News Kannada
Friday, January 27 2023

ಮಂಗಳೂರು

ಮಂಗಳೂರು ನಗರವನ್ನು ಮಾದರಿ ನಗರವಾಗಿ ಗುರುತಿಸುವಂತೆ ಮಾಡುವ ಗುರಿಯಿದೆ- ಶಾಸಕ ಕಾಮತ್

Aim is to make Mangaluru city a model city: MLA Kamath
Photo Credit : News Kannada

ಮಂಗಳೂರು: ಮಂಗಳೂರು  ನಗರವು ದೇಶದ ಇತರೆ ನಗರಗಳಿಂತ ಭಿನ್ನವಾಗಿ ಸ್ಮಾರ್ಟ್ ನಗರವಾಗಿ ಬೆಳೆಯುತಿದ್ದು, ಅದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸುವ ಮೂಲಕ ಮಾದರಿ ನಗರವಾಗಿ ಗುರುತಿಸುವಂತೆ ಮಾಡುವ ಗುರಿಯಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಹೈೂಗೆ ಬಜಾರ್ ವಾರ್ಡಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ 8.10 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಂಗಳೂರಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕಾರ್ಯ ನಿರ್ವಹಿಸುತಿದ್ದು, ರಾಜಕೀಯ ರಹಿತವಾಗಿ ನಗರದ ಉನ್ನತೀಕರಣಕ್ಕೆ ಶ್ರಮಿಸಲಾಗುತ್ತಿದೆ. ಮೂಲಭೂತ ಸೌಕರ್ಯಗಳ ಜೊತೆಯಲ್ಲಿ ಜನೋಪಯೋಗಿ ಯೋಜನೆಗಳನ್ನೂ ನೀಡುವ ಕೆಲಸವನ್ನೂ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆಯಡಿ 4 ಕೋಟಿ ವೆಚ್ಚದಲ್ಲಿ ಬೋಳಾರ ಪೋಸ್ಟ್ ಆಫೀಸಿನಿಂದ ಮುಳಿಹಿತ್ಲು ಕಲ್ಲುರ್ಟಿ ದೈವಸ್ಥಾನದ ವರೆಗಿನ ರಸ್ತೆ, 3 ಕೋಟಿ ರೂಪಾಯಿ ವೆಚ್ಚದಲ್ಲಿ ಮುಳಿಹಿತ್ಲು ಕ್ರಾಸ್ ರೋಡಿನಿಂದ ಜ್ಯೋತಿ ಗ್ಯಾರೇಜ್ ಸಂಪರ್ಕಿಸುವ ರಸ್ತೆ ಹಾಗೂ 1.10 ಕೋಟಿ ರೂಪಾಯಿ ವೆಚ್ಚದಲ್ಲಿ ಬೋಳಾರ ಫೆರಿ ರಸ್ತೆಯಿಂದ ಪ್ರಕಾಶ್ ಗ್ಯಾರೇಜ್ ತನಕ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಹೇಳಿದ್ದಾರೆ‌.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಪಾಲಿಕೆ ಮುಖ್ಯ ಸಚೇತಕರಾದ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಕಿಶೋರ್ ಕೊಟ್ಟಾರಿ, ಪಾಲಿಕೆ ಸದಸ್ಯರು ಹಾಗೂ ಸ್ಮಾರ್ಟ್ ಸಿಟಿ ನಿರ್ದೇಶಕರಾದ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಸದಸ್ಯರಾದ ರೇವತಿ ಶೆಟ್ಟಿ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಮುಖಂಡರಾದ ದೀಪಕ್ ಪೈ, ನಿತಿನ್ ಕುಮಾರ್, ವಿನೋದ್ ಮೆಂಡನ್, ಉಮಾನಾಥ್, ವಿನೋದ್ ಮೆಂಡನ್, ಅಶೋಕ್ ಕುಮಾರ್, ಹೇಮ, ಗಿರೀಶ್, ಅಮಿತ್, ಗುರುಪ್ರಸಾದ್, ವಸಂತ್ ಜೆ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

See also  ಅಮೆರಿಕಾದ ಉಡುಪಿ ಪುತ್ತಿಗೆ ಮಠದ ವೆಂಕಟೇಶ ದೇವರಿಗೆ ವಜ್ರ ಖಚಿತ ಬಂಗಾರದ ಕಿರೀಟ ಸಮರ್ಪಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು