ಬೆಳ್ತಂಗಡಿ: ಅನೈತಿಕ ಚಟುವಟಿಕೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ನೀಡಿದ ಮಾಹಿತಿ ಆಧರಿಸಿ ಉಜಿರೆಯ ಲಾಡ್ಜ್ ವೊಂದಕ್ಕೆ ಪೊಲೀಸ್ ದಾಳಿ ನಡೆದಿದ್ದು ಹಲವರನ್ನು ವಶಕ್ಕೆ ಪಡೆಯಲಾಗಿದೆ.
ಸಂಘಟನೆಯ ಕಾರ್ಯಕರ್ತರು ಬೆಳ್ತಂಗಡಿ ಪೊಲೀಸರಿಗೆ ಖಚಿತ ಮಾಹಿತಿ ನೀಡಿದ್ದು ಆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಬಂಧಿತರಲ್ಲಿ 5 ಮಂದಿ ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿದ್ದಾರೆ ಎಂದು ಆಮಭಿಕ ಮಾಹಿತಿ ಲಭಿಸಿದೆ.
ಫೆ.6 ರಂದು ಬಂಟ್ವಾಳ ಡಿವೈಎಸ್ ಪಿ ನೇತೃತ್ವದ ತಂಡದಿಂದ ಉಜಿರೆಯ ಲಾಡ್ಜ್ ಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಿದು ಎಚ್ಚರಿಕೆ ನೀಡಿದ್ದರು.
ಮಂಗಳವಾರ ಬೆಳಿಗ್ಗೆಯಷ್ಟೇ ಪೊಲೀಸ್ ಠಾಣೆಯಲ್ಲಿ ಲಾಡ್ಜ್ ಮಾಲಕರ ಸಭೆ ನಡೆಸಿ ಯಾವುದೇ ಕಾರಣಕ್ಕೂ ಅನೈತಿಕ ವ್ಯವಹಾರ ಮಾಡದಂತೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಉಜಿರೆಯ ಎಂ ಎಸ್ ಎಸ್ ಲಾಡ್ಜ್‌ನಲ್ಲಿ ಅಕ್ರಮ ವೇಶ್ಯವಾಟಿಕೆ ಈ ಬಗ್ಗೆ ಖಚಿತ ಮಾಹಿತಿ ಪಡೆದ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಪೊಲೀಸರು ಲಾಡ್ಜ್ ಗೆ ದಾಳಿ ನಡೆಸಿ 5 ಮಹಿಳೆಯರ ಸಹಿತ ಇಬ್ಬರು ಪುರುಷರನ್ನು ವಶಕ್ಕೆ ಪಡೆದಿದ್ದಾರೆ.