ಬಂಟ್ವಾಳ: ಪಿಲಾತಬೆಟ್ಟು ವಲಯ ಕಾಂಗ್ರೆಸ್ ವತಿಯಿಂದ ಬಿ.ಸಿ.ರೋಡು- ಪುಂಜಾಲ್ ಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಶ್ರೀರಾಮನಗರದಲ್ಲಿ ನಿರ್ಮಿಸಲಾದ ಸಾರ್ವಜನಿಕ ಬಸ್ಸು ತಂಗುದಾಣವನ್ನು ಬುಧವಾರ ಲೋಕಾರ್ಪಣೆ ಗೊಳಿಸಲಾಯಿತು.
ಮಾಜಿ ಸಚಿವ ಬಿ ರಮನಾಥ ರೈ ಅವರು ಬಸ್ ತಂಗುದಾಣವನ್ನು ಉದ್ಘಾಟಿಸಿ ಲೋಕಾರ್ಪಣೆಗೈದು ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ 5000 ಕೋ.ಗಿಂತಲು ಅಧಿಕ ಅನುದಾನ ತಂದು ಬಂಟ್ವಾಳದ ಸರ್ವಾಂಗಿನ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ ಎಂದರು. ಕಳೆದ ಚುನಾವಣೆಯಲ್ಲಿ ಅಪಪ್ರಚಾರದಿಂದ ನನ್ನನ್ನು ಸೋಲಿಸಲಾಯಿತು.ಆದರೆ ಕ್ಷೇತ್ರದ ಜನರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಿಶ್ಚಯಿಸಿದ್ದಾರೆ ಎಂದರಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಸಾರ್ವಜನಿಕರಿಗೆ ಬಸ್ಸು ತಂಗುದಾಣವನ್ನು ನಿರ್ಮಿಸಿರುವುದು ಅಭಿನಂದನೀಯವಾಗಿದೆ ಎಂದರು.
ಕಾಂಗ್ರೆಸ್ ಸೇರ್ಪಡೆ:
ಈ ಸಂದರ್ಭದಲ್ಲಿ ಬಿಜೆಪಿಯ ಕಾರ್ಯಕರ್ತರೆನ್ನಲಾದ ಲಕ್ಷ್ಮಣ ಪೂಜಾರಿ ನಾಕುನಾಡು, ಸುಧಾಕರ ಪೂಜಾರಿ ನಾಕುನಾಡು, ತುಳಸಿ ದುಗಮರಗುಡ್ಡೆ ಅವರಿಗೆ ಮಾಜಿ ಸಚಿವ ರಮಾನಾಥ ರೈ ಅವರು ಕಾಂಗ್ರೆಸ್ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಾಜಿ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ಮಾಯಿಲಪ್ಪ ಸಾಲಿಯಾನ್, ಮಾಜಿ ಜಿಲ್ಲಾ ಪಂಚಾಯತ್ ಪದ್ಮಶೇಖರ್ ಜೈನ್, ಪಿಲಾತಬೆಟ್ಟು ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯರಾದ ಪುಷ್ಪಲತಾ ಮೋಹನ್ ಸಾಲಿಯನ್, ವನಿತಾ ಆನಂದ, ಲೀಲಾವತಿ ಶೆಟ್ಟಿ ನೆಲ್ವಿಸ್ಟರ್ ಪಿಂಟೊ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಬಾಲಾಜಿ ರಾವ್, ಮಹಿಳಾ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಬೆನ್ನಡಿಟ್ಟ ಡಿಸೋಜಾ, ಪಿಲಾತಬೆಟ್ಟು ಗ್ರಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅರುಣ್ ಫರ್ನಾಂಡಿಸ್, ಬೂತು ಕಾಂಗ್ರೆಸ್ ಅಧ್ಯಕ್ಷರಾದ ಪುರುಷೋತ್ತಮ ನಾಕುನಾಡು, ವಿಠಲಶೆಟ್ಟಿ, ವಸಂತ ಹೆಗಡೆ ಹಾಗೂ ಪ್ರಮುಖರಾದ ಸುಧಾಕರ್ ಶೆಣೈ ಖಂಡಿಗ , ಮೋಹನ್ ಸಾಲಿಯನ್, ವಿಕ್ಟರ್ ಡಿಸೋಜಾ, ಅಂಬ್ರೋಸ್ ಮೋರಸ್, ಲಾರೆನ್ಸ್ ಡಿಸೋಜ, ಪ್ರಮೋದ್, ಕರುಣಾಕರ ನಾಕುನಾಡು, ನಾರಾಯಣ ಪೂಜಾರಿ ನಾಕುನಾಡು ಉಪಸ್ಥಿತರಿದ್ದರು. ಜಿಲ್ಲಾ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿಗಳಾದ ಅವಿಲ್ ಮೊರಸ್ ಕಾರ್ಯಕ್ರಮವನ್ನು ನಿರೂಪಿಸಿದರು.