News Kannada
Monday, October 02 2023
ಮಂಗಳೂರು

ಬೆಳ್ತಂಗಡಿ: ನಡ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ

Pratibha Puraskar ceremony held at Nada PU College
Photo Credit : By Author

ಬೆಳ್ತಂಗಡಿ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಂಸ್ಕಾರಯುತ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಬಾಹ್ಯ ಸೌಂದರ್ಯಕ್ಕಿಂತಲೂ ಆಂತರಿಕ ಸೌಂದರ್ಯಕ್ಕೆ ಒತ್ತು ಕೊಡಬೇಕು. ಕಳೆದು ಹೋದ ಸಮಯ ಮತ್ತೆ ಸಿಗುವುದಿಲ್ಲ. ನಾವು ಆತ್ಮಾವಲೋಕನ ಮಾಡಿಕೊಂಡು ಮುಂದುವರಿದಾಗ ಸಮಾಜದಲ್ಲಿ ಒಂದು ಶಕ್ತಿಯಾಗಲು ಸಾಧ್ಯವಾಗುತ್ತದೆ.” ಎಂದು ಕರ್ನಾಟಕ ವಿಧಾನ ಪರಿಷತ್ ಶಾಸಕ ಪ್ರತಾಪ ಸಿಂಹ ನಾಯಕ್ ಹೇಳಿದರು.

.ಅವರು ನಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. “ಎಲ್ಲರನ್ನೂ ಒಗ್ಗೂಡಿಸುವ ನಮ್ಮ ದೇಶದ ಬಗ್ಗೆ ಅಭಿಮಾನ, ಗೌರವ, ಪ್ರೀತಿ ಬೆಳೆಸಿಕೊಂಡಾಗ ಮಾತ್ರ ದೇಶ ಪ್ರಗತಿ ಯಾಗುತ್ತದೆ ಎಂದರು. ಸಂಸ್ಥೆಯ ಕಾಮಗಾರಿಗಳಿಗೆ ಅನುದಾನದ ಭರವಸೆಯನ್ನು ನೀಡಿದರು.

ಅಧ್ಯಕ್ಷತೆಯನ್ನು ನಡ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯಗೌಡ ವಹಿಸಿಕೊಂಡಿದ್ದರು. ಗುತ್ತಿಗೆದಾರ ಜನಾರ್ದನ ಗೌಡ,ನಡ ಸರಕಾರಿ ಪ್ರೌಢ ಶಾಲೆ ಯ ನಿವೃತ್ತ ಪ್ರಥಮ ದರ್ಜೆ ಗುಮಾಸ್ತೆ ಜಾಹ್ನವಿ,ಸಂಸ್ಥೆಯ ಕ್ರೀಡಾ ತರಬೇತುದಾರ ಹರ್ಷ ಕುಮಾರ್ ಇವರನ್ನು ಸನ್ಮಾನಿಸಲಾಯಿತು.

ಕಾಲೇಜು ಅಭಿವೃದ್ಧಿಸಮಿತಿ ಉಪಾಧ್ಯಕ್ಷ ಅಜಿತ್ ಆರಿಗ, ಸ್ಟಾರ್ ಲೈನ್ ಶಿಕ್ಷಣ ಸಂಸ್ಥೆಯ ಸಂಚಾಲಕ ಹಬೀಬ್ ಸಾಹೇಬ್, ಗ್ರಾಮ ಪಂಚಾಯಿತಿ ಸದಸ್ಯ ಹರಿಶ್ಚಂದ್ರಗೌಡ, ಬೆಳ್ತಂಗಡಿ ಪ್ಯಾಕ್ಸ್ ನಿರ್ದೇಶಕ ಮುನಿರಾಜ ಅಜ್ರಿ, ನಡ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಯಾಕುಬ್, ಕಾಲೇಜು ವಿದ್ಯಾರ್ಥಿ ನಾಯಕ ನಿತೇಶ್ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ವೀರಪ್ಪ ಸಾಲಿಯಾನ್, ವಸಂತ ವಿ. ಜಿ. ಕೂಲ್, ಹಾಲು ಉತ್ಪಾದಕ ಸಂಘದ ಜಯಂತ್ ಗೌಡ, ಪ್ರೌಢ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಧಾಕರ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು ಹಬೀಬ್ ಸಾಹೇಬ್ ಸಂಸ್ಥೆಗೆ ಗೋಡೆ ಗಡಿಯಾರವನ್ನು ಹಸ್ತಾoತರಿಸಿದರು.

ಮುನಿರಾಜ ಅಜ್ರಿ ಕಾಲೇಜು ಗ್ರಂಥಾಲಯಕ್ಕೆ ರೂ.10,000 ಮೌಲ್ಯದ ಪುಸ್ತಕಗಳ ಕೊಡುಗೆ ಘೋಷಸಿದರು.ಕಳೆದ ಮೂರು ಶೈಕ್ಷಣಿಕ ವರ್ಷಗಳಲ್ಲಿ ವಿಶಿಷ್ಟ ಶ್ರೇಣಿ ಯಲ್ಲಿ ಉತ್ತೀರ್ಣ ರಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರ ಅಭಿನಂದನೆ ಕಾರ್ಯಕ್ರಮ ವನ್ನು ರಾಜ್ಯಶಾಸ್ತ್ರ ಉಪನ್ಯಾಸಕಿ ಶಿಲ್ಪಾ ನಿರ್ವಹಿಸಿದರು.

ಕ್ರೀಡಾ ವಿಭಾಗದ ವಿಜೇತರ ಪಟ್ಟಿಯನ್ನು ಕ್ರೀಡಾ ಸಂಯೋಜಕಿ ಮತ್ತು ಅರ್ಥಶಾಸ್ತ್ರ ಉಪನ್ಯಾಸಕಿ ವಸಂತಿ ವಾಚಿಸಿದರು.ಉಪನ್ಯಾಸಕಿ ವಸಂತಿಯವರು ಮಾತೆ ದಿ. ಸುಬ್ಬಮ್ಮರವರ ಸ್ಮರಣಾರ್ಥ ದತ್ತಿ ನಿಧಿ, ಕಾಲೇಜು ಉಪನ್ಯಾಸಕರು ತಮ್ಮ ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕೊಡಮಾಡುವ ಪ್ರೋತ್ಸಾಹಕ ನಿಧಿ,ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ವಿತರಿಸಿದರು.

ಇತಿಹಾಸ ಉಪನ್ಯಾಸಕಿ ವಿದ್ಯಾ, ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಸುಖೇತಾ ಸಹಕರಿಸಿದರು. ಕನ್ನಡ ಉಪನ್ಯಾಸಕಿ ಲಿಲ್ಲಿ ಪಿ. ವಿ. ವರದಿ ವಾಚಿಸಿದರು.ಪ್ರಿನ್ಸಿಪಾಲ್ ಚಂದ್ರಶೇಖರ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ನೀಲಾವತಿ, ತೃಪ್ತಿ, ರಕ್ಷಿತಾ, ಬಿಸ್ಮಿತಾ, ಸವಿತಾ ಪ್ರಾರ್ಥಿಸಿದರು.ಆಂಗ್ಲ ಭಾಷಾ ಉಪನ್ಯಾಸಕ ಮೋಹನ ಗೌಡ ಕಾರ್ಯಕ್ರಮ ನಿರ್ವಹಸಿದರು.

See also  ವಿದ್ಯಾರ್ಥಿನಿ ಹಿಬಾ ಶೇಕ್ ಗೆ ನ್ಯಾಯ ವಿಳಂಬ ;ಕ್ಯಾಂಪಸ್ ಫ್ರಂಟ್ ನಿಯೋಗ ಡಿಸಿಪಿ ಭೇಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು