ಬೆಳ್ತಂಗಡಿ : ಉತ್ತಮ ಕರೆಗಳು ನಿರ್ಮಾಣವಾಗಿರುವ ಬಂಗಾಡಿ-ಕೊಲ್ಲಿ ಸೂರ್ಯ-ಚಂದ್ರ ಜೋಡುಕರೆ ಕಂಬಳವು ಮೂಡಿಬಂದಿದೆ. ಮುಂದಿನ ವರ್ಷ ಇಲ್ಲಿನ ಕಂಬಳಕ್ಕೆ ಶಾಶ್ವತ ಗ್ಯಾಲರಿ ನಿರ್ಮಾಣಕ್ಕೆ ವ್ಯವಸ್ಥೆ ಮಾಡುವುದರೊಂದಿಗೆ ದೊಡ್ಡಮಟ್ಟದ ಅನುದಾನವನ್ನು ನೀಡಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಬೆಳ್ತಂಗಡಿ ಬಂಗಾಡಿ ಕೊಲ್ಲಿಯ ಸೂರ್ಯ- ಚಂದ್ರ ಜೋಡುಕರೆ ಕಂಬಳ ಸಮಿತಿ ವತಿಯಿಂದ 25ನೇ ವರ್ಷದ ಹೊನಲು ಬೆಳಕಿನ ಸೂರ್ಯ ಚಂದ್ರ ಜೋಡುಕರೆ ಬಯಲು ಕಂಬಳದಲ್ಲಿ ಬಂಗಾಡಿ ಕೊಲ್ಲಿಯ ನೇತ್ರಾವತಿ ನದಿ ಕಿನಾರೆಯ ಪರಿಸರದಲ್ಲಿ ಮಾತನಾಡಿದರು.
ಪ್ರವಾಸೋದ್ಯಮ ಇಲಾಖೆಯಿಂದ ಕಂಬಳಕ್ಕೆ ಈಗಾಗಲೆ ಸರಕಾರ ತಲಾ 5 ಲಕ್ಷ ರೂ. ಒದಗಿಸುವ ಕೆಲಸ ಮಾಡಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ನಡೆಯುವಂತೆ ಕೊಲ್ಲಿ ಶ್ರೀ ದುರ್ಗಾದೇವಿ ಸನ್ನಿಧಿಯಲ್ಲಿ ಮುಂದಿನ 26 ನೇ ವರ್ಷದ ಕೂಟದಲ್ಲಿ ದೇವರ ಸಿರಿಸಿಂಗಾರದಂತೆ ನಡೆಯುವಲ್ಲಿ ಸಂಪೂರ್ಣ ಸಹಕಾರ ಒದಗಿಸುವ ಎಂದು ಹೇಳಿದರು.
ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಗಾಡಿ ಕೊಲ್ಲಿ ಸೂರ್ಯ ಚಂದ್ರ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ರಂಜನ್ ಜಿ.ಗೌಡ ವಹಿಸಿದ್ದರು.
ಮಾಜಿ ಶಾಸಕ ಕೆ.ವಸಂತ ಬಂಗೇರ, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಶೈಲೇಶ್ ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಮುಖರಾದ
ನಿತೇಶ್ ಎಚ್., ರಾಜೇಶ್ ನವಶಕ್ತಿ, ಡಾ.ಪ್ರದೀಪ್ ನಾವೂರು, ಪದ್ಮ ಗೌಡ, ಅಭಿನಂದನ್ ಹರೀಶ್ ಕುಮಾರ್, ಗಿರೀಶ್ ಡೋಂಗ್ರೆ, ದಿನೇಶ್ ಗೌಡ, ಸಮಿತಿ ಉಪಾಧ್ಯಕ್ಷರಾದ ಸೀತರಾಮ ಹಾರ್ತಕಜೆ, ತುಂಗಪ್ಪ ಪೂಜಾರಿ ಕಾಜೂರು, ವಿನಯಚಂದ್ರ ಪಡೆಂಕಲ್ಲು, ಹಸೈನಾರ್ ಬಾವಲಿಬನ, ಕಿಶೋರ್ ಹೂರ್ಜೆ, ಕಾರ್ಯದರ್ಶಿಗಳಾದ ಆನಂದ ಗೌಡ , ಕೋಶಾಧಿಕಾರಿ ಖಾಸಿಂ ಮಲ್ಲಿಗೆಮನೆ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಕೂಟದಲ್ಲಿ 158 ಜೋಡಿ ಕೋಣಗಳು ಭಾಗವಹಿಸಿದವು. ಕಂಬಳ ತೀರ್ಪುಗಾರರಾದ ರಾಜೀವ್ ಶೆಟ್ಟಿ ಎಡ್ತೂರು, ಸುಧೀಶ್ ಕುಮಾರ್ ಆರಿಗ, ಓಟಗಾರರಾದ ಸತೀಶ್ ದೇವಾಡಿಗ, ಶ್ರೀಧರ ಮರೋಡಿ, ಪ್ರಮುಖರಾದ ಸುಂದರ ಕಾಜೂರು, ಸ್ಥಳೀಯ ಪ್ರತಿಭೆ ಅಕ್ಷಿತಾ, ಕರಾಟೆ ಪಟು ಮಹಾಂತ್ ಮಲ್ಲ ಅವರನ್ನು ಗೌರವಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ವಳಂಬ್ರ ಸ್ವಾಗತಿಸಿದರು. ಸತೀಶ್ ಮನ್ನಡ್ಕ ಕಾರ್ಯಕ್ರಮ ನಿರೂಪಿದರು. ಕಾರ್ಯದರ್ಶಿ ಭರತ್ ಕುಮಾರ್ ಬಂಗಾಡಿ ವಂದಿಸಿದರು. ನೇಮಿರಾಜ್ ಕಿಲ್ಲೂರು ಸಹಕರಿಸಿದರು.