ಮಂಗಳೂರು: ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಮಂಗಳೂರು ಇಲ್ಲಿ ಇತ್ತೀಚೆಗೆ ೮ ತಿಂಗಳ ಗಂಡು ಮಗುವಿಗೆ ಅಪರೂಪದ ಯಕೃತ್ತಿನ ಶಸ್ತೃಚಿಕಿತ್ಸೆಯನ್ನು ನಡೆಸಲಾಯಿತು.
ಡಾ.ಅಶ್ರಪ್ ಅಹಮದ್ ಮತ್ತು ಡಾ.ಸುಹಿತ್. ಜಿ ನೇತೃತ್ವದ ಮಕ್ಕಳ ಶಸ್ತೃಚಿಕಿತ್ಸಾ ತಂಡವು ಯಕೃತ್ತಿನ ಬಲಭಾಗದಲ್ಲಿರುವ ದೊಡ್ಡ ಗಡ್ಡೆಯನ್ನು ಶಸ್ತೃಚಿಕಿತ್ಸೆಯ ಮುಖೇನ ಯಶಸ್ವಿಯಾಗಿ ತೆಗೆದುಹಾಕಿದೆ. ಶಿವಮೊಗ್ಗ ಮೂಲದ ಈ ಮಗು ಸುಮಾರು ತಿಂಗಳುಗಳ ಕಾಲ ಹೊಟ್ಟೆ ಉಬ್ಬರ, ಉಸಿರಾಟ ಮತ್ತು ಆಹಾರದ ತೊಂದರೆಯಿಂದ ಬಳಲುತ್ತಿದ್ದು ಮಗುವಿನ ತೂಕ ಕೇವಲ ೬ ಕೆ.ಜಿ ಯಷ್ಟು ಇದ್ದು ರಕ್ತ ಪರೀಕ್ಷೆಗಳು ಮತ್ತು ಸ್ಕ್ಯಾನ್ ಗಳ ಮೂಲಕ ತಪಾಸಣೆ ಮಾಡುವಾಗ ಮಗುವಿಗೆ ದೊಡ್ಡ ಯಕೃತ್ತಿನ ಗಡ್ಡೆ ಇರುವುದು ಕಂಡುಬಂದಿದೆ.
ಇದು ಸಿಟಿ ಸ್ಕ್ಯಾನ್ ಮೂಲಕ ಪರೀಕ್ಷೆಗೊಳಪಟ್ಟಾಗ ಹೆಪಟೊಬ್ಲಾಸ್ಟೊಮಾ ಎಂದು ಧೃಢಪಟ್ಟಿತು. ಗೆಡ್ಡೆಯು ಯಕೃತ್ತಿನ ಬಹುತೇಕ ಸಂಪೂರ್ಣ ಬಲಭಾಗವನ್ನು ಆಕ್ರಮಿಸಿಕೊಂಡಿತು. ದೊಡ್ಡಗಾತ್ರವನ್ನು ಪರಿಗಣಿಸಿ ೪ ಬಾರಿ ಕಿಮೊಥೆರಪಿಯನ್ನು ಡಾ.ಹರ್ಷಪ್ರಸಾದ್ (ಪೀಡಿಯಾಟ್ರಿಕ್ ಹೆಮಾಟೊ ಆಂಕೊಲಾಜಿಸ್ಟ್) ನೀಡಿದರು. ನಂತರ ಮಗುವಿಗೆ ಯಕೃತ್ತಿನ ಬಲ ಅರ್ಧದ (ಬಲ ಹೆಮಿ ಹೆಪಟೆಕ್ಟಮಿ) ಶಸ್ತ್ರಚಿಕಿತ್ಸಕ
ಛೇದನವನ್ನು ಮಾಡಲಾಯಿತು. ಮಗುವಿನ ಈ ಅಪರೂಪದ ಮತ್ತು ಅಪಾಯಕಾರಿ ಶಸ್ತೃಚಿಕಿತ್ಸೆಯನ್ನು ಡಾ.ವಿವೇಕ್ ಕಜೆ (ಶಸ್ತೃಚಿಕಿತ್ಸಕ ಗ್ಯಾಸ್ಟೋಎಂಟರಾಲಜಿಸ್ಟ್) ಅವರ ಬೆಂಬಲದೊಂದಿಗೆ ಮಕ್ಕಳ ಶಸ್ತೃಚಿಕಿತ್ಸಕರ ತಂಡವು ನಡೆಸಿತು.
ಅರಿವಳಿಕೆ ತಂಡದಲ್ಲಿ ಡಾ.ವಸಂತ ಓಟಿ ಮತ್ತು ಡಾ.ಅಲಿಫ್‌ಶಾ ಇದ್ದರು. ಮಕ್ಕಳ ವ್ಯೆದ್ಯರಾದ ಡಾ.ಮಿಥುನ್ ಎಚ್‌ಕೆ, ಡಾ.ಶ್ಯಾಮ್ ಸುಧೀರ್, ಡಾ. ಆಶಾ ಚೇತನ್ ಅವರು ಮಗುವಿನ ಶಸ್ತೃಚಿಕಿತ್ಸೆಯ ನಂತರದ ಸುಗಮ ಚೇತರಿಕೆಗೆ ಸಹಕರಿಸಿದರು.
ಹೆಪಟೊಬ್ಲಾಸ್ಟೊಮಾಗಳು ಅಪರೂಪದ ಪಿತ್ತಜನಕಾಂಗದ ಗೆಡ್ಡೆಗಳಾಗಿದ್ದು, ಒಂದು ಮಿಲಿಯನ್ ನಲ್ಲಿ ಒಂದರಿಂದ ಎರಡು ಮಕ್ಕಳಿಗೆ ಸಂಭವಿಸುತ್ತದೆ. ಅತ್ಯಂತ ಅಪಾಯಕಾರಿ ಮತ್ತು ಸಂಕೀರ್ಣವಾದ ಈ ಗೆಡ್ಡೆಗಳಿಗೆ ಪ್ರಮುಖ ಹೆಪಾಟಿಕ್ ಛೇದನದ ಅಗತ್ಯವಿದೆ. ಯೆನೆಪೋಯ ವ್ಯೆದ್ಯಕೀಯ ಕಾಲೇಜಿನ ಮಕ್ಕಳ ಶಸ್ತೃಚಿಕಿತ್ಸಾ ವಿಭಾಗವು ದೇಶದ ಈ ಭಾಗದಲ್ಲಿ ಅತ್ಯಂತ ಕೈಗೆಟಕುವ ವೆಚ್ಚದಲ್ಲಿ ಸುಧಾರಿತ ಮಕ್ಕಳ ತೀವ್ರನಿಗಾ ಸೌಲಭ್ಯಗಳ ಬೆಂಬಲದೊಂದಿಗೆ ಇದೇ ರೀತಿಯ ಶಸ್ತೃ ಕ್ರಿಯೆಗಳನ್ನು ನೆರವೇರಿಸಿ ಜೀವ ಉಳಿಸುವ ಮಹಾತ್ಕಾರ್ಯವನ್ನು ಮಾಡಿದೆ.