News Kannada
Thursday, September 29 2022

ಉಡುಪಿ

ರಾಜ್ಯ ಮಟ್ಟದ ಅತ್ಯುತ್ತಮ ಯುವ ಮಂಡಳ ಪ್ರಶಸ್ತಿಗೆ ಶಾಂತಿನಿಕೇತನ ಯುವ ವೃಂದ ಆಯ್ಕೆ - 1 min read

Photo Credit : News Kannada

ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆ, ಭಾರತ ಸರ್ಕಾರ ಪ್ರತಿ ವರ್ಷ ಕೊಡುತ್ತ ಬಂದಿರುವ  ರಾಜ್ಯ ಅತ್ಯುತ್ತಮ ಯುವ ಮಂಡಳ ಪ್ರಶಸ್ತಿಗೆ ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಕುಡಿಬೈಲು ಕುಚ್ಚೂರು,  ಶಾಂತಿನಿಕೇತನ ಯುವ ವೃಂದ (ರಿ)  ಇವರು 2020-21ನೇ  ಸಾಲಿಗೆ ಆಯ್ಕೆಯಾಗಿ,ರಾಷ್ಟ್ರ ಮಟ್ಟದಲ್ಲಿ ಉಡುಪಿಯು ಕರ್ನಾಟಕ ರಾಜ್ಯವನ್ನು ಪ್ರತಿನಿದಿಸಲು ಆಯ್ಕೆಯಾಗಿದ್ದಾರೆ.

ಫೆ. 17 ರಂದು ನಡೆದ ರಾಜ್ಯ ಮಟ್ಟದ  ಅತ್ಯುತ್ತಮ ಯುವ ಮಂಡಳ ಪ್ರಶಸ್ತಿ  ಆಯ್ಕೆ ಸಭೆಯಲ್ಲಿ ಸನ್ಮಾನ್ಯ ಆಯುಕ್ತರು, ಯುವ ವ್ಯವಹಾರ ಹಾಗೂ ಯುವ ಸಬಲಿಕರಣ ಇಲಾಖೆ, ಕರ್ನಾಟಕ ಸರ್ಕಾರ  ಇವರ ಘನ ಅಧ್ಯಕ್ಷತೆಯಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಹಲವಾರು ಅಧಿಕಾರಿಗಳ ಸದಸ್ಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಆರಿಸಿ ಬಂದ 28 ಜಿಲ್ಲಾ ಅತ್ಯುತ್ತಮ ಯುವ ಮಂಡಳಗಳು ಸ್ಪಧೆಯಲ್ಲಿದ್ದು ಅಂತಿಮ ಹಂತದ ಆಯ್ಕೆಯಲ್ಲಿ ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಕುಡಿಬೈಲು ಕುಚ್ಚೂರು,  ಶಾಂತಿನಿಕೇತನ ಯುವ ವೃಂದ (ರಿ) ಇವರು 2020-2021ಸಾಲಿಗೆ ರಾಜ್ಯಮಟ್ಟದ ಅತ್ಯುತ್ತಮ ಯುವ ಮಂಡಳ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆಗೊಂಡರು ಎಂದು ನೆಹರು ಯುವ ಕೇಂದ್ರ ಸಂಘಟನೆಯ ರಾಜ್ಯ ನಿರ್ದೇಶಕರು ಹಾಗೂ ಆಯ್ಕೆ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಎಮ್.ಎನ್.ನಟರಾಜ್‍ರವರು ಸ್ಥಳಿಯ ನೆಹರೂ ಯುವ ಕೇಂದ್ರದ ಜಿಲ್ಲಾ ಯುವಜನ  ಅಧಿಕಾರಿ ಶ್ರೀ ವಿಲ್ಪ್ರೆಡ್ ಡಿ’ಸೋಜರವರಿಗೆ ತಿಳಿಸಿ ಪತ್ರಿಕಾ ಮಾದ್ಯಮಕ್ಕೆ ಈ ಕುರಿತು ವಿಷಯ ಬಿತ್ತರಿಸಲು ತಿಳಿಸಿದರು.

ಈ ಬಾಬ್ತಿನಲ್ಲಿ ಮೆಲ್ಕಂಡ ಉಡುಪಿ ಜಿಲ್ಲೆಯ ಅತ್ಯುತ್ತಮ ಯುವ ಮಂಡಳ ಪ್ರಶಸ್ತಿಗಾಗಿ ಅರ್ಜಿಗಳನ್ನು ಕರೆಯಲಾಗಿತ್ತು. ಮಾನ್ಯ ಉಡುಪಿ ಜಿಲ್ಲಾಧಿಕಾರಿಗಳ ಅದ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಅಂತಿಮ ಸುತ್ತಿನ ಆಯ್ಕೆಯಲ್ಲಿ ಮೇಲ್ಕಂಡ ಜಿಲ್ಲೆಯ ಅತ್ಯುತ್ತಮ ಯುವ ಮಂಡಳ ಪ್ರಶಸ್ತಿಗೆ ಶಾಂತಿನಿಕೇತನ ಯುವ ವೃಂದ (ರಿ) ಕುಡಿಬೈಲು, ಕುಚ್ಚೂರು, ಹೆಬ್ರಿತಾಲೂಕು ಉಡುಪಿ ಈ ಬಾರಿಆಯ್ಕೆಯಾಗಿತ್ತು.

ಕಳೆದ 9 ವರ್ಷದಿಂದ ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಕುಚ್ಚೂರು, ಕುಡಿಬೈಲು ಶಾಂತಿನಿಕೇತನ ಯುವ ವೃಂದ (ರಿ) ಇವರು ಸಮಾಜ ಸೇವೆ ಹಾಗೂ ಸಮಾಜದ ಸರ್ವತೋಮುಖ ಏಳ್ಗೆಗಾಗಿ, ಸ್ವಯಂ ಸೇವೆಯನೊಳಗೊಂಡ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನ ರೂಪಿಸಿಕೊಂಡು ಬಂದಿರುವ ಇವರ ಸೇವೆ ನಿಜಕ್ಕೂ ಶ್ಲಾಘನೀಯ.

ಸಮಾಜದ ಎಲ್ಲ ವಿಧದ ಜನರೊಡನೆ ಬೆರೆತು ಸ್ವಚ್ಚತೆ, ಆರೋಗ್ಯಕ್ಕೆ ಸಂಬಂದಿಸಿದ ಹಲವಾರು ಉಚಿತ ಶಿಬಿರಗಳ ಆಯೋಜನೆ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪಠ್ಯಪುಸ್ತಕ, ಸಮವಸ್ತ್ರ, ಧನ ಸಹಾಯ, ಪರಿಸರ ಕಾಳಜಿ ಮೂಡಿಸುವಿಕೆ ಹಾಗೂ ಸಂಬಂದಿತ ಕಾರ್ಯಕ್ರಮಗಳ ಆಯೋಜನೆ, ಸಮಾಜಿಕ ಪಿಡುಗನ್ನು ನಿಭಾಹಿಸಲು ಕಾರ್ಯಗಾರಗಳ ಆಯೋಜನೆ, ವನಮಹೋತ್ಸವದ ಆಚರಣೆ, ಹಲವಾರು ರಾಷ್ಟ್ರೀಯ ಹಬ್ಬಗಳ ಆಚರಣೆ, ಸರ್ಕಾರದ ಹಲವಾರು ಜನೋಪಯೋಗಿ ಯೋಜನೆ / ಕಾರ್ಯಕ್ರಮಗಳಲ್ಲಿ ಮುಂದಾಳತ್ವ ವಹಿಸುವಿಕೆ, ಬ್ರಷ್ಟಾಚಾರ ನಿರ್ಮೂಲನೆಗೆ ಪೂರಕವಾಗುವ ಸಭೆಗಳನ್ನು ನಡೆಸುವುದು, ರಸ್ತೆ ಅಪಘಾತ ತಡೆ ಮಾಸಾಚರಣೆ ಹಾಗೂ ಅದರ ಬಗ್ಗೆ ಅರಿವು ಮೂಡಿಸುವುದು, ಮಕ್ಕಳಿಗಾಗಿ ಹಲವಾರು ಸಾಂಸೃತಿಕ  ಕಾರ್ಯಕ್ರಮ ಹಾಗೂ ಜಿಲ್ಲಾಮಟ್ಟದ ಹಾಗೂ ಗ್ರಾಮೀಣ ಕ್ರೀಡಾ ಕೂಟಗಳ ಆಯೋಜನೆ, ತ್ಯಾಜ್ಯ ವಸ್ತು ವಿಂಗಡಣೆ ಹಾಗೂ ಸ್ವಚ್ಚತೆ ಅರಿವು ಮೂಡಿಸುವ ಹಲವಾರು ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಶ್ರಮದಾನದ ಕಾರ್ಯಕ್ರಮಗಳ ಆಯೋಜನೆ ಹಾಗೂ ಮುಂದಾಳತ್ವ ವಹಿಸುವಿಕೆ, ನಗದು ರಹಿತ ವ್ಯವಹಾರದ ತಿಳುವಳಿಕೆಗಾಗಿ ಕಾರ್ಯಗಾರಗಳ ಆಯೋಜನೆ ಹಾಗೂ ಇನ್ನಿತರ ಹಲವಾರು ಜನಹಿತ, ಜನಪರ ಕಾರ್ಯಕ್ರಮಗಳ  ಹಮ್ಮಿಕೊಂಡಿರುತ್ತಾರೆ. ಶಾಂತಿನಿಕೇತನ ಯುವ ವೃಂದವು ತಮ್ಮ ಗ್ರಾಮದ ಅಭಿವೃಧಿಗಾಗಿ, ಜನರ ಸಹಾಯಕ್ಕಾಗಿ ಶಾಂತಿನಿಕೇತನ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್‍ನ್ನು ಮೊದಲ ಬಾರಿಗೆ ಪ್ರಾರಂಭಿಸಿದ್ದು ಯಾವುದೇ ಯುವ ಮಂಡಳವು ಮಾಡದ ಸಾಧನೆಯನ್ನು ಮಾಡಿರುವರು.

See also  ಹಿಜಾಬ್​ ನಿರಾಕರಿಸಿದ್ದಕ್ಕೆ ಪರೀಕ್ಷೆ ಬರೆಯದೇ ವಿದ್ಯಾರ್ಥಿನಿಯರು ಮನೆಗೆ ವಾಪಸ್

ವಿಶೇಷವಾಗಿ ಸದ್ಯದ ಕೋವಿಡ್-19  ಸೊಂಕಿನ ವೈಷಮ್ಯ ಕಾಲದಲ್ಲಿ ಸಮಾಜದ ದುರ್ಬಲ ಜನರಿಗೆ ಅಕ್ಕಿ ಇನ್ನಿತರ ದೈನಂದಿನದ ಪಡಿತರ ವಸ್ತುಗಳನ್ನು ಸಾರ್ವಜನಿಕರಿಂದ ಒಟ್ಟುಗೂಡಿಸಿ ವಿತರಣೆ ಮಾಡುವುದು, ಸಂಘದ ಸದಸ್ಯರಿಂದ ಮಾಸ್ಕ್ ತಯಾರಿಕೆ ಹಾಗೂ ವಿತರಣೆ, ಕೋವಿಡ್-19 ಸೊಂಕಿನ ವೈಷಮ್ಯ ಕುರಿತು ಸಾರ್ವಜನಿಕರಲ್ಲಿ ಜಾಗ್ರತಿ ಮೂಡಿಸುವುದು,ಈ ಕುರಿತಾದ ಮಾಹಿತಿಯ ಬಿತ್ತಿ ಪತ್ರಗಳನ್ನು ಮನೆಮನೆಗಳಿಗೆ ಹಂಚುವುದು, ಕೋವಿಡ್-19 ವಾರಿಯರ್ಸ/ಆಶಾ ಕಾರ್ಯಕರ್ತರು ಆರೋಗ್ಯ ಇಲಾಖೆಯ ಸಿಬ್ಬಂದಿ ಇವರನ್ನು ಗುರಿತಿಸಿ ಅವರಿಗೆ ದೈರ್ಯ ತುಂಬಿ ಸನ್ಮಾನಿಸುವುದರ ಮೂಲಕ ಕೋರೊನಾ ಜನಜಾಗ್ರತಿ ಮೂಡಿಸುವ  ಇವರ  ಸೇವೆ ಆಯ್ಕೆ ಸಮಿತಿಯ ಗಮನ ಸೆಳೆದು ಪ್ರಶಸ್ತಿ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದಲ್ಲದೆ ಸಾರ್ವಜನಿಕರ  ಪ್ರಶಂಸೆಗೆ ಪಾತ್ರವಾಗಿದೆ ಎಂದು ತಿಳಿಸಿದೆ.

ಈ ಮೇಲ್ಕಂಡ ಪ್ರಶಸ್ತಿಯು ರೂ. 75 ಸಾವಿರ ನಗದು ಹಾಗೂ ಪ್ರಶಂಸ ಪತ್ರವನ್ನು ಒಳಗೊಂಡಿರುತ್ತದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಜನ ಅಧಿಕಾರಿಗಳು ತಿಳಿಸಿದ್ದಾರೆ. ಶಾಂತಿನಿಕೇತನ ಯುವ ವೃಂದ (ರಿ) ಕುಡಿಬೈಲು, ಕುಚ್ಚೂರು, ಹೆಬ್ರಿ ತಾಲೂಕು ಉಡುಪಿ ಜಿಲ್ಲೆ ಇವರು 2020-21ನೇ  ಸಾಲಿಗೆ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಈ ಮೂಲಕಆಯ್ಕೆಯಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳಿಸುವಲ್ಲಿ ಯಶಸ್ವಿಯಾಗಲಿ ಎಂಬುವುದು ನಮ್ಮೆಲ್ಲರ ಹಾರೃಕೆ.

ಸಂದೇಶ

ಕಳೆದ 09 ವರ್ಷದಿಂದ ಸಮಾಜ ಸೇವೆ ಹಾಗೂ ಸಾರ್ವಜನಿಕ ಒಳತಿಗಾಗಿ ಶಾಂತಿನಿಕೇತನ ಯುವ ವೃಂದ (ರಿ) ನಿಜವಾಗಿಯೂ ಆದರ್ಶದಾಯಕ ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ. ಹಲವಾರು ಸಂಘ ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆ ಆದರೆ ಅಲ್ಪ ಸಮಯದಲ್ಲಿ ಅವು ತಮ್ಮ ಕಾರ್ಯಕ್ಷೇತ್ರದಿಂದ ನಿರ್ಗಮಿಸುತ್ತವೆ ಎಕೆಂದರೆ ಅವುಗಳಿಗೆ ಸಮರ್ಪಕವಾದ ಗುರಿ ಉದ್ದೇಶ ಇಲ್ಲದೆ ಇರುವುದು. ಆದರೆ ಶಾಂತಿನಿಕೇತನ ಯುವ ವೃಂದ (ರಿ) ಕುಡಿಬೈಲು, ಕುಚ್ಚೂರು, ಹೆಬ್ರಿ ತಾಲೂಕು ಉಡುಪಿ ಜಿಲ್ಲೆ ಸಮರ್ಪಿತ ಸಮಾಜ ಮುಖೆನ ಕಾರ್ಯಕ್ರಮಗಳನ್ನು  ಹಮ್ಮಿಕೊಂಡು ಬಂದು ಕೇವಲ ಮಾದರಿಯಷ್ಟೆ ಅಲ್ಲ  ಸರ್ವರ ಪ್ರಸಂಸೆಗೂ ಪಾತ್ರವಾಗಿದೆ. ಶಾಂತಿನಿಕೇತನ ಯುವ ವೃಂದ (ರಿ) ಅತ್ಯುತ್ತಮ ಯುವ ಮಂಡಳ ರಾಜ್ಯ ಪ್ರಶಸ್ತಿ ಬಂದಿರುವುದು ಅತ್ಯಂತ ಸಂತೋಷ ತಂದಿದೆ. ಹಾಗೂ ಉಡುಪಿ ಜಿಲ್ಲೆಗೂ ಗೌರವ ತಂದಿದೆ.”
– ಕೂರ್ಮ ರಾವ್ ಎಮ್.,ಐ.ಎ.ಎಸ್, ಮಾನ್ಯ ಉಡುಪಿ ಜಿಲ್ಲಾಧಿಕಾರಿಗಳು.

ಈ ಬಾರಿ ರಾಜ್ಯ ಮಟ್ಟದಲ್ಲಿ ಶಾಂತಿನಿಕೇತನ ಯುವ ವೃಂದ (ರಿ) ಪ್ರಶಸ್ತಿಗಳಿಸುವುದು ನಿಜವಾಗಿಯೂ ಹೆಮ್ಮೆಯ ವಿಷಯ ಈ ಯುವಕ ಸಂಘ ಬೇರೆ ಸಂಘಗಳೀಗೆ ನಿಜವಾಗಿಯೂ ಮಾದರಿಯಾಗಿದೆ. ಸಮಾಜ ಮುಖೇನ ಕೆಲಸಗಳನ್ನು ತುಂಬ ಶ್ರದ್ದೆ ಹಾಗೂ ಸಮರ್ಪಕವಾದ ಗುರಿ ಇಟ್ಟುಕೊಂಡು ಮಾಡುವ ಇವರ ಕಾರ್ಯ ವೈಕರಿ ಶ್ಲಾಘನೀಯವಾಗಿದೆ. ಶಾಂತಿನಿಕೇತನ ಯುವ ವೃಂದ (ರಿ) ಕ್ಕೆ ಇನ್ನು ಹೆಚ್ಚಿನ ಜನ ಸೇವೆ ಹಾಗೂ ಸಮಾಜ ಸೇವೆ ಮಾಡುವ ಭಾಗ್ಯ ದೊರೆಯಲಿ ಎಂದು ಆಶಿಸುತ್ತೆನೆ. ಕಳೆದ ವರ್ಷ ಯುವಕ ಮಂಡಳ ಸಾಣೂರಿಗೆ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದ್ದು, ನಿರಂತರ ಕಳೆದೆರಡು ವರ್ಷಗಳಿಂದ ಉಡುಪಿ ಜಿಲ್ಲೆ ಯುವ ಮಂಡಳದ ಪ್ರಶಸ್ತಿಯನ್ನು ಪಡೆದ ಮೊದಲ ಜಿಲ್ಲೆಯಾಗಿದೆ.”

See also  ಉಡುಪಿ : ನಟ ದರ್ಶನ್ , ಚಿಕ್ಕಣ್ಣರಿಂದ 'ಕೊಲ್ಲೂರು ಶ್ರೀ ಮೂಕಾಂಬಿಕೆ ದರ್ಶನ'
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11671
Media Release

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು