News Kannada
Tuesday, January 31 2023

ಮಂಗಳೂರು

ಮಂಗಳೂರು: ಕರ್ಣಾಟಕ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಶೇಖರ್‌ರಾವ್‌ ನೇಮಕ

Mangaluru: Shekhar Rao appointed as executive director of Karnataka Bank
Photo Credit : News Kannada

ಮಂಗಳೂರು: ದೇಶದ ಖಾಸಗಿ ರಂಗದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾಗಿರುವಕರ್ಣಾಟಕ ಬ್ಯಾಂಕ್, ಶೇಖರ್‌ರಾವ್‌ರವರನ್ನು ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ (ಹೆಚ್ಚುವರಿ ನಿರ್ದೇಶಕರ ನೆಲೆಯಲ್ಲಿ) ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅಧಿಕಾರಾವಧಿಗೆ ನೇಮಕ ಮಾಡಿದೆ. ಜನವರಿ13ರಂದು ಜರಗಿದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಈ ನೇಮಕಾತಿಗೆ ಮಾನ್ಯತೆ ನೀಡಲಾಯಿತು.

ಶೇಖರ್‌ರಾವ್‌ ಅವರು ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ, ವ್ಯವಹಾರ ನಿರ್ವಹಣೆ, ಕಾರ್ಯತಂತ್ರಗಳಂತಹ ವಿವಿಧ ಕ್ಷೇತ್ರಗಳಲ್ಲಿ ಸುಮಾರುಇಪ್ಪತ್ತೊಂಭತ್ತಕ್ಕೂಅಧಿಕ ವರ್ಷಗಳ ಅನುಭವವನ್ನು ಹೊಂದಿದ್ದು, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿ ಸುಮಾರು19 ವರ್ಷಗಳ ಸುದೀರ್ಘಅನುಭವ ಹೊಂದಿರುತ್ತಾರೆ.

ಅದಲ್ಲದೇ, ಕೇಂದ್ರೀಕೃತ ಕಾರ್ಯಾಚರಣೆ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ ವ್ಯವಹಾರ ತಂತ್ರಗಳು ಮತ್ತು ಬ್ಯಾಂಕಿಂಗ್‌ ಕ್ಷೇತ್ರದಲ್ಲಿನಯೋಜನೆಗಳಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡುವುದು, ಬ್ಯಾಂಕ್‌ಗಳ ಡಿಜಿಟಲ್ ಚಾನೆಲ್‌ಗಳ ನಿರ್ವಹಣೆಹೊಸ ವ್ಯವಹಾರಗಳ ನಿರ್ವಹಣೆ, ಡಿಸ್ಟ್ರಿಬ್ಯೂಷನ್ ಚಾನೆಲ್‌ಗಳ ವಿಸ್ತರಣೆ, ಶಾಖೆಗಳ ವಿಸ್ತರಣೆ ಹಾಗೂ ನಿರ್ವಹಣೆ, ಶಾಖೆಗಳು ಮತ್ತುದೊಡ್ಡ ಮಟ್ಟದ ವ್ಯಾಪಾರ ಘಟಕಗಳ ನಿರ್ವಹಣೆ ಮತ್ತು ಫಿನ್ಟೆಕ್ ಸ್ಟಾರ್ಟ್-ಅಪ್‌ನ ಸ್ಠಾಪನೆ ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ಪರಿಣತಿ ಹೊಂದಿರುತ್ತಾರೆ.

ಈ ಮುಂಚೆ ಅವರು ಏಪ್ರಿಲ್ 2020ರಿಂದ ಫಿನ್ಟೆಕ್‘ಸ್ಯಾವಿ ಇಂಡಿಯಾದ’ ಸಹಸಂಸ್ಥಾಪಕರಾಗಿ ಮತ್ತು ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು ಸುಮಾರು ಆರು ವರ್ಷಗಳ ಕಾಲ ಸಿಎಸ್‌ಬಿ ಬ್ಯಾಂಕ್ ಲಿಮಿಟೆಡ್‌ನಕಾರ್ಯಾಚರಣೆ ಮತ್ತು ಐಟಿ ವಿಭಾಗದ ಮುಖ್ಯಸ್ಥರಾಗಿ, ಆರ್‌ಬಿಎಲ್ ಬ್ಯಾಂಕ್ ಲಿಮಿಟೆಡ್, ಐಎನ್‌ಜಿ ವೈಶ್ಯ ಬ್ಯಾಂಕ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್ ಲಿಮಿಟೆಡ್, ಏಷ್ಯನ್‌ ಪೇಂಟ್ಸ್ ಇಂಡಿಯಾ ಲಿಮಿಟೆಡ್, ಗುಡ್ಲಾಸ್ ನೆರೋಲಾಕ್ ಪೇಂಟ್ಸ್ ಲಿಮಿಟೆಡ್ (ಈಗ ಕನ್ಸಾಯ್ ನೆರೋಲಾಕ್ ಪೇಂಟ್ಸ್ ಲಿಮಿಟೆಡ್) ಮುಂತಾದ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದಬ್ಯಾಂಕಿನ ಮ್ಯಾನೇಜಿಂಗ್‌ ಡೈರೆಕ್ಟರ್ ಹಾಗೂ ಸಿಇಓ ಮಹಾಬಲೇಶ್ವರ ಎಂ.ಎಸ್. ಅವರು“ನಮ್ಮ ನಿರ್ದೇಶಕರ ಮಂಡಳಿಗೆ  ಶೇಖರ್‌ರಾವ್‌ ಅವರನ್ನು ಸ್ವಾಗತಿಸಲು ಸಂತೋಷ ಪಡುತ್ತೇನೆ. ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ, ಫಿನ್ಟೆಕ್‌ನಂತಹ ಅನೇಕ ಕ್ಷೇತ್ರಗಳಲ್ಲಿ ಅಪಾರ ಅನುಭವವನ್ನು ಪಡೆದಿರುವ ಅವರು ಕರ್ಣಾಟಕ ಬ್ಯಾಂಕಿಗೆ ಉತ್ತಮ ಕೊಡುಗೆ ನೀಡಲಿದ್ದಾರೆ.”ಎಂದು ಶುಭ ಹಾರೈಸಿದರು.

See also  ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2,678 ಜನರಲ್ಲಿ ಕೊರೊನಾ ಸೋಂಕು ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು