ಮಂಗಳೂರು, ಡಿ.26: ನಮ್ಮ ಉಳಿವಿಗೆ ಪರಿಸರ ಸಂರಕ್ಷಣೆ ಜವಾಬ್ದಾರಿಯುತ ನಾಗರಿಕರ ಹೊಣೆಗಾರಿಕೆ ಯಾಗಿದೆ ಎಂದು ಖ್ಯಾತ ಮೊಡೆಲ್ ಮಿಲಿಂದ ಸೋಮನ್ ವಾಯುಮಾಲಿನ್ಯದ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರಂಭಿಸಿರುವ ಗ್ರೀನ್ ರೈಡ್ 2.0 ಸೈಕಲ್ ಯಾತ್ರೆ ಯ ಮೂಲಕ ಇಂದು ಮಂಗಳೂರು ತಲುಪಿದ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಮುಂಬಯಿಂದ ಡಿ.19 ಮುಂಬಯಿಂದ ಆರಂಭಿಸಿರುವ ಈ ಸೈಕಲ್ ಜಾಥ 8 ದಿನಗಳ ಬಳಿಕ 10 ನಗರಗಳ ಮೂಲಕ ಸೈಕಲ್ ನಲ್ಲಿ 1400 ಕಿ.ಮೀ. ಕ್ರಮಿಸಿ ಮಂಗಳೂರಿನಲ್ಲಿ ಗ್ರೀನ್ ರೈಡ್ ಯಾತ್ರೆ ಯನ್ನು ಸಮಾರೋಪಗಳಿಸಲು ಮಂಗಳೂರು ಬ್ಯಾಂಕ್ ಆಫ್ ಬರೋಡಾ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಮಾನವ ನಿರ್ಮಿತ ಚಟುವಟಿಕೆ ಗಳ ಕಾರಣ ಹವಾಮಾನ ದಲ್ಲಿ ವೇಗವಾದ ಬದಲಾವಣೆ ಆಗುತ್ತಿದೆ.ಈ ಕೃತಕ ಬದಲಾವಣೆಗೆ ಮಾನವನು ಹೊಂದಿಕೊಳ್ಳಲು ಸಾಧ್ಯ ವಾಗದ.ಆದುದರಿಂದ ನಮ್ಮ ರಕ್ಷಣೆ ಗಾಗಿ ಪರಿಸರದ ಹವಾಮಾನ ಬದಲಾವಣೆ ಯನ್ನು ಸಹಜ ಸ್ಥಿತಿಗೆ ತರಬೇಕಾಗಿದೆ ಎಂದು ಸೋಮನ್ ತಿಳಿಸಿದ್ದಾರೆ.
ಮಿಲಿಂದ ಸೋಮನ್ ತಿಳಿಸಿದ ಹೆಲ್ತ್ ಟಿಪ್ಸ್ :-1.ಜಿಮ್ ಗೆ ಹೋಗಿ ವ್ಯಾಯಾಮ ಮಾಡಬೇಕಾಗಿಲ್ಲ.ಮನೆಯಲ್ಲಿ 15 ನಿಮಿಷ ಪುಷ್ ಅಪ್ ಸಾಕು.
2.ಯೋಗ ,ಸೈಕಲ್ ತುಳಿಯುವುದು,ನಡಿಗೆ,ಸಹಜ ಆಹಾರ ಉತ್ತಮ ಆರೋಗ್ಯ ಕ್ಕೆ ಸಹಕಾರಿ.
3.ನನ್ನ ತಾಯಿ 60ನೆ ವಯಸ್ಸಿನ ಲ್ಲಿ ಟ್ರಕಿಂಗ್ ಆರಂಭಿಸಿ 80 ನೆ ವಯಸ್ಸಿನ ಲ್ಲೂ ಟ್ರಕಿಂಗ್ ಹೋಗ್ತಾರೆ.
4.ನಾನು ಶೂ ಧರಿಸದೆ ಬರಿಗಾಲಲ್ಲಿ ಮ್ಯಾರಾಥಾನ್ ನಲ್ಲಿ ಭಾಗವಹಿಸಿದೆ.
5.ಒಂಬತ್ತನೇ ವಯಸ್ಸಿನ ಲ್ಲಿ ಈಜಲು ಆರಂಭಿಸಿ 23ನೆ ವಯಸ್ಸಿನಲ್ಲಿ ರಾಷ್ಟ್ರೀಯ ಈಜು ಪಟುವಾದೆ.
6.ಅಗತ್ಯ ಇರುವಷ್ಟು ಮಾತ್ವ್ರ ತಿನ್ನಿ,ಖರೀದಿಸಿ, ಬಳಸಿ ಪರಿಸರ ಸಂರಕ್ಷಣೆ ಗೆ ಅದು ನೀವು ನೀಡುವ ಕೊಡುಗೆ ಯಾಗಡಹುದು.
7.ನನಗೆ ವ್ಯಾಯಾಮಕ್ಕೆ ತರಬೇತುದಾರರಿಲ್ಲ,ನಿರ್ದಿಷ್ಟ ಬಟ್ಟೆ ಧರಿಸ ಬೇಕೆಂಬ ನಿಯಮವಿಲ್ಲ.ಚಪ್ಪಲಿ ಧರಿಸಿ ಸೈಕಲ್ ತುಳಿಯುತ್ತೇನೆ. ಆದರೆ ಹೆಲ್ಮೆಟ್ ಧರಿಸಲು ಮರೆಯುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯದ ಸಮಸ್ಯೆಗಳು ಏರಿಕೆ ಯಾಗತೊಡಗಿದೆ ಈ ನಿಟ್ಟಿನಲ್ಲಿ ಮಂಗಳೂರು ನಾಗರೀಕರು ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದರು.
ಅವರು ನಂತೂರು ಮಾರ್ಗ ವಾಗಿ ಪಂಪ್ ವೆಲ್, ಮಹಾವೀರ ವೃತ್ತದ ಮೂಲಕ ಮಂಗಳೂರಿಗೆ ಆಗಮಿಸಿ ಬಾವುಟ ಗುಡ್ಡದ ಮೂಲಕ ಬ್ಯಾಂಕ್ ಆಫ್ ಬರೋಡಾದ ಮಂಗಳೂರು ರೀಜನಲ್ ಕಚೇರಿಗೆ ಆಗಮಿಸಿದರು ಈ ಸಂದರ್ಭದಲ್ಲಿ ಅವರನ್ನು
ಬ್ಯಾಂಕ್ ಆಫ್ ಬರೋಡಾದ ಮಹಾ ಪ್ರಬಂಧಕಿ ಹಾಗೂ ವಿಭಾಗೀಯ ಮುಖ್ಯಸ್ಥರಾದ ಗಾಯತ್ರಿ ಆರ್,ಬ್ಯಾಂಕ್ ನ ವಿಭಾಗೀಯ ಉಪ ಮುಖ್ಯ ಸ್ಥರಾದ ಗೋಪಾಲ ಕೃಷ್ಣ ,ಉಪ ಮಹಾ ಪ್ರಬಂಧಕ ವಿನಯ ಗುಪ್ತ ಸ್ವಾಗತಿಸಿದರು.ಡಾ.ಮುರಳೀ ಮೋಹನ್ ಚೂಂತಾರು ಉಪಸ್ಥಿತರಿ ದ್ದರು.ಬ್ಯಾಂಕ್ ಪ್ರಬಂಧಕ ಎಡ್ರಿಚ್ ಅಜಯ್ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು.