ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಉತ್ತರ ಹಾಗೂ ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ 3131 ಜಂಟಿ ಯೋಜನೆಯ ಸಹಯೋಗದಲ್ಲಿ ದಿನಾಂಕ ಡಿಸೆಂಬರ್ 13 ರಂದು, ಮಂಗಳೂರು ನಗರದ ಶಕ್ತಿನಗರದಲ್ಲಿರುವ, ಸಾನಿಧ್ಯ ವಿಶೇಷ ಚೇತನರ ಶಾಲೆಗೆ ಅಗತ್ಯವಿದ್ದ ಕುರ್ಚಿ, ಟೇಬಲ್, ಪೀಠಪಕರಣ ಗಳನ್ನು ಕೊಡುಗೆ ನೀಡುವ ಸಮಾರಂಭ ಜರಗಿತು.
ಸಮಾರಂಭದ ವಿಶೇಷ ಆಹ್ವಾನಿತ ರಾಗಿ ಆರ್. ಐ. ಜಿಲ್ಲೆ. 6540 ಪಿಡಿಜಿ ರೊ. ಡಾ. ರಂಜನ್ ಕಿಣಿ,(ರೋಟರಿ ಕ್ಲಬ್, ಶೆರ್ವಿಲ್ಲೆ, ಯುಎಸ್ಎ) ಮುಖ್ಯ ಅತಿಥಿಗಳಾಗಿ ಆರ್. ಐ. ಜಿಲ್ಲೆ. 3181 ಮಾಜಿ ಜಿಲ್ಲಾ ಗವರ್ನರ್ಗಳಾದ ರೊ. ಕೃಷ್ಣ ಶೆಟ್ಟಿ,ಮತ್ತು ರೊ. ರಂಗನಾಥ ಭಟ್, ಸಾನಿದ್ಯ ವಿಶೇಷ ಶಾಲೆಯ ಆಡಳಿತ ನಿರ್ದೇಶಕ ಡಾ. ವಸಂತ್ ಕುಮಾರ್ ಶೆಟ್ಟಿ, ರೋಟರಿ ಕ್ಲಬ್ ಉತ್ತರದ ಉಪ ಅಧ್ಯಕ್ಷ ರೊ. ವಿಶ್ವನಾಥ್ ಶೆಟ್ಟಿ,ರೋಟರಿ ಕ್ಲಬ್ ಮೆಟ್ರೋ ಅಧ್ಯಕ್ಷ ರೊ. ನರೇಂದ್ರ ಪ್ರಭು, ಕಾರ್ಯದರ್ಶಿ ರೊ. ಅಶ್ವಿನಿ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ವಸಂತ್ ಕುಮಾರ್ ಶೆಟ್ಟಿ ಸ್ವಾಗತಿಸಿ ರೋಟರಿ ಸಂಸ್ಥೆಯ, ಸಹಾಯ ಮತ್ತು ಸಹಕಾರಗಳನ್ನು ಸ್ಮರಿಸಿದರು. ಪಿಡಿಜಿ ಗಳಾದ, ಡಾ. ರಂಜನ್ ಕಿಣಿ, ಕೃಷ್ಣ ಶೆಟ್ಟಿ, ಮತ್ತು ರಂಗನಾಥ ಭಟ್ ರವರು ರೋಟರಿ ಸೇವಾ ಕಾರ್ಯಗಳ ಬಗ್ಗೆ ವಿವರಿಸಿ ಮುಂದಿನ ದಿನಗಳಲ್ಲಿ ಸಾನಿದ್ಯ ಶಾಲೆಗೆ ಸಾಧ್ಯ ವಾದಷ್ಟು, ಸಹಕಾರ ಮತ್ತು ಸಹಾಯ ಕಲ್ಪಿಸುವದಾಗಿ ತಿಳಿಸಿದರು.
ಈ ಸಮಾರಂಭದಲ್ಲಿ ಮಾಜಿ ರೋಟರಿ ಗವರ್ನೆರ್ ಡಾ. ರಂಜನ್ ಕಿಣಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು ಸಾನಿದ್ಯ ವಿಶೇಷ ಚೇತನ ಶಾಲೆಯ ವಿದ್ಯಾರ್ಥಿಗಳಿಂದ, ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ರೋಟರಿ ಕ್ಲಬ್ ಮಂಗಳೂರು ಉತ್ತರದ ಉಪಾಧ್ಯಕ್ಷ ರೊ. ವಿಶ್ವನಾಥ್ ಶೆಟ್ಟಿ, ಪೀಟೋಪಕರಣದ ಬಗ್ಗೆ ರೂ.30,650/- ಚೆಕ್ಕು ಡಾ. ವಸಂತ ಶೆಟ್ಟಿ ಯವರಿಗೆ ನೀಡಿದರು. ಕ್ಲಬ್ ಸದಸ್ಯರಾದ ರೊ. ಅಜಿತ್ ರಾವ್, ರೊ. ಅರುಣ್ ಕುಮಾರ್ ಶೆಟ್ಟಿ ರೊ. ಜೆ. ವಿ. ಶೆಟ್ಟಿ. ಉಪಸ್ಥಿತರಿದ್ದರು.