ಮಂಗಳೂರು: ಬಿಜೆಪಿಯವರಿಗೆ ಚುನಾವಣಾ ಭಯ ಆರಂಭವಾಗಿದ್ದು ಉತ್ತರ ಭಾರತದ ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ಇವರಿಗೆ ಭೀತಿ ಹುಟ್ಟಿಸಿದೆ. ದೆಹಲಿಯ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಎಎಪಿ ಮೆರೆದರೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಜಯ ದೆಹಲಿಯಲ್ಲಿ ಆಪ್ ಜಯಗಳಿಸಿದೆ ಇದನ್ನು ಅವಲೋಕಿಸಿದಾಗ ಬಿಜೆಪಿ ಅವರಿಗೆ ಚುನಾವಣಾ ಭಯ ಪ್ರಾರಂಭವಾಗಿದೆ. ಎಂದು ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ವ್ಯಂಗ್ಯ ಮಾಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೇವಲ ಗುಜರಾತಿನಲ್ಲಿ ಬಿಜೆಪಿ ಗೆದ್ದಿದೆ ಎಂದು ಅದನ್ನೇ ದೊಡ್ಡ ವಿಚಾರ ಮಾಡಿಕೊಂಡು ಮೋದಿ ಮೇನಿಯಾ ಎನ್ನುವ ಪ್ರಚಾರ ಶುರು ಮಾಡಿದ್ದಾರೆ. ಅದನ್ನೇ ಕರ್ನಾಟಕದ ಚುನಾವಣೆಗೆ ದಿಕ್ಸೂಚಿ ಹೇಳುತ್ತಿದ್ದಾರೆ ಹಿಮಾಚಲ ರಾಜ್ಯದ ಚುನಾವಣೆಯೇ ಕರ್ನಾಟಕ ರಾಜ್ಯದ ಚುನಾವಣೆಗೆ ದಿಕ್ಸೂಚಿ ಎಂದು ತಾನು ಹೇಳುವುದಾಗಿ ಹೇಳಿದರು.
ಬಿಜೆಪಿ ಅವರಿಗೆ ಗುಜರಾತ್ ಅಲ್ಲ ದೇಶದ ರಾಜಧಾನಿ ದೆಹಲಿಯಲ್ಲಿನ ಮಹಾನಗರ ಪಾಲಿಕೆಯ 15 ವರ್ಷಗಳ ಬಿಜೆಪಿ ಸೋಲು ಅವರಿಗೆ ದಿಕ್ಸೂಚಿ ಆಗಿರಬಹುದು ಎಂದರು. 7 ಮರು ಚುನಾವಣೆಯಲ್ಲಿ ಎರಡು ರಾಜ್ಯಗಳಲ್ಲಿ ಒಂದು ಬಿಜೆಪಿ ಒಂದು ಕಾಂಗ್ರೆಸ್ ಬಂದಿದೆ ಏಳು ಮರು ಚುನಾವಣೆಯಲ್ಲಿ ಎರಡರಲ್ಲಿ ಕಾಂಗ್ರೆಸ್ ಬಂದಿದೆ ಬಿಜೆಪಿ ಎರಡು ಬಂದಿದೆ ಉಳಿದ ಮೂರು ಇತರ ಪಕ್ಷಗಳು ಹಂಚಿಕೊಂಡಿವೆ. ಗುಜರಾತಿನ ಸಾಧನೆ ಏನು ಇಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸೋಲಿನ ಚಿಂತನೆ ನಡೆದಿದೆ ಇವತ್ತು ಚುನಾವಣಾ ಭಯದಿಂದ ನಮ್ಮ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾನ್ ಎನ್ನುವ ವಿಚಾರ ಮುನ್ನೆಲೆಗೆ ತರುತ್ತಿದ್ದಾರೆ. ಯೋಜನೆಗಳ ಹೆಸರು ಬದಲಾವಣೆ ಮಾಡಿ ಅದನ್ನು ತಮ್ಮ ಯೋಜನೆ ಹೇಳುತ್ತಿದ್ದಾರೆ. ಎಲ್ಲಾ ಯೋಜನೆಗಳಿಗೆ ತಮ್ಮದೇ ನಾಯಕರ ಹೆಸರನ್ನು ಇಡುತ್ತಿದ್ದಾರೆ. ಈ ಮೂಲಕ ವ್ಯವಸ್ಥೆಯಲ್ಲಿ ತಿರುಚಿರುವ ಹೊರಟಿದ್ದಾರೆ ಎಂದರು ಸುದ್ದಿಗೋಷ್ಠಿಯಲ್ಲಿ ನಾಯಕರಾದ ಪ್ರಕಾಶ್ ಸಾಲಿಯನ್ ಸುದೀರ್ ಟೀಕೆ ಕುಮಾರಿಯ ಪಿ ಶುಭೋದಯ ಅಲ್ವಾ, ಅಬ್ದುಲ್ ಸಲೀಂ ಕವಿತಾ ಉಪಸ್ಥಿತರಿದ್ದರು.