ಉಡುಪಿ: ಶೇಕಡಾ 75 ಕ್ಕೂ ಅಧಿಕ ಅಂಗವಿಕಲತೆಯನ್ನು ಹೊಂದಿರುವ ಉಡುಪಿ ವಿಧಾನಸಭಾ ಕ್ಷೇತ್ರದ 5 ಮಂದಿ ವಿಶೇಷ ಚೇತನ ಫಲಾನುಭವಿಗಳಿಗೆ ಮೋಟೋರೈಸ್ಡ್ ಟ್ರೈಸಿಕಲನ್ನು ಉಡುಪಿ ಶಾಸಕರ ಕಚೇರಿಯಲ್ಲಿ ಇಂದು ವಿತರಣೆ ಮಾಡಲಾಯಿತು.
ಹೇರೂರು ಗ್ರಾಮದ ಫ್ರಾನ್ಸಿಸ್ ಡಿ ಸೋಜಾ ಮತ್ತು ಸುರೇಶ ಪೂಜಾರಿ, ಕುತ್ಪಾಡಿಯ ರಾಜೇಶ್ ಪೂಜಾರಿ, ಈಶ್ವರನಗರದ ಝನಿತ್ ಪಾಲನ್, ಮಲ್ಪೆಯ ಮುರಳಿಧರ ಅವರಿಗೆ ಶಾಸಕರ ಗೃಹ ಕಚೇರಿಯಲ್ಲಿ ಶಾಸಕ ರಘುಪತಿ ಭಟ್ ಅವರು ಮೋಟೋರೈಸ್ಡ್ ಟ್ರೈಸಿಕಲ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ವಿಶೇಷ ಚೇತನ ಕಲ್ಯಾಣಾಧಿಕಾರಿಗಳಾದ ರತ್ನ ಸುವರ್ಣ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.