News Kannada
Sunday, June 04 2023
ಮಂಗಳೂರು

ಆಧಾರ್‌ ಪಾನ್‌ ಗಡುವು ವಿಸ್ತರಣೆ: ಜೂನ್‌ 30 ರವರೆಗೆ ಅವಕಾಶ

Aadhaar PAN deadline extended till June 30
Photo Credit : Facebook

ಮಂಗಳೂರು: ಪಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ಜೋಡಿಸಲು ಇರುವ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ 2023ರ ಜೂನ್ 30ರವರೆಗೂ ವಿಸ್ತರಿಸಿದೆ.

ಈ ಮೊದಲು 1 ಸಾವಿರ ರೂ ದಂಡ ಸಹಿತವಾಗಿ ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ 2023ರ ಮಾರ್ಚ್ 31ರವರೆಗೆ ಸಮಯ ನೀಡಲಾಗಿತ್ತು. ಕೊನೆಯ ದಿನ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧದ ಜನರ ಆಕ್ರೋಶ ತೀವ್ರಗೊಂಡಿತ್ತು. ಜತೆಗೆ ಜೋಡಣೆಗೆ ವೇದಿಕೆಯಾಗಿರುವ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ಈ ವಿಭಾಗ ತೆರೆದುಕೊಳ್ಳುತ್ತಲೇ ಇರಲಿಲ್ಲ. ಈ ತಾಂತ್ರಿಕ ದೋಷದ ಬಗ್ಗೆ ಅನೇಕರು ದೂರು ನೀಡಿದ್ದರು.

ಈಗ ದಿನಾಂಕವನ್ನು ಜೂನ್ 30ರವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದೆ. ಈ ಸಂಬಂಧ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಅದು ತಿಳಿಸಿದೆ. ಮೂರು ತಿಂಗಳ ಬಳಿಕವೂ ಈ ಎರಡೂ ಮಹತ್ವದ ದಾಖಲೆಗಳನ್ನು ಲಿಂಕ್ ಮಾಡುವುದರಲ್ಲಿ ತೆರಿಗೆದಾರ ವಿಫಲನಾದಲ್ಲಿ, ಅವರ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಅಂತಹ ಪ್ರಕರಣಗಳಲ್ಲಿ ತೆರಿಗೆದಾರ ತಮ್ಮ ಪಾನ್‌ ಕಾರ್ಡ್ ಅನ್ನು ಒದಗಿಸಲು, ಅದನ್ನು ಉಲ್ಲೇಖಿಸಲು ಅಥವಾ ಬಳಸಲು ಸಾಧ್ಯವಾಗುವುದಿಲ್ಲ.

See also  ಬೆಳ್ತಂಗಡಿ: ಕ್ಯಾಮೆರಾ ಟ್ರ್ಯಾಪಿಂಗ್ , ಚಿರತೆ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು