ಕಡಬ: ಆಡೊಂದನ್ನು ಚಿರತೆ ಬೇಟೆಯಾಡಿ ದೇಹವನ್ನು ಅರ್ಧಂಬರ್ಧ ತಿಂದು ತೇಗಿ ಮರದ ಗೆಲ್ಲಿಗೆ ನೇತು ಹಾಕಿರುವ ಘಟನೆ ಕಡಬ ಸಮೀಪದ ಬೆತ್ತೋಡಿಯಲ್ಲಿ ನಡೆದಿದೆ.
ಬೆತ್ತೋಡಿ ಕಾಲನಿಯ ಕೆ ಎಫ್ ಡಿ ಸಿ ನಿಗಮದ ರಬ್ಬರ್ ತೋಟದಲ್ಲಿ ಈ ದೃಶ್ಯ ಕಂಡು ಬಂದಿದ್ದು ರಬ್ಬರ್ ಟ್ಯಾಂಪಿಂಗ್ ಗೆ ಬಂದ ವ್ಯಕ್ತಿಯೊಬ್ಬರು ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಚಿದ್ದಾರೆ.
ಆಡಿನ ಮೃತ ದೇಹದ ಕೆಲ ಭಾಗಗಳನ್ನು ಚಿರತೆ ತಿಂದು ಹಾಕಿದೆ. ಬೆತ್ತೋಡಿ ಕಾಲನಿಯ ಸುಮಾರು ಐನೂರು ಮೀಟರ್ ವ್ಯಾಪ್ತಿಯಲ್ಲಿ ಚಿರತೆ ಓಡಾಟ ನಡೆಸಿದ ಹೆಜ್ಜೆ ಗುರುತುಗಳಿವೆಯೆಂದು ಸ್ಥಳೀಯರು ಹೇಳಿದ್ದಾರೆ.
ಇದರಿಂದ ಆ ಭಾಗದ ಸ್ಥಳೀಯರು ಆತಂಕಗೊಂಡಿದ್ದು,ಚಿರತೆಯನ್ನು ಕೂಡಲೇ ಹಿಡಿಯುವಂತೆ ಆಗ್ರಹಿಸಿದ್ದಾರೆ.