ಸಾವಿರ ರೂ. , ಶ್ರೇಷ್ಠ ನಟ, ನಟಿ,ಹಾಸ್ಯ ನಟ, ನಟಿ, ಪೋಷಕ ನಟ, ನಟಿ, ಸಂಗೀತ, ನಿರ್ದೆಶನ, ರಂಗ ವಿನ್ಯಾಸ, ಪ್ರಸಾದನ, ಅತ್ಯುತ್ತಮ ಬೆಳಕು ಸಂಯೋಜನೆ, ಈ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಸ್ಮರಣಿಕೆ ನೀಡಲಾಗುವುದು. ತೀರ್ಪುಗಾರರ ವಿಶೇಷ ಬಹುಮಾನವಿದೆ.

See also  ಬೆಳ್ತಂಗಡಿ: ಗಂಡಿ ಬಾಗಿಲು ಶಾಲಾ ವಿದ್ಯಾರ್ಥಿ ಸಾವು

ನಾಟಕ ಸ್ಪರ್ಧಾ ಸಮಿತಿಯ, ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಡಿ.೩೧ ರ ಮುಂಚಿತವಾಗಿ ಕೃತಿಗಳನ್ನು ಕಳುಹಿಸಬೇಕು.

ಕೃತಿ ಕಳುಹಿಸಬೇಕಾದ ವಿಳಾಸ:
ಅಧ್ಯಕ್ಷರು,
ಶ್ರೀ ಮುರುಘೇಂದ್ರ ಮಿತ್ರ ಮಂಡಳಿ, ರಿ.ಪುಂಜಾಲಕಟ್ಟೆ
ಪಿಲಾತಬೆಟ್ಟು ಗ್ರಾಮ, ಅಂಚೆ ಪುಂಜಾಲಕಟ್ಟೆ, ಬಂಟ್ವಾಳ ತಾ.
ಅಥವಾ ಸುರಕ್ಷಾ ಮೆಡಿಕಲ್ಸ್
ಅಂಚನ್ ಕಾಂಪ್ಲೆಕ್ಸ್, ಪುಂಜಾಲಕಟ್ಟೆ
ಅಂಚೆ ಪುಂಜಾಲಕಟ್ಟೆ.
ಸಂಪರ್ಕ: ಮೊ.ನಂ. : ೯೪೮೨೦೯೬೦೬೩, ೯೪೪೯೧೮೯೫೦೬, ೯೭೪೦೩೨೪೮೬೨
ಅಧ್ಯಕ್ಷ ಪ್ರವೀಣ್ ಶೆಟ್ಟಿ ಕುರ್ಡುಮೆ, ಪದಾಧಿಕಾರಿಗಳಾದ ಮಂಜಪ್ಪ ಮೂಲ್ಯ, ಗಿರೀಶ್ ಮೂಲ್ಯ ಅನಿಲಡೆ, ಚಂದ್ರಶೇಖರ ಶೆಟ್ಟಿಗಾರ್, ದಿನಕರ ಶೆಟ್ಟಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು