News Kannada
Tuesday, June 06 2023
ಮಂಗಳೂರು

ಬಂಟ್ವಾಳ: “ಗ್ರಾಮ ವಿಕಾಸ ಯಾತ್ರೆ-ಗ್ರಾಮದೆಡೆಗೆ ಶಾಸಕರ ನಡಿಗೆ” ಕಾರ್ಯಕ್ರಮ

Bantwal: "Grama Vikasa Yatra - MLA's Walk towards The Village" programme
Photo Credit : News Kannada

ಬಂಟ್ವಾಳ: ಉತ್ತಮ ಯೋಚನೆಗಿಂತ ಕೆಟ್ಟ ಯೋಚನೆಗಳೇ ರಾಜಕೀಯದಲ್ಲಿ ಹೆಚ್ಚು. ಸತ್ಯಕ್ಕಿಂತ ಸುಳ್ಳು ಆಶ್ವಾಸನಗಳೇ ಇರುತ್ತದೆ, ಆದರೆ ಬಂಟ್ವಾಳ ಒಂದು ವಿಚಿತ್ರ ಕ್ಷೇತ್ರ. ನವ ಬಂಟ್ವಾಳದ ನಿರ್ಮಾಣ ರಾಜೇಶ್ ನಾಯ್ಕ್ ರಿಂದಾಗಿದೆ‌. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದಾಗ ಸಾಮರಸ್ಯ ನೆಲೆಯೂರಲು ಸಾಧ್ಯ , 1.0 ಇದ್ದ ಬಂಟ್ವಾಳವನ್ನು 2.0 ಮಾಡಿ ತೋರಿಸಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.

ಬಂಟ್ವಾಳದ ಬಸ್ತಿಪಡ್ಪು ಮೈದಾನದಲ್ಲಿ ಶುಕ್ರವಾರ ಸಂಜೆ ಶಾಸಕ ರಾಜೇಶ್ ನಾಯ್ಕ್ ಅವರ “ಗ್ರಾಮ ವಿಕಾಸ ಯಾತ್ರೆ-ಗ್ರಾಮದೆಡೆಗೆ ಶಾಸಕರ ನಡಿಗೆ” ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿದರು.

ಕೃಷಿಕರನ್ನು ಮೇಲೆಕ್ಕೆತ್ತುವ ಕಾರ್ಯ ಕೇಂದ್ರ, ರಾಜ್ಯ ಸರಕಾರದಿಂದ ಆಗುತ್ತಿದೆ. ಪಕ್ಷ, ನಾಯಕರ ಮೇಲೆ ನಂಬಿಕೆ ಅಗತ್ಯವಿದೆ ಎಂದ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳದಲ್ಲಿ ಬಿಜೆಪಿಯ ಗೆಲುವು ನಿಶ್ಚಿತ. ಆದರೆ ಮತವನ್ನು ಇಮ್ಮಡಿ ಗೊಳಿಸುವ ಗ್ರಾಮ ವಿಕಾಸ ಯಾತ್ರೆ ಅಗತ್ಯವಿದೆ. ಪಾದಯಾತ್ರೆ ಯ ಮೂಲಕ ಶಾಸಕರು ತಾನು ನಿರ್ವಹಿಸಿದ ಅಭಿವೃದ್ಧಿ ಯ ರಿಪೋರ್ಟ್ ಕಾರ್ಡ್ ಅನ್ನು ಗ್ರಾಮಗ್ರಾಮಗಳಿಗೆ ತಲುಪಿಸಿದ್ದಾರೆ, ಅದು ಮನೆ ಮನಗಳಿಗೆ ತಲುಪಬೇಕಿದೆ ಎಂದರು.

ಕಾಂಗ್ರೆಸ್ ನಿಂದ ಸುಳ್ಳಿನ ಕಂತೆ:
ಮಾತನಾಡುವುದಕ್ಕಿಂತ ಅದನ್ನು ಮಾಡಿತೋರಿಸುವ ತಾಕತ್ತು ನಮ್ಮಲ್ಲಿರಬೇಕು.ಕೆಲಸ ಮಾಡಿ ಹೇಳುವ ಪದ್ದತಿ ಬಿಜೆಪಿಯದ್ದಾಗಿದೆ ಎಂದ ಅಣ್ಣಾಮಲೈ ಕಾಂಗ್ರೆಸ್ ನಿಂದ ಸುಳ್ಳಿನ ಕಂತೆಯನ್ನು ಹೇಳುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸವಾಗುತ್ತಿದೆ.

ಎರಡು ಸಾವಿರ ರೂಪಾಯಿ ಯಾವುದೇ ಕಾರಣಕ್ಕೂ ಜನರಿಗೆ ಕೊಡಲು ಸಾಧ್ಯವಿಲ್ಲ. ಯುವಜನತೆ ಎಚ್ಚೆತ್ತುಕೊಂಡು ಕೆಲಸಮಾಡಬೇಕಿದೆ ಎಂದರು.

ನಾವು ಒಟ್ಟು ಸೇರಿ ಅಭಿವೃದ್ಧಿಯ ಕಡೆ ನಡೆಯಬೇಕು. ಪ್ರಧಾನಿ ನರೇಂದ್ರ ಮೋದೀಜಿಯವರ ನಿರಂತರ ಪ್ರಯತ್ನದ ಫಲವಾಗಿ ನಾವಿಂದು ಕೊರೋನದಿಂದ ಮುಕ್ತರಾಗಿದ್ದೇವೆ. ರಾಜಕೀಯ ಶಿಕ್ಷಣ ಎಲ್ಲರಿಗೂ ಬೇಕಾಗಿದೆ.

ಪಾರ್ಟಿ ಇನ್ನಷ್ಟು ಆಳವಾಗಿ ಕೆಲಸ ಮಾಡಲು ಎಲ್ಲರ ಸಹಕಾರ ಅಗತ್ಯವಿದೆ. ಕಾಂಗ್ರೆಸ್ ಗೆ ಕರ್ನಾಟಕದ ಮೇಲೆ ಕಣ್ಣಿದ್ದು, ಕಾಂಗ್ರೆಸ್ ಕಲ್ಪನೆ ವಿಚಿತ್ರವಾಗಿದ್ದು, ಕಾಂಗ್ರೆಸ್ ಬಗ್ಗೆ ನಮಗೆ ಭಯಬೇಡ, ಇಲ್ಲಿನ ಜನರಿಗೆ ವಿಕಾಸ ಬೇಕು. ಬ್ರಿಟಿಷ್ ಆಳ್ವಿಕೆಯ ತರಹದ ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಅಣ್ಣಾಮಲೈರವರು ಹೇಳಿದರು‌.

ನಕಲಿ ಹಿಂದುಗಳು ಬರುತ್ತಿದ್ದಾರೆ : ಸಿ.ಟಿ.ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿರವರು ಮಾತನಾಡಿ,ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆ ಪ್ರಜೆಗಳ ಧ್ವನಿ ಕೇಳುವುದಕ್ಕಾಗಿ ಆಗಿರಲಿಲ್ಲ.ಬದಲಾಗಿ ಈ ಯಾತ್ರೆ ಬಿಜೆಪಿಗರನ್ನು ಹಾಗೂ ಪ್ರಧಾನಿ ಮೋದಿ ಬೈಯ್ಯುವ ಯಾತ್ರೆಯಾಗಿತ್ತು ಎಂದರು.

ಕರಾವಳಿಗರ ನೆಮ್ಮದಿಗೆ ಕಾಂಗ್ರೆಸ್ ಕೊಳ್ಳಿ ಇಟ್ಟಿದ್ದು, ನೈಜ ಹಿಂದೂಗಳು ದೈವ ವಿರೋಧಿಗಳು, ಕುಂಕುಮ ಅಳಿಸೋರಾ ಎಂದು ಪ್ರಶ್ನಿಸಿದ ಅವರು,

ನಕಲಿ ಹಿಂದೂಗಳಿಗೆ ಕೇಸರಿ ಕಂಡರೆ ಆಗಲ್ಲ. ನೈಜ ಹಿಂದುಗಳು ದೈವದೇವರನ್ನು ನಿಂದಿಸಲ್ಲ. ರಾಮ‌ಮಂದಿರಕ್ಕೆ ವಿರೋಧ ಮಾಡಿದವರು ನಕಲಿ ಹಿಂದುಗಳು, ಮೊನ್ನೆ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿದ್ದವರು ನಕಲಿ ಹಿಂದುಗಳು ಎಂದರು.
ಹೇಳದೆ ಕೆಲಸ ಮಾಡುವ ಪಕ್ಷ ಇದ್ದರೆ ಅದು ಬಿಜೆಪಿ. ದೇವಸ್ಥಾನದ ಹುಂಡಿಗೆ ಕನ್ನ ಹಾಕುವ ಪ್ರಯತ್ನ ಸಿದ್ದರಾಮಯ್ಯರವರ ಸರಕಾರದಿಂದ ಆಗಿದೆ. ಜಾತಿ ತಾರತಮ್ಯ ತೊರೆದು ಯೋಜನೆಯನ್ನು ಫಲಾನುಭವಿಗಳಿಗೆ ಮುಟ್ಟಿಸುವ ಕೆಲಸ ಮೋದೀಜಿ ನೇತೃತ್ವದ ಸರಕಾರದಿಂದ ಆಗಿದೆ. ಜಾತಿ ಕೇಳಿ ಯೋಜನೆಯನ್ನು ನೀಡಿರುವುದು ಕಾಂಗ್ರೆಸ್ ಸರಕಾರ.

See also  ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಗಮನ ಸಭಾಂಗಣ ಉದ್ಘಾಟನೆ

ಜಾತಿಗಿಂತ ನೀತಿ ಮುಖ್ಯ ಎಂದರು. ದುಡ್ಡು ಕೊಟ್ಟು ವಿದ್ಯುತ್ ಕೇಳಿದ ರೈತನನ್ನು ಜೈಲಿಗಟ್ಟಿದವರು ಈಗ 200 ವ್ಯಾಟ್ ಉಚಿತ ವಿದ್ಯುತ್ ಕೊಡುವುದಾಗಿ ಹೇಳುವುದು ಹಾಸ್ಯಾಸ್ಪದವಾಗಿದೆ ಎಂದು ಲೇವಡಿ ಮಾಡಿದ ಅವರು,ಪ್ರಧಾನಿ ಮೋದಿಯವರು ಉಚಿತವಾಗಿ ನೀಡಿದ ಕೊರೋನ ಲಸಿಕೆ ಪಡೆದರಿಂದಲೇ ಸಿದ್ದರಾಮಯ್ಯ ಅವರಿಗೆ ಮಾತನಾಡಲು ಸಾಧ್ಯವಾಗಿದೆ ಎಂದರು.

ವಿವಾದ ರಹಿತ ಶಾಸಕ:
ಶಾಸಕ ರಾಜೇಶ್ ನಾಯ್ಕ್ ಅವರು ವಿವಾದವಿಲ್ಲದ ರಾಜಕಾರಣಿ,ತನ್ನ ಕ್ಷೇತ್ರದ ಅಭಿವೃದ್ಧಿ ಚಿಂತನೆಯ ಶಾಸಕರಾಗಿದ್ದು, ಅವರನ್ನು ಇನ್ಮೊಮ್ಮೆ ಗೆಲ್ಲಿಸುವ ಪ್ರಯತ್ನ ನಿಮ್ಮದಾಗಬೇಕು. ನಕಲಿ ಹಿಂದುಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದರು.

ತುಂಬಾ ಖುಶಿ ತಂದಿದೆ.: ನಾಯ್ಕ್
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುರವರು ಮಾತನಾಡಿ, ಗ್ರಾಮ ವಿಕಾಸ ಯಾತ್ರೆಯಿಂದ ನನಗೆ ತುಂಬಾ ಖುಶಿ ತಂದಿದೆ. ಗ್ರಾಮದ ಜನರೊಂದಿಗೆ ಬೆರೆಯಲು ಸಿಕ್ಕಿದ ಅವಕಾಶವಾಗಿದೆ. ನನಗೆ ಪಕ್ಷ ಮುಖ್ಯ, ವ್ಯಕ್ತಿ ಮುಖ್ಯವಲ್ಲ. ಪಕ್ಷ ಗಟ್ಟಿಯಾದಂತೆ ಮತಗಟ್ಟಿಯಾಗುತ್ತದೆ. ಈ ಭಾಗದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಸಹಕಾರ ನೀಡುವ ಕಾರ್ಯಕರ್ತರಿರುವಾಗ ವಿಜಯದ ಬಗ್ಗೆ ಚಿಂತೆಯಿಲ್ಲ ಎಂದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಪ್ರದೇಶ. ಈ ಕ್ಷೇತ್ರದಲ್ಲಿ ಇನ್ನಷ್ಟು ಕೆಲಸ ಕಾರ್ಯಗಳನ್ನು ಮಾಡಲು ಬಾಕಿ ಇದೆ. ಕೋಮು ಗಲಭೆಗೆ ಅಂತ್ಯ ಹಾಡಿದ ನೆಮ್ಮದಿ ನನಗಿದೆ. ಜನತೆ ನನಗೆ ನೀಡಿರುವ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ ಎಂದರು.

ವಿಕಾಸಯಾತ್ರೆ ಯಶಸ್ವಿ: ಸುದರ್ಶನ್
ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರು ಮಾತನಾಡಿ ಗ್ರಾಮ ಗ್ರಾಮ ವಿಕಾಸ ಯಾತ್ರೆ ಬಂಟ್ವಾಳದಲ್ಲಿ ಯಶಸ್ವಿಯಾಗಿದೆ. ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಪಾದಾಯತ್ರೆ ಇತರರಿಗೆ ಮಾದರಿಯಾಗಿದೆ. ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಈ ವಿಕಾಸ ಯಾತ್ರೆಯಿಂದ ಆಗಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಜನರಿಗೆ ರಾಜೇಶ್ ನಾಯ್ಕ್ ರವರ ಅವಧಿಯಲ್ಲಿ ಸಾಮರಸ್ಯದ ಬದುಕು ಸಿಕ್ಕಿದೆ ಎಂದರು.

ಸಜ್ಜನಿಕೆಯ ರಾಜಕೀಯ ಮಾಡಿದ ಕೀರ್ತಿ ರಾಜೇಶ್ ನಾಯ್ಕ್ ರದ್ದಾಗಿದೆ. ಜಗತ್ತು ಭಾರತವನ್ನು ನೋಡುವ ಸ್ಥಿತಿ ನಿರ್ಮಾಣವಾಗಿದೆ. ಹಿರಿಯರು ಕಂಡ ಕನಸು ನನಸು ಮಾಡುವ ಕೆಲಸ ಮೋದೀಜಿಯವರಿಂದಾಗುತ್ತಿದೆ. ದೇಶದ ಆದ್ಯಾತ್ಮಿಕ ಕೇಂದ್ರ, ಸಂಸ್ಕೃತಿಯನ್ನು ಪುನರುತ್ಥಾನ ಮಾಡಿದ ನಾಯಕ ಮೋದೀಜಿ‌. ವಿವಿಧ ಯೋಜನೆಗಳ ಮೂಲಕ ಜನರನ್ನು ಮುಟ್ಟುವ ಕೆಲಸ ರಾಜ್ಯ, ಕೇಂದ್ರ ಸರಕಾರದಿಂದಾಗಿದೆ. ದೇಶದ ಸಂಸ್ಕೃತಿ ಪರಂಪರೆ ಉಳಿಯಲು ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಿದೆ ಎಂದರು.

ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕೆಯುಡಬ್ಲುಎಸ್ ಸದಸ್ಯೆ ಸುಲೋಚನ‌ ಜಿ.ಕೆ.ಭಟ್, ಸಾಮಾಜಿಕ ಜಾಲತಾಣ,ಮಾಧ್ಯಮ ಪ್ರಕೋಷ್ಠದ ಸಂಚಾಲಕ ವಿಕಾಸ್ ಪುತ್ತೂರು,ದ.ಕ.ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿಗಳಾದ ರಾಮ್ ದಾಸ್ ಬಂಟ್ವಾಳ, ಕಸ್ತೂರಿ ಪಂಜ, ಮಾಧ್ಯಮ ಪ್ರಮುಖ್ ಸಂದೇಶ್ ಶೆಟ್ಟಿ,ವಿಕಾಸಯಾತ್ರೆ ಸಹಸಂಚಾಲಕರಾದ ಮಾಧವ ಮಾವೆ,ಸುದರ್ಶನ್ ಬಜ,ಬಿಜೆಪಿ ಬಂಟ್ವಾಳ ಮಂಡಲದ ಪ್ರ.ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ವೇದಿಕೆಯಲ್ಲಿದ್ದರು.

See also  ಮಂಗಳೂರು: ವಿಶ್ವವಿದ್ಯಾಲಯ ಸಂಧ್ಯಾ ಕಾಲೇಜಿನಲ್ಲಿ 153ನೇ ಗಾಂಧಿ ಜಯಂತಿ

ನುಡಿನಮನ
ಗುರುವಾರ ನಿಧನರಾದ ಬಂಟ್ವಾಳ ತಾಲೂಕು ಬಿಲ್ಲವ ಸಮಾಜಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಅವರಿಗೆ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ನುಡಿನಮನ ಸಲ್ಲಿಸಿದರು.ಒಂದು ನಿಮಿಷದ ಮೌನಪ್ರಾರ್ಥನೆಯ ಮೂಲಕ ಶೃದ್ದಾಂಜಲಿಯನ್ನು ಅರ್ಪಿಸಲಾಯಿತು.

ಯಾತ್ರೆಯ ಸಂಚಾಲಕ ದೇವದಾಸ್ ಶೆಟ್ಟಿ ಪ್ರಾಸ್ತಾವಿಸಿ ಬಂಟ್ವಾಳ ಕ್ಷೇತ್ರಕ್ಕೆ ಶಾಸಕ ರಾಜೇಶ್ ನಾಯ್ಕ್ ತಮ್ಮ ಶಾಸಕತ್ವದ ಅವಧಿಯಲ್ಲಿ ವಿವಿಧ ಯೋಜನೆಯಡಿ ತಂದಿರುವ ಅನುದಾನ, ಮಾಡಿರುವ ಸಾಧನೆಯನ್ನು ವಿವರಿಸಿ,ಸ್ವಾಗತಿಸಿದರು.
ವಿದ್ಯಾಶ್ರೀ ಆಚಾರ್ಯ ಕಲ್ಲಡ್ಕ ವಂದೇ ಮಾತರಂ ಗೀತೆ ಹಾಡಿದರು. ಬಿಜೆಪಿ ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ವಂದಿಸಿದರು. ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ದಿನೇಶ್ ಸುವರ್ಣ ರಾಯಿ ಕಾರ್ಯ ಕ್ರಮ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು