ಮಂಗಳೂರು: ರಾಯಚೂರಿನಲ್ಲಿ ಜನವರಿ 18 ರಿಂದ ಜನವರಿ 23 ರವರೆಗೆ ನಡೆದ 19 ವರ್ಷದೊಳಗಿನವರ ಯೋನೆಕ್ಸ್ ಸನ್ರೈಸ್ ಕರ್ನಾಟಕ ರಾಜ್ಯ ಶ್ರೇಯಾಂಕ ಬ್ಯಾಡ್ಮಿಂಟನ್ 2022-23 ಪಂದ್ಯಾವಳಿಯಲ್ಲಿ ಮಂಗಳೂರಿನ ಕ್ರಿಸ್ ಅಂಜೆನ್ ಬ್ಯಾಪ್ಟಿಸ್ಟ್ ಮತ್ತು ಸುಮಿತ್ ಎ ಆರ್ ಚಿನ್ನದ ಪದಕ ಗೆದ್ದಿದ್ದಾರೆ.
ಪ್ರಸ್ತುತ ಇಬ್ಬರೂ ಬೆಂಗಳೂರಿನ ಸೆಲೆನೈಟ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಮಾಜಿ ಅಂತಾರಾಷ್ಟ್ರೀಯ ಆಟಗಾರ ವಿನೋದ್ ಕುಮಾರ್ ಯು ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.