ಮಂಗಳೂರು: ಫೆ.24: ನಗರದ ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಸ್ಥಾಪನಾ ದಿನಾಚರಣೆ ಹಾಗೂ ಸಂಸ್ಥೆಯ ವಾರ್ಷಿಕ ವೃತ್ತಿಪರ ಸೇವಾ ಯೋಜನೆಯ ಅಂಗವಾಗಿ 3 ಸಾಧಕರಿಗೆವೃತ್ತಿಪರ ಸೇವಾ ಶ್ರೇಷ್ಠತೆ ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭವು ನಗರದ ಉತ್ಸವ ಹೋಟೆಲ್ ಸಭಾಂಗಣದಲ್ಲಿ 23.02.2023ರಂದು ಜರಗಿತು.
ಸಂಸ್ಥೆಯ ಅಧ್ಯಕ್ಷರಾದ ರೋ| ಬಸವ ಕುಮಾರರವರು ತಮ್ಮಅಧ್ಯಕ್ಷೀಯ ಭಾಷಣದಲ್ಲಿ ರೋಟರಿ ಪ್ರಶಸ್ತಿಯು ನಿಸ್ವಾರ್ಥ ಸೇವಾ ಮನೋಭಾವದಿಂದ ಸಮಾಜದಲ್ಲಿ ಸೇವೆ ಸಲ್ಲಿಸುವವರನ್ನು ಗುರುತಿಸಿ ಆಯ್ಕೆ ಮಾಡಲಾಗುವುದೆಂದು ಮಾಹಿತಿ ನೀಡಿದರು. ಸಂಸ್ಥೆಯ ಸ್ಥಾಪಕಾಧ್ಯಕ್ಷ ರೋ| ರಂಜನ್‌ರವರು ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು 1905ರಲ್ಲಿ ಸ್ಥಾಪನೆಗೊಂಡು ಅದರ ಇತಿಹಾಸ ಬೆಳವಣಿಗೆ ಮತ್ತು 119 ವರ್ಷಗಳ ವಿವಿಧ ಸೇವಾ ಸಾಧನೆಗಳ ಬಗ್ಗೆ ವಿವರ ನೀಡಿದರು. ಸಂಸ್ಥೆಯ ನಿರ್ದೇಶಕರಾದರೋ| ಸುಮಿತ್‌ರಾವ್‌ರವರು ಪ್ರಶಸ್ತಿ ವಿಜೇತರ ಪರಿಚಯ ಮತ್ತು ನಿಸ್ವಾರ್ಥ ಸೇವಾ ಸಾಧನೆಗಳ ವಿವರ ನೀಡಿದರು.
ಭಾರತೀಯ ರಕ್ಷಣಾ ಪಡೆಯ ನಿವೃತ್ತಅಧಿಕಾರಿ ಹಾಗು ರೋಟರಿ ಬೈಕಂಪಾಡಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ರೊ| ಶ್ರೀಕಾಂತ್ ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ರೋಟರಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಶ್ಲಾಘಿಸಿ ಪ್ರಶಸ್ತಿ ವಿಜೇತರಾದ 01) ರಾಧಾಆಚಾರ್ (ಆರೋಗ್ಯ ಮತ್ತುಆರೈಕೆ ಸೇವೆ ಲೇಡಿಗೋಶನ್‌ಆಸ್ಪತ್ರೆ) 02) ಶ್ಯಾಮ್‌ಸುಂದರ್‌ರಾವ್ (ಬಾಡಿಗೆಸಾರಿಗೆ ಸಾಗಾಟವಾಹನ ಚಾಲಕರು) 03) ಮೋನಪ್ಪ ಬಂಗೇರ (ಕಛೇರಿ ಪೇದೆ) ಇವರ ವಿಶಿಷ್ಟ ನಿಸ್ವಾರ್ಥ ಸೇವೆ ಮತ್ತು ಸಾಧನೆಯನ್ನು ಪರಿಗಣಿಸಿ ಗೌರವಿಸಿ ರೋಟರಿ ವೃತ್ತಿಪರ ಸೇವಾ ಶ್ರೇಷ್ಠ ಪ್ರಶಸ್ತಿ ಪ್ರಧಾನಮಾಡಿ ಅಭಿನಂದಿಸಿದರು.
ಈ ಪ್ರಶಸ್ತಿ, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ಮತ್ತು ನಗದು ರೂ.15,000 ಒಳಗೊಂಡಿದೆ. ರೋಟರಿ ಜಿಲ್ಲಾ ಯೋಜನೆಯ ಜಿಲ್ಲಾ ಕಾರ್ಯದರ್ಶಿ ರೋ| ರಾಜೇಂದ್ರ ಕಲ್ಬಾವಿ ಗೌರವ ಅತಿಥಿಯಾಗಿ ಪಾಲ್ಗೊಂಡು ಡಾ| ಭೂಷಣ್ ಶೆಟ್ಟಿಯವರನ್ನು ಸಂಸ್ಥೆಗೆ ನೂತನ ಸದಸ್ಯರಾಗಿ ಸೇರ್ಪಡಿಸಿದರು.
ರಾಧಾಆಚಾರ್ ಪ್ರಶಸ್ತಿ ಸ್ವೀಕರಿಸಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡುವ ರೋಟರಿ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯ ಎಂದು ನುಡಿದು ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರೋ| ಪ್ರಶಾಂತ್ ರೈ ಮಾಸಿಕ ವರದಿ ಮಂಡಿಸಿದರು. ರೋ| ಕ್ಯಾನುಟ್ ಪಿಂಟೋ ವಂದಿಸಿದರು.