ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸೂಚನೆ ಇರುವ ಕಾರಣದಿಂದ ಆರಂಭದಲ್ಲೇ ಆಳ ಸಮುದ್ರ ಮೀನುಗಾರಿಕೆ ನಿಂತಿದೆ. ಕಳೆದ ಕೆಲವೇ ದಿನದ ಹಿಂದೆ, ಜಿಲ್ಲೆಯಲ್ಲಿ ಆಳ ಸಮುದ್ರ ಮೀನುಗಾರಿಕೆ ಆರಂಭಗೊಂಡಿತ್ತು. ಉತ್ತಮ ಮೀನುಗಾರಿಕೆಯ ನಿರೀಕ್ಷೆಯಲ್ಲಿದ್ದ ಮೀನುಗಾರರು ಆರಂಭದಲ್ಲೇ ನಿರಾಸರಾಗಿದ್ದಾರೆ.
ಹವಾಮಾನ ವೈಪರಿತ್ಯದಿಂದಾಗಿ ಬೈತಖೋಲ ಬಂದರು ವ್ಯಾಪ್ತಿಯಲ್ಲಿ ಬೋಟುಗಳು ಲಂಗರು ಹಾಕಿವೆ. ಕಳೆದ ಎರಡು ವರ್ಷಗಳಿಂದ ಕೊರೊನಾ, ಹವಾಮಾನ ವೈಪರಿತ್ಯದಿಂದಾಗಿ ಆರಂಭದಲ್ಲಿ ಸರಿಯಾಗಿ ಮೀನುಗಾರಿಕೆ ನಡೆದಿರಲಿಲ್ಲ. ಆದರೆ ಈ ಭಾರಿ ಉತ್ತಮ ಮೀನುಗಾರಿಕೆ ನಿರೀಕ್ಷೆ ಹೋದಿದ್ದ ಬೋಟ್ ಮಾಲಿಕರುಗಳು ಜುಲೈ ಅಂತ್ಯದ ವೇಳೆಗೆ ಬೋಟ್, ಬಲೆ ದುರಸ್ಥಿಗೊಳಿಸಿಕೊಂಡಿದ್ದರು.
ಅಲ್ಲದೆ ೩೦ಕ್ಕೂ ಹೆಚ್ಚು ಬೋಟ್‌ಗಳು ಮೀನುಗಾರಿಕೆಗೂ ತೆರಳಿದ್ದವು. ಆದರೆ ಹವಮಾನ ವೈಪರಿತ್ಯದಿಂದ ವಾಪಸ್ಸ್ ಬಂದ ಬೋಟ್‌ಗಳು ಕಳೆದೊಂದು ವಾರದಿಂದ ಲಂಗರು ಹಾಕಿವೆ. ಮಳೆಗಾಲದ ನಿಷೇಧದ ಅವಧಿ ಜು.31ಕ್ಕೆ ಮುಕ್ತಾಯವಾಗಿದ್ದು ಮಾರನೇ ದಿನವೇ ಮೀನುಗಾರಿಕೆ ಕೂಡ ಆರಂಭಗೊಂಡಿತ್ತು. ಆದರೆ ಹವಮಾನ ವೈಪರಿತ್ಯದಿಂದಾಗಿ ಒಂದೇ ದಿನಕ್ಕೆ ಮೀನುಗಾರಿಕೆಗೆ ತೆರಳಿದ ಬೋಟ್‌ಗಳು ಬರಿಗೈಲ್ಲಿ ವಾಪಸ್ಸ್ ಆಗಿವೆ.
ಹವಾಮಾನ ಇಲಾಖೆ ಆ. 11ರ ವರೆಗೆ ಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ ನೀಡಿರುವ ಹಿನ್ನಲೆ ಜಿಲ್ಲೆಯ ಕರಾವಳಿಯಲ್ಲಿ ಎಲ್ಲ ಬೋಟ್‌ಗಳು ಲಂಗರು ಹಾಕಿಕೊಂಡಿವೆ.