ಬೆಳ್ತಂಗಡಿ: ಡಿಕೆಶಿ ಪತ್ನಿ ಬಂದ ಹೆಲಿಕಾಪ್ಟರ್ ಚೆಕ್ ಮಾಡಲು ಬಂದ ಚುನಾವಣಾಧಿಕಾರಿ ಮತ್ತು ಹೆಲಿಕಾಪ್ಟರ್ ಸಿಬ್ಬಂದಿಗಳ ನಡುವೆ ಮಾತಿಗೆ ಮಾತಾದ ವಿದ್ಯಮಾನ ಧರ್ಮಸ್ಥಳ ಹೆಲಿಪ್ಯಾಡ್‌ನಲ್ಲಿ ಶನಿವಾರ ನಡೆದಿದೆ.
ಇದು ಖಾಸಗಿ ಹೆಲಿಕಾಪ್ಟರ್ ನಮ್ಮಲ್ಲಿ ಚೆಕ್ ಮಾಡಲು ಅವಕಾಶ ಇಲ್ಲ ಎಂದ ಹೆಲಿಕಾಪ್ಟರ್ ಪೈಲೆಟ್.ಇದರಿಂದ ಹೆಲಿಕಾಪ್ಟರ್ ಪೈಲೆಟ್ ರಾಮ್ ದಾಸ್ ಮತ್ತು ಚುನಾವಣಾಧಿಕಾರಿ ನಡುವೆ ಸ್ವಲ್ಪ ಹೊತ್ತು ಮಾತಿನ ಚಕಮಕಿ ನಡೆಯಿತು.
ಪಟ್ಟುಬಿಡದ ಅಧಿಕಾರಿಗಳು ಕೊನೆಗೆ ಹೆಲಿಕಾಪ್ಟರ್ ತಪಾಸಣೆ ಮಾಡಿಯೇ ಬಿಟ್ಟರು. ಆದರೆ ಬರಿಗೈಯಲ್ಲಿ ವಾಪಸಾದರು.
ಡಿಕೆಶಿ ಪತ್ನಿ ಉಷಾ ,ಮಗ ,ಮಗಳು ಆಳಿಯ ಒಂದು ಹೆಲಿಕಾಪ್ಟರ್ ನಲ್ಲಿ ಧರ್ಮಸ್ಥಳ ಕ್ಕೆ ಆಗಮಿಸಿದ್ದರು. ಇನ್ನೊಂದು ಹೆಲಿಕಾಪ್ಟರ್ ನಲ್ಲಿ ಡಿಕೆಶಿ ಬಂದಿದ್ದರು.