News Kannada
Tuesday, February 07 2023

ಮಂಗಳೂರು

ರೋಹನ್ ಸಿಟಿಯ ಅಪಾರ್ಟ್ಮೆಂಟ್ ಅದೃಷ್ಟಶಾಲಿ ಖರೀದಿದಾರನಿಗೆ, ಮರ್ಸಿಡೆಜ್ ಬೆಂಝ್ ಎ ಕ್ಲಾಸ್ ಲಿಮೋಸಿನ್

Smart City’s another Identity – Rohan City
Photo Credit : News Kannada

ಮಂಗಳೂರು: ಕಳೆದ 29 ವರ್ಷಗಳಿಂದ ಮಂಗಳೂರು ಆಸುಪಾಸಿನಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ರೋಹನ್ ಕಾರ್ಪೊರೇಶನ್, ಬಿಜೈ ಮುಖ್ಯ ರಸ್ತೆಯಲ್ಲಿ, ಅತ್ಯಾಧುನಿಕ ಸೌಕರ್ಯಗಳ ‘ರೋಹನ್ ಸಿಟಿ’ ಸಮುಚ್ಛಯವನ್ನು ಅಭಿವೃದ್ದಿಪಡಿಸುತ್ತಿದೆ. ಸಹಕಾರಿ ರಂಗದ ಭೀಷ್ಮ ಎಂದೇ ಹೆಸರುವಾಸಿಯಾಗಿರುವ ‘ಸಹಕಾರ ರತ್ನ’ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರು ಈ ಸಮುಚ್ಚಯದ ಸಹ – ಪ್ರವರ್ತಕರಾಗಿದ್ದಾರೆ. ಪ್ರಾಥಮಿಕ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು ಇದೀಗ ಬುಕ್ಕಿಂಗ್‌ಗೆ ವಿದ್ಯುಕ್ತ ಚಾಲನೆಯನ್ನು ನೀಡಲಾಗುತ್ತಿದೆ.

ರೋಹನ್ ನಗರದಲ್ಲಿ ಸೀಮಿತ ಅವಧಿಗೆ ಫ್ಲ್ಯಾಟ್ ಗಳನ್ನು ಖರೀದಿಸುವ ಜನರು ಲಕ್ಕಿ ಡ್ರಾಗೆ ಅರ್ಹರಾಗಿರುತ್ತಾರೆ ಎಂದು ರೋಹನ್ ಕಾರ್ಪೊರೇಷನ್ ಘೋಷಿಸಿದೆ, ವಿಜೇತರು ಮರ್ಸೆಡೆಜ್ ಬೆಂಝ್ ಎ ಕ್ಲಾಸ್ ಲಿಮೋಸಿನ್ ಅನ್ನು ಪಡೆದುಕೊಳ್ಳುತ್ತಾರೆ.

ಬಿಜೈ ಮುಖ್ಯ ರಸ್ತೆ ಪ್ರದೇಶ, ಸ್ಮಾರ್ಟ್ ಸಿಟಿಯ ವ್ಯಾಪ್ತಿಗೆ ಬರುವ ಮಂಗಳೂರು ಮಹಾನಗರಪಾಲಿಕೆಯ ಹೃದಯ ಭಾಗವಾಗಿದ್ದು, ಸಕಲ ಸೌಕರ್ಯಗಳೊಂದಿಗೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಆಧುನಿಕ ವೈದ್ಯಕೀಯ ಸೇವೆ ನೀಡುವ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಸೂಪರ್ ಮಾರ್ಕೆಟ್, ಮಲ್ಟಿಫ್ಲೆಕ್ಸ್ ಇವೆಲ್ಲವೂ ಕೂಗಳತೆ ದೂರದಲ್ಲಿವೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕೇವಲ 10 ಕಿಮೀ ಅಂತರದಲ್ಲಿದ್ದು, ಉತ್ತಮ ರಸ್ತೆಯ ಸಂಪರ್ಕ ಹೊಂದಿದೆ.

3.5 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ರೋಹನ್ ಸಿಟಿ – ರೋಹನ್ ಕಾರ್ಪೊರೇಶನ್‌ನ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಆತ್ಯಾಧುನಿಕ ಭದ್ರತಾ ವ್ಯವಸ್ಥೆ, ನಿರಂತರ ವಿದ್ಯುತ್ ಮತ್ತು ನೀರು ಸರಬರಾಜು, ಯಾಂತೀಕೃತ ವಾಹನ ನಿಲುಗಡೆ, ಹಸಿರುವನ ಮತ್ತು ವಾಯುವಿಹಾರಕ್ಕೆ ಕಾಲುದಾರಿಯನ್ನು ಹೊಂದಿದೆ. ವಸತಿಗಾಗಿ 6 ಲಕ್ಷ ಚದರ ಅಡಿ, ವಾಣಿಜ್ಯ ಮಳಿಗೆಗಳಿಗಾಗಿ 2 ಲಕ್ಷ ಚದರ ಅಡಿಯನ್ನು ಕಾಯ್ದಿರಿಸಲಾಗಿದೆ. ವಿವಿಧ ವಿಸ್ತೀರ್ಣ ಮತ್ತು ವಿನ್ಯಾಸದಲ್ಲಿ ಒಟ್ಟು 546, ಸಿಂಗಲ್, ಡಬಲ್ ಮತ್ತು ತ್ರೀ ಬೆಡ್‌ರೂಂ ಫ್ಲ್ಯಾಟ್‌ಗಳು ಹಾಗೂ 284 ವಾಣಿಜ್ಯ ಮಳಿಗೆಗಳು ಮಾರಾಟಕ್ಕಿವೆ.

ವಾಣಿಜ್ಯ ಮಳಿಗೆಯಲ್ಲಿ ಎರಡು ಜತೆ ಸರ್ವಿಸ್ ಎಸ್ಕಲೇಟರ್, 6 ಹೈ ಸ್ಪೀಡ್ ಸ್ವಯಂಚಾಲಿತ ಸರ್ವಿಸ್ ಮತ್ತು ಪ್ಯಾಸೆಂಜರ್ ಲಿಫ್ಟ್, ಎಲೆಕ್ಟಿçಕ್ ಕಾರ್ ಚಾರ್ಜಿಂಗ್ ಪಾಯಿಂಟ್ಸ್, ಸಾಕಷ್ಟು ಫಲಕ ಸ್ಥಳಗಳು, ಎರಡು ಹಂತಗಳಲ್ಲಿ 35000 ಚದರ ಅಡಿ ಹೈಪರ್ ಮಾರುಕಟ್ಟೆ, ಚಿಲ್ಲರೆ ಅಂಗಡಿಗಳು, ಸಗಟು ಅಂಗಡಿಗಳು, ಕಾರ್ಪೊರೇಟ್ ಹಾಗೂ ಇತರ ಕಚೇರಿಗಳು, ಸುರಕ್ಷಿತ ಮಕ್ಕಳ ಆಟದ ಸ್ಥಳ, ಹಾಗೂ ಸ್ವಯಂಚಾಲಿತ ಚೇಂಜ್ ಓವರ್‌ನೊಂದಿಗೆ 100% ಡೀಸೆಲ್ ಜನರೇಟರ್ ಪವರ್ ಬ್ಯಾಕಪ್ ಮತ್ತು ಒಟ್ಟು 1486 ಚತುಶ್ಚಕ್ರ ಮತ್ತು 395 ದ್ವಿಚಕ್ರ ಯಾಂತೀಕೃತ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದೆ.

ಮಂಗಳೂರು ಸ್ಮಾರ್ಟ್ ಸಿಟಿಯ ಪ್ರಪ್ರಥಮ ಅಂತರಾಷ್ಟ್ರೀಯ ದರ್ಜೆಯ ಸಿಟಿ ಕ್ಲಬ್ ರೋಹನ್ ಸಿಟಿಯ ಪ್ರಧಾನ ಆಕರ್ಷಣೆಯಾಗಲಿದೆ. ವಿಶಾಲ ವಿಶ್ರಾಂತಿ ಕೊಠಡಿಗಳು, ಸ್ವಾಗತ ಆವರಣ, ವಿದ್ಯಾರ್ಥಿಗಳ ಚಟುವಟಿಕೆ ಕೊಠಡಿ, ಅತ್ಯಾಧುನಿಕ ಗ್ರಂಥಾಲಯ, ಬಾರ್, ಕಾಫಿ ಶಾಪ್, ಫೈನ್ ಡೈನ್ ಫ್ಯಾಮಿಲಿ ರೆಸ್ಟೋರೆಂಟ್, ಜಾಗಿಂಗ್ ಟ್ರ್ಯಾಕ್, ಸೀನಿಯರ್ ಸಿಟಿಜನ್ ಪಾರ್ಕ್, ಈಜುಕೊಳ, ಸ್ನೂಕರ್ ಟೇಬಲ್, ಟೇಬಲ್ ಟೆನ್ನಿಸ್, ವಿಡಿಯೋ ಗೇಮ್ಸ್ ವಲಯ, 3 ಡಿ ಥಿಯೇಟರ್, ಸುಸಜ್ಜಿತ ಜಿಮ್, ಸ್ಪಾ, ಯುನಿಸೆಕ್ಸ್ ಸಲೂನ್, ಏರೋಬಿಕ್ ಹಾಗೂ ಯೋಗ ಕೊಠಡಿ, ಕಾನ್ಫರೆನ್ಸ್ ಹಾಲ್, ವಿವಿದೊದ್ದೇಶ ಹಾಲ್, ಸಭಾಂಗಣ, ಒಳಾಂಗಣ ಕಾರ್ಡ್ ರೂಮ್, ಬೋರ್ಡ್ ರೂಮ್ ಮತ್ತಿತರ ವೈಶಿಷ್ಟ್ಯಗಳನ್ನೊಳಗೊಂಡ ಸಂಪೂರ್ಣ ಹವಾನಿಯಂತ್ರಿತ ಸಿಟಿ ಕ್ಲಬ್, 365 ದಿನಗಳು, 24X7 ತೆರೆದಿರುತ್ತದೆ. ಸಮುಚ್ಛಯಕ್ಕೆ ತನ್ನದೇ ಮಳೆ ನೀರು ಕೊಯ್ಲು ವ್ಯವಸ್ಥೆ, ಘನ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆ, ಸೌರಶಕ್ತಿ ವ್ಯವಸ್ಥೆ, ವಾಹನ ಚಾರ್ಜಿಂಗ್ ವ್ಯವಸ್ಥೆ ಮತ್ತು ಅಗ್ನಿಶಾಮಕ ವ್ಯವಸ್ಥೆ ಇರಲಿದೆ.

See also  ಉಡುಪಿ: ಕ್ರೀಡಾ ಕೂಟದಲ್ಲಿ ಅಝಾನ್ ಪ್ರಾರ್ಥನೆ, ಹಿಂದೂ ಸಂಘಟನೆಗಳ ಪ್ರತಿಭಟನೆ

ರೋಹನ್ ಸಿಟಿಗೆ ರೇರಾ (ಖಇಖಂ) ಹಾಗೂ ಕ್ರೆಡಾಯ್ (ಅಖಇಆಂI) ಮಾನ್ಯತೆಯಿದ್ದು, ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳ ಅನುಮೋದನೆ ಇರುವುದರಿಂದ ಸಾಲಸೌಲಭ್ಯ ಗ್ರಾಹಕರಿಗೆ ಸುಲಭವಾಗಲಿದೆ. ಜತೆಗೆ ರೂ. 31,000/- (ಶರತ್ತುಗಳು ಅನ್ವಯ) ಮಾಸಿಕ ಕಂತಿನಲ್ಲಿ ಫ್ಲ್ಯಾಟ್ ಖರೀದಿಸಲು ನಿರ್ಮಾಣ ಸಂಸ್ಥೆ ವತಿಯಿಂದ ವಿಶೇಷ ಯೋಜನೆ ರೂಪಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ರೋಹನ್ ಕಾರ್ಪೊರೇಶನ್, ಮುಖ್ಯ ರಸ್ತೆ, ಬಿಜೈ, ಮಂಗಳೂರು ಮಾರಾಟ ಕಚೇರಿಗೆ ಭೇಟಿ ನೀಡಬಹುದು ಅಥವಾ ಅಂತರ್‌ಜಾಲತಾಣ rohancorporation.in ಅಥವಾ ದೂರವಾಣಿ ಸಂಖ್ಯೆ 9845490100 ಸಂಪರ್ಕಿಸಬಹುದಾಗಿದೆ.

ರೋಹನ್ ಕಾರ್ಪೊರೇಶನ್
ಕಳೆದ 29 ವರ್ಷಗಳಿಂದ, ಯುವ ಉದ್ಯಮಿ  ರೋಹನ್ ಮೊಂತೇರೊ ಅವರ ನಾಯಕತ್ವದಲ್ಲಿ, ರೋಹನ್ ಕಾರ್ಪೊರೇಶನ್ ನಿರ್ಮಾಣ ಸಂಸ್ಥೆ ಮಂಗಳೂರು ನಗರದಾದ್ಯಂತ ಬೃಹತ್ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ ಮನೆಮಾತಾಗಿದೆ. ಈ ವರೆಗೆ 25 ಕ್ಕೂ ಹೆಚ್ಚು ಪ್ರತಿಷ್ಠಿತ ನಿರ್ಮಾಣಗಳೊಂದಿಗೆ, 2000 ಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿರುವ ಶ್ರೇಯಸ್ಸು ರೋಹನ್ ಮೊಂತೇರೊ ಅವರಿಗೆ ಸಲ್ಲುತ್ತದೆ. ಪ್ರಸ್ತುತ ಪಕ್ಷಿಕೆರೆಯಲ್ಲಿ ರೋಹನ್ ಎಸ್ಟೇಟ್, ಕುಲಶೇಖರ-ಬೈತುರ್ಲಿಯಲ್ಲಿ ರೋಹನ್ ಎಸ್ಟೇಟ್, ಮಂಗಳೂರು-ಬೆಂಗಳೂರು ಹೆದ್ದಾರಿಯ ಪಂಪ್‌ವೆಲ್ ಬಳಿಯ ವಸತಿ ಮತ್ತು ವಾಣಿಜ್ಯ ಸಂಕೀರ್ಣ ರೋಹನ್ ಸ್ಕ್ವೇರ್ರ್ ಮುಂತಾದ ಯೋಜನೆಗಳಲ್ಲಿ ಕೆಲವೇ ಕೆಲವು ಫ್ಲ್ಯಾಟ್‌ಗಳು, ಮಳಿಗೆಗಳು, ಸಂಪೂರ್ಣ ಸುಸಜ್ಜಿತ ನಿವೇಶನಗಳು ಮಾರಾಟಕ್ಕಿವೆ.

ಸುದ್ದಿಗೋಷ್ಠಿಯಲ್ಲಿ ರೋಹನ್ ಕಾರ್ಪೊರೇಷನ್ ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೇರೊ, ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಪುತ್ರ ಮೇಘರಾಜ್, ಸಹ ಪ್ರವರ್ತಕ, ಹಿತೈಷಿ ಆಲ್ವಿನ್ ಡಿಸೋಜಾ, ರಾಹುಲ್ ಅಡ್ವರ್ಟೈಸರ್ಸ್ ನ ಟೈಟಸ್ ನೊರೊನ್ಹಾ ಉಪಸ್ಥಿತರಿದ್ದರು. ಸಾಹಿಲ್ ಜಹೀರ್ ಈ ಕಾರ್ಯಕ್ರಮವನ್ನು ಸಂಯೋಜಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು