ಮಂಗಳೂರು: ಪುರಸಭಾ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಅಳವಡಿಸಲಾದ ಕೆಲ ಸಿ.ಸಿ.ಕ್ಯಾಮರ ಸಹಿತ ಪುರಸಭೆಯ ದಾಸ್ತಾನು ಕೊಠಡಿಯಿಂದ ಸೊತ್ತುಗಳು ಕಾಣೆಯಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆಗೊಳಪಡಿಸಬೇಕೆಂಬ ವಿಪಕ್ಷ ಸದಸ್ಯರ ಒತ್ತಡಕ್ಕೆ ಮಣಿದ ಪುರಸಭಾಧ್ಯಕ್ಷರು ಮುಂದಿನ 30 ದಿನದೊಳಗೆ ಎಲ್ಲಾ ಸಿ.ಸಿ.ಕ್ಯಾಮರವನ್ನು ಸುಸ್ಥಿತಿಗೆ ತರುವುದಲ್ಲದೆ ಸೊತ್ತುಗಳು ಕಾಣೆಯಾದ ಬಗ್ಗೆ ತನಿಖೆಯನ್ನು ಲೋಕಾಯುಕ್ತಕ್ಕೆ ಒಪ್ಪಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ತಮ್ಮ ಕುರ್ಚಿಯಲ್ಲಿ ಅಸೀನರಾದ ವಿದ್ಯಮಾನ ನಡೆಯಿತು.
ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ವಿಪಕ್ಷ ಸದಸ್ಯರಾದ ಗೋವಿಂದ ಪ್ರಭು, ಹರಿಪ್ರಸಾದ್, ಜಯರಾಮ ನಾಯ್ಕ್ ಅವರು ತಮ್ಮ ಕುರ್ಚಿಯಲ್ಲಿ ಅಸೀನರಾಗದೆ ಪುರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಅಳವಡಿಸಲಾದ ಸಿಸಿ ಕ್ಯಾಮರಗಳ ಪೈಕಿ ಕೆಲ ಕ್ಯಾಮರಗಳೇ ನಾಪತ್ತೆಯಾದರೆ, ಇನ್ನು ಕೆಲವು ಸಮರ್ಪಕವಾಗಿ ಕಾರ್ಯಾಚರಿಸುತ್ತಿಲ್ಲ, ಪುರಸಭೆಯ ದಾಸ್ತಾನು ಕೊಠಡಿಯಲ್ಲಿರುವ ಹಳೇ ಬ್ಯಾಟರಿ, ಕಟ್ಟಿಂಗ್ ಯಂತ್ರ ಸಹಿತ ಹಲವು ಸೊತ್ತುಗಳು ಕೂಡ ಕಾಣೆಯಾಗಿದೆ. ಈ ಬಗ್ಗೆ ಪುರಸಭೆ ಸಹಿತ ಜಿಲ್ಲಾಧಿಕಾರಿಯವರಿಗೂ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಚಾರದಲ್ಲಿ ಅಧ್ಯಕ್ಷರು ಸ್ಪಷ್ಟ ನಿರ್ಧಾರ ಪ್ರಕಟಿಸುವವರೆಗೆ ತಾವು ಕುರ್ಚಿಯಲ್ಲಿ ಅಸೀನರಾಗುವುದಿಲ್ಲ ಎಂದು ಪಟ್ಟುಹಿಡಿದರು.ಈ ಸಂಬಂಧ ಸುದೀರ್ಘ ವಾಗಿ ಚರ್ಚೆ ನಡೆಯಿತು.ಒಂದು ಹಂತದಲ್ಲಿ ವಿಪಕ್ಷ ಸದಸ್ಯರು ಧರಣಿಗೂ ಮುಂದಾದರು.ಈ ಸಂದರ್ಭ ಸಿ.ಸಿ.ಕ್ಯಾಮರ ಸರ್ವೀಸ್ ಏಜೆನ್ಸಿದಾರ ಸಭಾಕಲಾಪಕ್ಕಾಗಮಿಸಿ ಸ್ಪಷ್ಟನೆ ನೀಡುವ ಬದಲು ಸದಸ್ಯರ ವಿರುದ್ದವೇ ಏರು ಧ್ವನಿಯಾಲ್ಲಿ ಮಾತನಾಡಿದ್ದು, ಸದಸ್ಯರನ್ನು ಕೆರಳಿಸಿತು.ತಕ್ಷಣ ಆವ್ಯಕ್ತಿಯನ್ನು ಸಿಬ್ಬಂದಿಗಳು ಸಭೆಯಿಂದ ಹೊರ ಕಳುಹಿಸಲಾಯಿತು.
ಈ ಸಂದರ್ಭ ಸದಸ್ಯ ಮೊನೀಶ್ ಆಲಿ,ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು ಅವರು ಮಧ್ಯಪ್ರವೇಶಿಸಿ ಈ ವಿಚಾರವನ್ನು ತನಿಖೆಗೊಳಪಡಿಸುವಂತೆ ಒತ್ತಾಯಿಸಿದರು.
ಕೊನೆಗೆ ಮೂವತ್ತು ದಿನದಲ್ಲಿ ಎಲ್ಲಾ ಕ್ಯಾಮರವನ್ನು ಅಳವಡಿಸಿ ಸುಸ್ತಿಗೆ ತರಲು ಕ್ರಮಕೈಗೊಳ್ಳಲಾ ಗುವುದಲ್ಲದೆ ಸೊತ್ತುಗಳು ನಾಪತ್ತೆ ಸಹಿತ ಎಲ್ಲವನ್ನು ತನಿಖೆಗೆ ಲೋಕಾಯುಕ್ಕೆ ಒಪ್ಪಿಸಿ ಇದರ ವರದಿಯನ್ನು ಸದಸ್ಯರಿಗೆ ನೀಡಲಾಗುವುದು ಎಂದು ಅಧ್ಯಕ್ಷ ಮಹಮ್ಮದ್ ಶರೀಫ್ ರೂಲಿಂಗ್ ಹೊರಡಿಸಿದರು.ಬಳಿಕ ವಿಪಕ್ಷ ಸದಸ್ಯರಾದ ಗೋವಿಂದಪ್ರಭು, ಹರಿಪ್ರಸಾದ್, ಜಯರಾಮ ನಾಯ್ಕ್ ತಮ್ಮ ಕುರ್ಚಿಯಲ್ಲಿ ಅಸೀನರಾದರು.
ಕಾಲಚಕ್ರ..!
ಜಕ್ರಿಬೆಟ್ಟುವಿನಲ್ಲಿ ಇತ್ತೀಚೆಗೆ 135 ವೆಚ್ಚದ ಅಣೆಕಟ್ಟು ನಿರ್ಮಾಣಲ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷರಾಗಲೀ, ಸದಸ್ಯರನ್ನಾ
ಆಗ ಸದಸ್ಯ ಗೋವಿಂದಪ್ರಭು ಅವರು ಪ್ರತಿಕ್ರಿಯಿಸಿ ಹಿಂದೆ ನಿಮ್ಮವರು ಅಧಿಕಾರದಲ್ಲಿದ್ದಾಗ ಹೀಗೆ ನಡೆದಿತ್ತು ಎಂದು ನೆನಪಿಸಿ ಇದೊಂದು ಕಾಲಚಕ್ರ ಇದ್ದಂತೆ ಎಂದು ಕುಟುಕಿದರು.
ಜಕ್ರಿಬೆಟ್ಟು ಅಣೆಕಟ್ಟು ನಿರ್ಮಾಣಗೊಂಡ ಬಳಿಕ 4 ಮೀ.ಎತ್ತರಕ್ಕೆ ನೀರು ನಿಲುಗಡೆಯಾದರೆ ಸ್ಥಳೀಯರ ಜಮೀನು,ಕೃಷಿ ಭೂಮಿ ಮುಳುಗಡೆಯಾಗಲಿದೆ ಆಗ ಜನರಿಗೆ ಪುರಸಭೆ ಉತ್ತರಿಸಬೇಕಾಗುತ್ತದೆ ಎಂದು ಸದಸ್ಯ ಜನಾರ್ದನ ಚಂಡ್ತಿಮಾರ್ ಸಭೆಗೆ ತಿಳಿಸಿದರು.ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆದು ಸ್ಪಷ್ಟನೆ ಕೇಳಲು ಸಭೆ ತೀರ್ಮಾನಿಸಿತು.
ನೀರಿನ ಟಾಂಕಿಯಲ್ಲಿ ಮರ…!
ಜಕ್ರಿಬೆಟ್ಟುವಿನಲ್ಲಿರುವ ಹಳೆಯ ನೀರಿನ ಟ್ಯಾಂಕನ್ನು ಶುಚಿಗೊಳಿಸದ ಪರಿಣಾಮ ಪೂರ್ತಿ ಪಾಚಿ ಹಿಡಿದಿದೆಯಲ್ಲದೆ ಟ್ಯಾಂಕ್ ನೊಳಗೆ ಮರವೊಂದು ಬೆಳೆದಿದೆ.ಅದೇ ನೀರನ್ನು ಬಂಟ್ವಾಳ ನಗರವಾಸಿಗಳು ಕುಡಿಯುತ್ತಿದ್ದಾರೆ. ಈ ಟ್ಯಾಂಕ್ ಯಾವ ಸಮಯದಲ್ಲಾದರೂ ಉರುಳಿ ಬೀಳುವ ಅಪಾಯದಲ್ಲಿದೆ ಎಂದು ಅಲ್ಲಿನ ವಿಡೀಯೋ ಚಿತ್ರಣವನ್ನು ಸದಸ್ಯ ಗೋವಿಂದಪ್ರಭು ಸಭೆಯಲ್ಲಿಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಟ್ಯಾಂಕ್ ಶುಚಿಗೊಳಿಸುವುದಾಗಿ ಮುಖ್ಯಾಧಿಕಾರಿ ಸ್ವಾಮಿ ಭರವಸೆಯಿತ್ತರು.
ರಾಜಕಾಲುವೆಯಲ್ಲಿಅಕ್ರಮಕಟ್ಟಡ;
ಪುರಸಭಾ ವ್ಯಾಪ್ತಿಯಲ್ಲಿ ರಸ್ತೆಗಳ ಇಕ್ಕೆಲ ಪಾದಚಾರಿಗಳಿಗೆ ತೊಂದರೆಯಾಗುವಂತೆ ಅತಿಕ್ರಮಣ ಮಾಡಿರುವುದು,ಬಿ.ಸಿ.ರೋಡಿನ ಮೇಲ್ಸ್ ವೆಯಡಿಯಲ್ಲಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುವ ರೀತಿಯಲ್ಲಿ ತರಕಾರಿ,ಇತರ ವಸ್ತುಗಳ ಮಾರಾಟವನ್ನು ತೆರವುಗೊಳಿಸುವಂತೆ ಅಧ್ಯಕ್ಷ ಶರೀಫ್ ಸೂಚಿಸಿದರು.
ಈ ಸಂದರ್ಭ ಸದಸ್ಯರಾದ ವಾಸುಪೂಜಾರಿ,ಮಹಮ್ಮದ್ ನಂದರಬೆಟ್ಟು ಅವರು ವಾರದ ಸಂತೆ ಮಾಡುವವರು ತಾವು ಪುರಸಭೆಗೆ ಹಣ ಸಂದಾಯ ಮಾಡುತ್ತೆವೆ ಎನ್ನುತ್ತಾರೆ ಎಂದರು. ಗುರುತು ಚೀಟಿ ಇರುವ ಬೀದಿಬದಿ ವ್ಯಾಪಾರಸ್ಥರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ಸದಸ್ಯರು ಒತ್ತಾಯಿಸಿದರು. ಬಿ.ಸಿ.ರೋಡಿನಲ್ಲಿ ಸುಂದರೀಕರಣಕ್ಕೆ ಕೋಟಿಗಟ್ಟಲೆ ಖರ್ಚು ಮಾಡಲಾಗಿದೆ.
ಪುರಸಭೆಗೆ ಆದಾಯಬರುವ ನಿಟ್ಟಿನಲ್ಲಿ ಪ್ಳೈಒವರ್ ಅಡಿಯಲ್ಲಿ ಕ್ರಮಬದ್ದವಾಗಿ ಪೇಯ್ಡ್ ಪಾರ್ಕಿಂಗ್ ಮಾಡುವಂತೆ ಸದಸ್ಯ ಸಲಹೆ ನೀಡಿದರು.ಈ ಹಂತದಲ್ಲಿ ಸದಸ್ಯ ಜನಾರ್ದ ನ ಚಂಡ್ತಿಮಾರ್ ಅವರು ಪ್ರತಿಕ್ರಿಯಿಸಿ ಬೀದಿಬದಿ ವ್ಯಾಪಾರಿಗಳ ಬಗ್ಗೆ ಮಾತನಾಡುವ ನಾವು ರಾಜಾಕಾಲುವೆಯನ್ನು ಒತ್ತುವರಿ ಮಾಡಿ ಅಕ್ರಮ ಕಟ್ಟಡ ನಿರ್ಮಿಸುವವರ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.
ದೊಡ್ಡಕುಳಗಳು ತಾಲೂಕು ಕಚೇರಿಯಿಂದ ಕೈಕುಂಜ ರಸ್ತೆಯನ್ನು ಅತಿಕ್ರಮಿಸಿದ್ದಾರೆ ಅವರನ್ನು ತೆರವುಗೊಳಿಸುವ ಧಮ್ ಇದೆಯೆ ಎಂದರು. ಅಶ್ರಯ ಯೋಜನೆಯಲ್ಲಿಬಾರೆಕಾಡು ಪ್ರದೇಶದಲ್ಲಿ ವಾಸ್ತವ್ಯವಿರುವವರಿಗೆ ಹಕ್ಕುಪತ್ರ ಯಾವಾಗ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದುಸದಸ್ಯ ವಾಸುಪೂಜಾರಿ ಪ್ರಶ್ನಿಸಿದರಲ್ಲದೆ 67 ಮಂದಿ ಫಲಾನುಭವಿಗಳಿಗೆ ಮಂಜೂರಾತಿಪತ್ರವನ್ನು ಪುರಸಭೆಯಲ್ಲೇ ಶಾಸಕರಿಂದ ವಿತರಿಸಬಹುದಿತ್ತು.ಶಾಸಕರಲ್ಲಿನಮ್ಮ ಸಮಸ್ಯೆ ಹೇಳಿಕೊಳ್ಳಲುಅವಕಾಶವಿತ್ತುಎಂದು ವಾಸುಪೂಜಾರಿ ಹೇಳಿದರು.
ಶಾಸಕರು ಎಲ್ಲರಿಗೂ ಶಾಸಕರೇ ಅವರ ಕಚೇರಿ ಸರಕಾರಿ ಕಚೇರಿ ಹೊರತು ಪಕ್ಷದ ಕಚೇರಿ ಅಲ್ಲ, ಅವರ ಕಚೇರಿಗೆ ಎಲ್ಲರಿಗೂ ಹೋಗಲು ಅವಕಾಶ ಇದೆ. ನೀವು ಅಲ್ಲಿ ಹೋಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಯಾರು ಪ್ರಶ್ನಿಸಲಾರರು ಎಂದು ಸದಸ್ಯ ಗೋವಿಂದ ಪ್ರಭು ನಗುತ್ತಲೇ ತಿರುಗೇಟು ನೀಡಿದರು
ಮುಖ್ಯಾಧಿಕಾರಿ ವಿರುದ್ಧ ಕೇಸ್ !
ಕಂಚಿನಡ್ಕಪದವು ತ್ಯಾಜ್ಯವಿಲೇವಾರಿ ಘಟಕಕ್ಕೆ ಸಂಬಂಧಿಸಿದಂತೆ ಪುರಸಭೆಯ ಇತಿಹಾಸದಲ್ಲಿ ಪರಿಸರ ಇಲಾಖೆ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಿದೆ ಎಂದು ಸದಸ್ಯ ಗೋವಿಂದಪ್ರಭು ಸಭೆಯ ಗಮನಕ್ಕೆ ತಂದರು.
ಪುರಭೆಯ ನೂನ್ಯತೆಯಿಂದಾಗಿ ಇಂತಹ ಕೇಸ್ ಎದುರಿಸುವಂತಾಗಿದೆ.ನನ್ನ 35 ವರ್ಷದ ಸದಸ್ಯತ್ವದ ಅವದ್ಇಯಲ್ಲಿ ಇಲಾಖೆಯೊಂದು ಮುಖ್ಯಾಧಿಕಾರಿಯವರ ವಿರುದ್ಧ ಕೇಸ್ ದಾಖಲಿಸಿರುವುದು ಇದೇ ಮೊದಲಾಗಿದೆ ಎಂದರು.ಅದು 2019 ರಲ್ಲಾದ ಪ್ರಕರಣ ಎಂದು ನಗುತ್ತಾ ಮುಖ್ಯಾಧಿಕಾರಿ ಸ್ವಾಮಿ ಉತ್ತರಿಸಿದರು.
ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ಉಪಸ್ಥಿತರಿದ್ದರು.ಸದಸ್ಯರಾದ ಗಂಗಾಧರ ಪೂಜಾರಿ,ವಿದ್ಯಾವತಿ ಪ್ರಮೋದ್ ಕುಮಾರ್, ಜೀನತ್,ಹಸೈನಾರ್, ಶಶಿಕಲಾ ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು.