ಉಡುಪಿ: ಕೊರಂಗ್ರಪಾಡಿ ಗ್ರಾಮದ ಕೆಮ್ತೂರಿನ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಎರಡು ಮನೆಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಅಕ್ಕಪಕ್ಕದ ಸಂಬಂಧಿಗಳ ಅಮಿತಾ ಜೆ. ಸುವರ್ಣ ಹಾಗೂ ಶ್ವೇತಾ ಎಸ್ ಸಾಲ್ಯಾನ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಅಮಿತಾ ಅವರು ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ವಿದ್ಯುತ್ ಮೀಟರ್ ನ ಬಾಕ್ಸ್ ನ ಒಳಗಡೆ ಇಟ್ಟು ಕಾರ್ಯಕ್ರಮಕ್ಕೆ ತೆರಳಿದ್ದರು. ಬಳಿಕ ಬಂದು ಚಿನ್ನವನ್ನು ಕಪಾಟಿನ ಒಳಗಡೆ ಇಡಲು ಹೋದಾಗ 1,27 ಲಕ್ಷ ರೂ. ಮೌಲ್ಯದ ಚಿನ್ನಭರಣ ಕಳವಾಗಿರುವುದು ಗಮನಕ್ಕೆ ಬಂದಿದೆ.
ಇದೇ ಸಮಯದಲ್ಲಿ ಶ್ವೇತಾ ಅವರ ಮನೆಯಲ್ಲೂ ಕಳ್ಳ ಕೈಚಳಕ ತೋರಿದ್ದು, 1,13 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ. ಸ್ಥಳೀಯ ವ್ಯಕ್ತಿಯೇ ಕಳ್ಳತನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.