ಉಡುಪಿ, ಅ.27: ಕೆಮ್ಮಣ್ಣು ನೆಜಾರು ಎಂಬಲ್ಲಿ 10 ದಿನಗಳ ಹಿಂದೆ ನಾಪತ್ತೆಯಾಗಿದ್ದ ಪ್ರವೀಣ್ ಬೆಳ್ಚಡ ಎಂಬವರ ಶವ ಬ್ರಹ್ಮಾವರದ ಹಂದಾಡಿಯ ಕಂಬಳಗದ್ದೆ ಹೊಳೆಯ ದಡದಲ್ಲಿ ಅ.27ರ ಗುರುವಾರ ಪತ್ತೆಯಾಗಿದೆ. ಈಶ್ವರ್ ಮಲ್ಪೆ ಶವವನ್ನು ಹೊಳೆಯಿಂದ ಹೊರತೆಗೆದಿದ್ದಾರೆ.
ಅಕ್ಟೋಬರ್ ೧೮ ರ ರಾತ್ರಿ ಪ್ರವೀಣ್ ತನ್ನ ಸ್ಕೂಟರ್ ನೊಂದಿಗೆ ಕಾಣೆಯಾಗಿದ್ದನು. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅವನು ಡೆತ್ ನೋಟ್ ಬರೆದಿಟ್ಟಿದ್ದನು ಮತ್ತು ಅವನು ಕಾಣೆಯಾಗುವ ಮೊದಲು ಅದನ್ನು ಮನೆಯಲ್ಲಿಯೇ ಬಿಟ್ಟಿದ್ದನು. ಕೆಲವು ದಿನಗಳ ಹಿಂದೆ ಬ್ರಹ್ಮಾವರ ಸೇತುವೆ ಬಳಿ ಪ್ರವೀಣ್ ಅವರ ಸ್ಕೂಟರ್ ಪತ್ತೆಯಾಗಿತ್ತು.
ಈಶ್ವರ್ ಮಲ್ಪೆ ನೇತೃತ್ವದ ಡೈವರ್ ಗಳ ತಂಡವು ಅಗ್ನಿಶಾಮಕ ದಳ ಮತ್ತು ಪೊಲೀಸರ ಸಹಾಯದಿಂದ ಪ್ರವೀಣ್ ಗಾಗಿ ನದಿಯಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಆದರೆ, ಪ್ರವೀಣ್ ಮೃತದೇಹ ಪತ್ತೆಯಾಗಿಲ್ಲ. ಈಗ ತಂಡವು ಅಂತಿಮವಾಗಿ ದೇಹವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದೆ.