ಉಡುಪಿ: ಕಾಂಗ್ರೆಸ್ ನ ಯಾವುದೇ ಆಸೆ, ಪೊಳ್ಳು ಭರವಸೆಗೆ ಜನ ತಲೆ ಬಾಗುವುದಿಲ್ಲ ಎಂದು ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನ ಹಿರಿಯ ನಾಯಕರೆಲ್ಲರೂ ಇದು ನಮ್ಮ ಕೊನೆಯ ಚುನಾವಣೆ ಅಂತ ಹೇಳುತ್ತಿದ್ದಾರೆ. ಆದ್ರೆ ಇದು ಕಾಂಗ್ರೆಸ್ ನದ್ದೇ ಕೊನೆಯ ಚುನಾವಣೆಯಾಗಲಿದೆ. ಬಿಜೆಪಿ ಯುವಕರಿಗೆ ಟಿಕೆಟ್ ನೀಡುವ ದೃಷ್ಟಿಯಲ್ಲಿ ಹೊಸ ಮುಖಗಳಿಗೆ ಅವಕಾಶ ಕೊಟ್ಟಿದೆ ಎಂದರು.
ಸೊರಕೆ ಸುಳ್ಳು ಪ್ರಚಾರ ಮಾಡಿ ಓಟು ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ಬಾಲಿಷತನದ ಹೇಳಿಕೆ ಕೊಡುತ್ತಿದ್ದಾರೆ. ಹೆಲಿಕಾಪ್ಟರ್ ನಲ್ಲಿ ಹಣ ತರಲಾಗಿದೆ ಅಂತ ಸುಳ್ಳು ಪ್ರಚಾರ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.