News Kannada
Wednesday, February 08 2023

ಮಂಗಳೂರು

ಮಂಗಳೂರು: ಜಿಪಿಎಲ್ ಉತ್ಸವ – 2023 ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಮಹೇಂದ್ರ ಸಿಂಗ್ ಧೋನಿ

Photo Credit : News Kannada

ಮಂಗಳೂರು: ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಬಹುನಿರೀಕ್ಷಿತ ಜಿಪಿಎಲ್ ಉತ್ಸವ – 2023 ಇದರ ಆಮಂತ್ರಣ ಪತ್ರಿಕೆಯನ್ನು ಭಾರತೀಯ ಕ್ರಿಕೆಟ್ ತಂಡ ಯಶಸ್ವಿ ನಾಯಕ ಎಂದೇ ಕರೆಸಿಕೊಂಡಿರುವ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿಯವರು ಮಂಗಳೂರಿನಲ್ಲಿ ಶನಿವಾರ ಬಿಡುಗಡೆಗೊಳಿಸಿದರು.

ಇದೇ ಸಂದರ್ಭದಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕರೂ, ಜಿಪಿಎಲ್ ಉತ್ಸವದ ಪ್ರಮುಖರೂ ಆದ ವೇದವ್ಯಾಸ ಕಾಮತ್ ಅವರು ಫೆಬ್ರವರಿ 10, 11, 12 ರಂದು ಅಡ್ಯಾರ್ ನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಹಚ್ಚಹಸುರಿನ ಸುಂದರ ಕ್ರೀಡಾಂಗಣದಲ್ಲಿ ನಡೆಯುವ ಜಿಪಿಎಲ್ ಉತ್ಸವಕ್ಕೆ ಧೋನಿಯವರನ್ನು ಆಮಂತ್ರಿಸಿದರು. ಜಿಪಿಎಲ್ ಟ್ರೋಫಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಧೋನಿಯವರು ಭಾಗವಹಿಸುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ವೇದವ್ಯಾಸ ಕಾಮತ್ ಅವರೊಂದಿಗೆ ಜಿಪಿಎಲ್ ಉತ್ಸವದ ಆಯೋಜಕರಾದ ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್, ಕೊಂಚಾಡಿ ಗುರುಪ್ರಸಾದ್ ಕಾಮತ್, ಕಾನೆಂಗಾಡ್ ಗುರುಪ್ರಸಾದ್ ಕಾಮತ್ ಉಪಸ್ಥಿತರಿದ್ದರು.

7 ನೇ ವರ್ಷದ ಜಿಪಿಎಲ್ ಉತ್ಸವ- 2023 ಈ ಬಾರಿಯೂ ವಿಶೇಷ ಹಬ್ಬದಂತೆ ಆಯೋಜಿಸಲಾಗುತ್ತಿದ್ದು, ಕ್ರಿಕೆಟ್ ಪಂದ್ಯಾಟಗಳೊಂದಿಗೆ ಹೆಲಿಕಾಪ್ಟರ್ ರೌಂಡ್, ಬೋಟಿಂಗ್, ಕಿಡ್ಸ್ ಝೋನ್, ಮೂರು ಮುತ್ತು ತಂಡದಿಂದ ನಾಟಕ ಪ್ರದರ್ಶನ, ಬೊಂಬೆಯಾಟ, ವಾಯ್ಸ್ ಆಫ್ ಜಿಎಸ್ ಬಿ ಅಡಿಶನ್, ವೆರೈಟಿ ಎಂಟರ್ ಟೇನ್ ಮೆಂಟ್, ಫುಡ್ ಕೋರ್ಟ್ ಸಹಿತ ಹಲವಾರು ಆಕರ್ಷಣೆಗಳನ್ನು ಒಳಗೊಂಡಿದೆ.

See also  ಕೊಕ್ಕಡ:  ಗೋಶಾಲೆಗೆ ಸಚಿವ ಶಂಕರ್ ಪಾಟೀಲ್ ಭೇಟಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು