ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಾಂತ ಅಬ್ಬರದ ಮಳೆ ಸುರಿಯುತ್ತಿದ್ದು ಭಟ್ಕಳದ ಮಟ್ಠಳ್ಳಿಯಲ್ಲಿ ಮತ್ತೆ ಭೂಕುಸಿತವಾಗಿದೆ. ಇದರಿಂದ ಜನರಲ್ಲಿ ಮತ್ತೇ ಆತಂಕ ಸೃಷ್ಟಿಯಾಗುದೆ.
ಗುಡ್ಡ ಕುಸಿತ ಹಿನ್ನೆಲೆಯಲ್ಲಿ, ಗುಡ್ಡದ ಸುತ್ತಮುತ್ತಲ ಪ್ರದೇಶಗಳ ಹತ್ತಕ್ಕೂ ಹೆಚ್ಚು ಮನೆಗಳ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಈ ಭಾಗದ ರಸ್ತೆ ಸಂಚಾರವನ್ನು ಸ್ಥಗಿತ ಮಾಡಲಾಗಿದೆ. ಮುಟ್ಠಳ್ಳಿಯಿಂದ ಸಾಗುವ ಸಬ್ಬತ್ತೆ ಹಾಗೂ ಇನ್ನಿತರ ಗ್ರಾಮಕ್ಕೆ ತೆರಳಲು ಬದಲಿ ರಸ್ತೆ ವ್ಯವಸ್ಥೆ ಮಾಡಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಭಾರಿ ಮಳೆಯಿಂದ ಗುಡ್ಡ ಕುಸಿತವಾಗಿ ನಾಲ್ವರು ಇದೇ ಸ್ಥಳದಲ್ಲಿ ಮೃತಪಟ್ಟಿದ್ದರು. ಅದರಂತೆ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಇಡಗುಂದಿ ಬಳಿ ಮರ ಬಿದ್ದು ಹುಬ್ಬಳ್ಳಿ-ಅಂಕೋಲಾ ಭಾಗದ ಸಂಚಾರ ಕೆಲವು ಸಮಯ ಅಸ್ಥವ್ಯಸ್ತವಾಗಿದ್ದು ಇದೀಗ ಬಿದ್ದ ಮರವನ್ನು ತೆರವುಗೊಳಿಸಲಾಗಿದೆ.