ಕಾರ್ಕಳ: ಪಶ್ಚಿಮ ಘಟ್ಟ ತಪ್ಪಲು ತೀರಾ ಪ್ರದೇಶವಾದ ಕಾರ್ಕಳ ತಾಲೂಕಿನ ಈದು ಗ್ರಾಮದ ಮೋಟಜೆ ಎಂಬಲ್ಲಿಂದ ಶ್ರೀ ರಾಮಚಂದ್ರನ ಜನ್ಮಭೂಮಿ ಅಯೋಧ್ಯೆಗೆ ನೆಲ್ಲಿಕಾರು ಕೃಷ್ಣಶಿಲಾ ಕಲ್ಲನ್ನು ಸಾಗಿಸಲಾಯಿತು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದ್ದು ಮೂರ್ತಿ ನಿರ್ಮಾಣಕ್ಕಾಗಿ ನೆಲ್ಲಿಕಾರ್ ನಿಂದ ಬೃಹತ್ ಶಿಲೆಯನ್ನು ಇಂದು ಕೊಂಡೊಯ್ಯಲಾಗುತ್ತಿದೆ ಎಂದು ತಿಳಿದು ಬಂದಿದೆ.
ಸುಮಾರು 9 ಅಡಿ ಉದ್ದ ದ ಶಿಲೆಯನ್ನು ಈದು ಗ್ರಾಮದ ಮೋಟಜೆ ಎಂಬಲ್ಲಿಂದ ಸಾಗಿಸಲಸಯಿತು. ರಾತ್ರಿ ವೇಳೆಗೆ ಬಜಗೋಳಿ ಅಯ್ಯಪ್ಪ ಮಂದಿರದಿಂದ ಕೊಂಡೊಯ್ಯಲಾಯಿತು.