ಬೆಳ್ತಂಗಡಿ: ಬೆಂಗಳೂರು ಉತ್ತರದ ಸೈಂಟ್ ಮೇರಿಸ್ ಪ್ರೌಢಶಾಲೆ ರುಕ್ಮಿಣಿ ನಗರ ಪೀಣ್ಯ,ಇಲ್ಲಿ ನಡೆದ 14ರ ವಯೋಮಾನದ ರಾಜ್ಯಮಟ್ಟದ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಮೈಸೂರು ವಿಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಂದಾರು ಇಲ್ಲಿಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಶ್ರಾವ್ಯಾ, ತನುಶ್ರೀ, ಸಿಂಚನಾ, ಯಕ್ಷಿತಾ ಹಾಗೂ ಪ್ರಣಾಮಿ ತಂಡವನ್ನು ಪ್ರತಿನಿಧಿಸಲಿದ್ದು ಇವರಿಗೆ ತರಬೇತಿಯನ್ನು ರಾಜ್ಯಮಟ್ಟದ ಅಕ್ಷರ ಸಿರಿ ಪ್ರಶಸ್ತಿ ವಿಜೇತ ಶಿಕ್ಷಕ ಪ್ರಶಾಂತ್ ಇವರು ನೀಡಿರುತ್ತಾರೆ. ಮುಖ್ಯೋಪಾಧ್ಯಾಯಿನಿ ಮಂಜ ನಾಯ್ಕ.ಸಿ , ಹಾಗೂ ತಂಡದ ಮೇಲ್ವಿಚಾರಕಿ ಭುವನೇಶ್ವರಿ ಸಹಕಾರ ನೀಡಿದ್ದಾರೆ.