ಮಂಗಳೂರು : ಫೆಬ್ರವರಿ 18, 19 ರಂದು ಮಂಗಳೂರಿನ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮಂಗಳೂರು ಲಿಟ್ ಫೆಸ್ಟ್‌ನ ಐದನೇ ಆವೃತ್ತಿಯು ದಿ ಐಡಿಯಾ ಆಫ್ ಭಾರತ್ ಪರಿಕಲ್ಪನೆಯಲ್ಲಿ ನಡೆಯಲಿದೆ.
ವಿಚಾರಸಂಕಿರಣದಲ್ಲಿ 25 ಅಧಿವೇಶನಗಳು ನಡೆಯಲಿವೆ. ಇದರಲ್ಲಿ 55 ಕ್ಕೂ ಅಧಿಕ ವಾಗ್ಮಿಗಳು ಭಾಗವಹಿಸಲಿದ್ದಾರೆ. ಪ್ರತಿ ಸೆಷನ್‌ನ ಕೊನೆಗೆ ಸಾಹಿತ್ಯಕ್ಕೆ ಸಂಬಂಧಿಸಿದ ರಸಪ್ರಶ್ನೆಆಯೋಜಿಸಲಾಗುವುದು. ವಿಜೇತರಿಗೆ ಪುಸ್ತಕವನ್ನು ಬಹುಮಾನವಾಗಿ ನೀಡಲಾಗುತ್ತದೆ.
ತುಕಾರಾಮ ಪೂಜಾರಿಗೆ ಪ್ರಶಸ್ತಿ: ಲಿಟ್ ಫೆಸ್ಟ್‌ನಲ್ಲಿ 2 ಸಿನಿಮಾಗಳ ಪ್ರದರ್ಶನ ಜರುಗಲಿದೆ. ಅಲ್ಲದೇ 16 ಪುಸ್ತಕ ಮಳಿಗೆಗಳು ಇರಲಿವೆ. ರಾಣಿ ಅಬ್ಬ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ತುಕಾರಾಮ ಪೂಜಾರಿ ಅವರಿಗೆ ಈ ಬಾರಿಯ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ. ಪುಸ್ತಕ ಮಳಿಗೆ, ತುಳು ಲಿಪಿ ಕಲಿಕಾ ಕಾರ್ಯಾಗಾರ, ಮಕ್ಕಳ ಸಾಹಿತ್ಯ ಕುರಿತು ಪಾಲಕರಿಗೆ ಆಸಕ್ತಿ ಬೆಳೆಸುವ ದೃಷ್ಟಿಯಿಂದ ಲೇಖಕರೊಂದಿಗೆ ಸಂವಾದ – (ಹರಟೆ ಕಟ್ಟೆ) ಈ ಬಾರಿಯ ಲಿಟ್ ಫೆಸ್ಟ್‌ನ ವಿಶೇಷತೆ.
ಉದ್ಘಾಟನೆಯು ದಿ ಐಡಿಯಾ ಆಫ್ ಭಾರತ್ ಇನ್ ಅಮೃತಕಾಲ್ ರಿಕ್ಲೈಮಿಂಗ್ ದಿ ರೈಟ್ ಪಾತ್ ದಿ ವೇ ಫಾರ್ವರ್ಡ್ ಪರಿಕಲ್ಪನೆಯಲ್ಲಿ ಜರುಗಲಿದೆ. ಆರ್. ಜಗ್ನನಾಥ್, ವಿನಯ್ ಹೆಗ್ಡೆ, ವಿ. ನಾಗರಾಜ್ ಭಾಗವಹಿಸಲಿದ್ದಾರೆ.