ಸುಳ್ಯ: ಸುಳ್ಯದಲ್ಲಿ ಮಣ್ಣಿನಡಿಗೆ ಬಿದ್ದು ಸಂಭವಿಸಿದ ಮಹಾ ದುರಂತದಲ್ಲಿ ಶನಿವಾರ ಉತ್ತರ ಭಾರತ ಮೂಲದ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ದುರ್ಘಟನೆಯಲ್ಲಿ ಇಬ್ಬರು ಗಂಡಸರು ಹಾಗೂ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಇದೀಗ ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು ನಿರಂತರ ಶ್ರಮ ವಹಿಸಿ ಮಹಿಳೆ, ಪುರುಷನ ಮೃತ ದೇಹವನ್ನು ಹೊರ ತೆಗೆಯುವ ಕೆಲಸ ಮಾಡಿದ್ದಾರೆ. ಎರಡು ಮೃತ ದೇಹವನ್ನು ಹೊರ ತೆಗೆಯುವಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಸಫಲರಾಗಿದ್ದಾರೆ. ಇನ್ನುಳಿದ ಮೃತ ದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಸಚಿವ ಎಸ್. ಅಂಗಾರ ಆಗಮಿಸಿದ್ದಾರೆ. ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಲೆಟ್ಟಿ ರಸ್ತೆಯಲ್ಲಿ ಸೆಂಟರಿಂಗ್ ಕೆಲಸ ಮಾಡುತ್ತಿದ್ದಾಗ ಮನೆಯ ಹಿಂದುಗಡೆಯಿದ್ದ ದೊಡ್ಡ ಬರೆ ಜರಿದು ಕಾರ್ಮಿಕರ ಮೇಲೆ ಬಿದ್ದು ಅನಾಹುತ ಸಂಭವಿಸಿತ್ತು.