ಮೂಡುಬಿದಿರೆ: ತಾಲೂಕು ಆಡಳಿತದ ವತಿಯಿಂದ ಮಡಿವಾಳ ಮಾಚಿದೇವ ಜಯಂತಿಯನ್ನು ಬುಧವಾರ ಆಡಳಿತ ಸೌಧದಲ್ಲಿ ಆಚರಿಸಲಾಯಿತು.
ತಹಸೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು ಮಾಚಿದೇವನ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಶುಭ ಹಾರೈಸಿದರು.
ಹಿರಿಯ ಸಾಹಿತಿ ಸದಾನಂದ ನಾರಾವಿ ಮಾತನಾಡಿ ಎಲ್ಲರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡವರು ಮಡಿವಾಳ ಮಾಚಿದೇವರು. ಅವರು ಬಸವಣ್ಣನವರ ಜಪತೆಗೂಡಿ ಮಾಡಿದ ಕಾರ್ಯಗಳು ಇಂದಿಗೂ ಪ್ರಸ್ತುತ. ಮಹಾತ್ಮರ ಜಯಂತಿಯ ಸಂದರ್ಭದಲ್ಲಿ ಅವರು ಸಮಾಜಕ್ಕೆ ಕೊಟ್ಟಂತಹ ಮಾರ್ಗದರ್ಶನ, ನಡವಳಿಕೆಗಳು ಮತ್ತು ಉದ್ಧಾರಕ್ಕಾಗಿ ಮಾಡಿದ ತ್ಯಾಗವನ್ನು ನಾವು ನೆನಪಿಟ್ಟುಕೊಳ್ಳಬೇಕಾಗಿದೆ ಎಂದರು.
ಮೂಡುಬಿದಿರೆ ಮಡಿವಾಳ ಸಮಾಜ ಸೇವಾ ಸಂಘದ ಅಧ್ಯಕ್ಷೆ ಕವಿತಾ ಹರೀಶ್, ಗೌರವಾಧ್ಯಕ್ಷ ಶ್ಯಾಮ ಮಡಿವಾಳ್, ಉಪತಹಸೀಲ್ದಾರ್ ರಾಮ ಕೆ., ಬಾಲಚಂದ್ರ, ಕಂದಾಯ ನಿರೀಕ್ಷಕ ಮಂಜುನಾಥ್ ಉಪಸ್ಥಿತರಿದ್ದರು. ಮಡಿವಾಳ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಸುಜಾತ ಮಾರೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.