ಮಡಿಕೇರಿ: ರಾಷ್ಟ್ರೀಯ ರಾಜ್ಯ ನಾಯಕರು, ಪರಿವಾರದ ಸಂಚಾಲಕರು ಹಾಗೂ ಮಾದ್ಯಮದ ಮಂದಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಬಿಜೆಪಿ ಪಕ್ಷದಿಂದ ಬಹುತೇಕ ಈ ಬಾರಿ ಕೂಡ ಹಳೆಯ ನಾಯಕರಿಗೆ ಟಿಕೇಟ್ ನೀಡಲು ಮುಂದಾಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಕಳೆದ 20 ವರುಷಗಳಿಂದ ಬಿಜೆಪಿಯ ಭದ್ರ ಕೋಟೆಯಾಗಿ ನಿರ್ಮಿಸಲು ಕಾರಣರಾಗಿರುವ ಕೊಡಗಿನ ಎರಡು ಶಾಸಕರಿಗೆ ಮತ್ತೆ ಟಿಕೆಟ್ ನೀಡಬಹುದಾಗಿದ್ದು, ಎರಡು ಶಾಸಕರಿಗೆ ಕೆಲವು ಹಿಂದು ಸಂಘಟನೆಯ ಬೆರಳೆಣಿಕೆಯಷ್ಟು ಯುವಕರು ಹಾಗೂ ನಾಯಕರ ವಿರೋಧವಿದ್ದರು ಅವರನ್ನು ಮಣಿಸಿ ಹಿರಿಯರು ಹಾಗೂ ಸಮಾನ ಮನಸ್ಕರ ಮತ ಸೆಳೆದು ಗೆಲ್ಲುವ ಅರ್ಹತೆ ಎರಡು ಶಾಸಕರಿಗೆ ಇದೆ ಎಂದು ಸಮೀಕ್ಷೆಯಲ್ಲಿ ತಿಳಿದಿದೆ.
ಈ ಭಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಅಧಿಕಾರಿಕ್ಕೆ ತರಲು ಎಲ್ಲ ನಾಯಕರು ಮುಂದಾಗಿದ್ದು ಬಹುತೇಕ ಹಳೆಯ ನಾಯಕರಿಗೆ ಟಿಕೆಟ್ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಟಿಕೆಟ್ ರೇಸ್ ನಲ್ಲಿ ಮಡಿಕೇರಿ ಕ್ಷೇತ್ರದಿಂದ ರಂಜನ್ , ಭಾರತೀಶ್ , ವಿರಾಜಪೇಟೆ ಕ್ಷೇತ್ರದಿಂದ ಬೋಪಯ್ಯ, ರವಿ ಕುಶಾಲಪ್ಪ, ರೀನಾ ಪ್ರಕಾಶ್ ಹೆಸರು ಚಾಲ್ತಿಯಲ್ಲಿದೆ. ಮಡಿಕೇರಿ ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ನೀಡಲು ಹಿರಿಯ ನಾಯಕರು ಹಾಗೂ ಕ್ಷೇತ್ರದ ಹಿರಿಯರು ಹಾಗೂ ಪಂಚಾಯತಿಯ ಶಕ್ತಿ ಕೇಂದ್ರಗಳ ಪ್ರಮುಖರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಭಾರತೀಶ್ ಅವರಿಗೆ ಟಿಕೆಟ್ ನೀಡಿ ಒಂದು ವೇಳೆ ಕಾಂಗ್ರೆಸ್ ನಿಂದ ಮಂಥರ್ ಗೌಡರಿಗೆ ಟಿಕೆಟ್ ನೀಡಿದಾಗ ವಿಜಯಲಕ್ಷ್ಮಿ ಮಂಥರ್ ಗೌಡರಿಗೆ ಒಲಿಯಲಿದೆ ಎನ್ನುವ ಸ್ಪಷ್ಟ ಸಂದೇಶ ಬಿಜೆಪಿ ನಾಯಕರಿಗೆ ರವಾನೆಯಾಗಿದೆ. ಮಡಿಕೇರಿ ಕ್ಷೇತ್ರದ ಬಿಜೆಪಿಯ ಟಿಕೆಟ್ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ಅವಲಂಬಿತವಾಗಿದೆ ಎಂದು ತಿಳಿದು ಬಂದಿದೆ. ರಾಜಕೀಯವಾಗಿ ಅಪಚ್ಚು ರಂಜನ್ ಅವರು ಬಲಿಷ್ಠವಾಗಿದ್ದು ಕಳೆದ ಭಾರಿ ರಂಜನ ವಿರುದ್ದ ಬಾರಿ ಅಸಮಾಧಾನವಿದ್ದರು, ಅಪಸ್ವರವಿದ್ದರು ಹೆಚ್ಚಿನ ಮತಗಳೊಂದಿಗೆ ಗೆದ್ದು ಬೀಗಿದ್ದು, ಟಿಕೇಟ್ ನೀಡದೆ ಇದ್ದಲ್ಲಿ ತಟಸ್ಥರಾದರೆ ಬಹುತೇಕ ರಂಜನ್ ಬೆಂಬಲಿಗರು ಹಿರಿಯರು ಸೈಲೆಂಟ್ ಮೋಡ್ ಹೋಗಲಿದ್ದು ಭಾರತೀಶ್ ರಿಗೆ ನುಂಗಲಾರದ ತುತ್ತಲಾಗಲಿದೆ. ರಂಜನ್ ರಿಗೆ ಒಂದು ಉತ್ತಮ ತಂಡವಿದ್ದು ಅಂತಹ ತಂಡ ಬೇರೆ ಕೊಡಗಿನಲ್ಲಿ ಬಿಜೆಪಿ ನಾಯಕರಿಗೆ ಇಲ್ಲವೆಂದು ಹಿರಿಯ ನಾಯಕರಿಗೆ ತಿಳಿದಿದೆ.
ಈ ಹಿಂದೆ ರಂಜನ್ ಅವರನ್ನು ಕೆಲ ನಾಯಕರು ವಿರೋಧಿಸಿ ತೊಡೆ ತಟ್ಟಿ ಪಕ್ಷದಲ್ಲಿ ಸ್ಥಾನ ಪಡೆದುಕೊಂಡರು ಕೊನೆಗೆ ರಂಜನ್ ಅವರ ಹಿಂದೆ ಹೋಗಿ ಕ್ಷಮೆ ಕೇಳಿ ಒಂದಾಗಿರುವ ವಿಚಾರ ರಾಷ್ಟ್ರೀಯ ನಾಯಕರಿಗೆ ತಿಳಿದಿದೆ. ಮೋದಿ ಅಲೆ, ಬೆಂಬಲ ಸಂಖ್ಯಾ ಬಲ, ಜನಾಂಗದವರ ಬಲ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮತ್ತು ವಿರೋಧಿ ಅಲೆಗಳನ್ನು ಪರಿಗಣಿಸಿದಾಗ ಈ ಭಾರಿ ರಂಜನ್ ಸೂಕ್ತವೆಂದು ನಾಯಕರು ಪರಿಗಣಿದ್ದಾರೆ. ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ನಾಯಕರಿಗೆ ಬರವಿಲ್ಲ ಎಂದರು ಗೆಲ್ಲುವ ನಾಯಕ ಬೋಪಯ್ಯ ಎಂದು ಸ್ಪಷ್ಟ ಸಂದೇಶ ರವಾನೆಯಾಗಿದೆ. ಬೋಪಯ್ಯ ನವರು ಈ ಹಿಂದೆ ಬಿಜೆಪಿ ಸರಕಾರವನ್ನು ಉಳಿಸಿದ್ದು, ಯಡಿಯೂರಪ್ಪ ಅಪ್ತರಲ್ಲಿ ಒಬ್ಬರಾಗಿದ್ದಾರೆ. ವಿರಾಜಪೇಟೆ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ರೀನಾ ಪ್ರಕಾಶ್, ರವಿ ಕುಶಲಪ್ಪನವರು ಹಿಂಭಾಗಿಲಿನಿಂದ ಕಸರತ್ತು ನಡೆಸುತಿದ್ದರು ಕೂಡ ಗೆಲುವ ಕುದುರೆ ಬೋಪಯ್ಯ ಎಂದು ರಾಜ್ಯ ನಾಯಕರಿಗೆ ಸಂದೇಶ ರವಾನೆಯಾಗಿದೆ. ಕೆಲವು ಪಂಚಾಯತಿಗಳಲ್ಲಿ ಬೋಪಯ್ಯನವರ ವಿರುದ್ದ ಹಿಂದು ಪರಿವಾರದ ಕೆಲ ಯುವಕರು ಹಾಗೂ ನಾಯಕರು ಷಡ್ಯಂತರ ನಡೆಸಿದರು ಕೂಡ ಬಹುತೇಕ ಹಿರಿಯರು, ಶಕ್ತಿ ಕೇಂದ್ರಗಳ ನಾಯಕರು, ದಲಿತರು, ಕೆಲ ಮುಸ್ಲಿಮ್ ಜನಾಂಗವರು ಬೋಪಯ್ಯನವರ ಸರಳತೆ ಸ್ವಭಾವ ಹಾಗೂ ಅಭಿವೃದ್ಧಿ ಹಿನ್ನಲೆಯಲ್ಲಿ ಮತ ನೀಡಿ ಕೈ ಹಿಡಿಯುವರು ಎನ್ನುವ ಸಂದೇಶ ರವಾನೆಯಾಗಿದೆ. ಕಾಂಗ್ರೆಸ್ ನಿಂದ ಪೊನ್ಮಣನವರಿಗೆ ಟಿಕೆಟ್ ಖಚಿತವಾದರೆ ಬಿಜೆಪಿಯಿಂದ ಪೈಪೋಟಿ ನೀಡಲು ಬೋಪಯ್ಯನವರು ಸೂಕ್ತ ವ್ಯಕ್ತಿ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಪೊನ್ನಣನವರಿಗೆ ಕಾಂಗ್ರೇಸ್ ಟಿಕೆಟ್ ನೀಡಿ ಬಿಜೆಪಿಯಿಂದ ರವಿ ಕುಶಾಲಪ್ಪನವರಿಗೆ ಟಿಕೆಟ್ ನೀಡಿದರೆ ಕುಶಾಲಪ್ಪನವರಿಗೆ ಹಿಂದು ಸಂಘಟನೆಗಳ ಯುವಕರು ಹಾಗೂ ಕಟ್ಟ ಬಿಜೆಪಿ ಬೆಂಬಲಿಗರು ಕೈ ಹಿಡಿದರು ಕೂಡ ಬೋಪಯ್ಯರ ಬೆಂಬಲಿಗರು, ಕೊಡವ ಜನಾಂಗ ಹಾಗೂ ಅರೆಬಾಷೆಗರು ಮತ್ತು ದಲಿತ ಮತಗಳು ಬೀಳುವ ಸಾಧ್ಯತೆ ಕಡಿಮೆ ಎಂದು ರಾಜ್ಯಕ್ಕೆ ಸಂದೇಶ ರವಾನೆಯಾಗಿದೆ. ರೀನಾ ಪ್ರಕಾಶ್ ಅವರ ಹೆಸರು ವಿರಾಜಪೇಟೆ, ಗೋಣಿಕೊಪ್ಪ ದಲ್ಲಿ ಚಾಲ್ತಿಯಲ್ಲಿದ್ದು ಬಹುತೇಕ ವಿರಾಜಪೇಟೆ ಕ್ಷೇತ್ರದ ಮತದಾರರಿಗೆ ತಿಳಿದಿಲ್ಲ. ಹಾಗಾಗಿ ಪೊನ್ನಣನವರು ದಾಖಲೆ ಮತ ಪಡೆಯವರು ಎಂದು ಅಂದಾಜಿಸಲಾಗಿದೆ. ರವಿ ಕುಶಾಲಪ್ಪನವರಿಗೆ ಟಿಕೆಟ್ ನೀಡಿದರೆ ಬಹುತೇಕ ಬಿಜೆಪಿ ಹಿರಿಯ ನಾಯಕರು ಹಾಗೂ ಪಂಚಾಯತಿ ವ್ಯಾಪ್ತಿಯ ನಾಯಕರು ತಟಸ್ಥರಾಗಲಿದ್ದಾರೆ ಎಂದು ಕೂಡ ತಿಳಿದು ಬಂದಿದೆ. ಯುವ ಪಡೆ ಹಾಗೂ ಹಿಂದು ಸಂಘಟನೆ ಬೆಂಬಲವಿದ್ದರು ಮತ ಪಡೆಯುವಲ್ಲಿ ವಿಫಲರಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಬೋಪಯ್ಯನವರ ಅಪ್ತರಾಗಿ ಗುರುತಿಸಿಕೊಂಡರು ಕೂಡ ಇವರು ಕೆಲ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ದ್ವಂದ್ವ ರೀತಿಯಲ್ಲಿ ನಡೆದುಕೊಂಡಿರುವುದು ಹಾಗೂ ಹಿಂದು ಸಂಘಟನೆಯ ಯುವಕರು, ಬಿಜೆಪಿ ಹಿರಿಯನಾಯಕರು ನಡುವೆ ಸಂಘರ್ಷಕ್ಕೆ ಕಾರಣರಾಗಿ ಹಿರಿಯರು ಮುನಿಸಿಕೊಳ್ಳಲು ಕಾರಣರಾಗಿದ್ದು ಬಹುತೇಕ ನಾಯಕರು ತಟಸ್ಥರಾಗುವ ಭಯ ರಾಜ್ಯ ನಾಯಕರಿಗೆ ಮನವರಿಕೆಯಾಗಿದೆ. ಬೋಪಯ್ಯನವರಿಗೆ ವಿರೋಧಿಯಲೆ ಇದ್ದರೂ, ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಕಡಿಮೆ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವನ್ನು ರಾಜ್ಯ ರಾಷ್ಟ್ರದ ನಾಯಕರು ಹೊಂದಿದ್ದು ಈ ಭಾರಿ ಮತ್ತೆ ಬೋಪಯ್ಯನವರಿಗೆ ಟಿಕೆಟ್ ನಿಶ್ಚಯವಾಗಿದೆ. ಒಂದೊಮ್ಮೆ ಟಿಕೆಟ್ ಘೋಷಣೆಯಾದರೆ ವಿರೋದಿಯಲೆ ಅಗಬುದೆಂಬ ಕಾರಣಕ್ಕೆ ತಡವಾಗಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.