ಕಾರವಾರ: ಶಿರವಾಡ ಗ್ರಾಪಂ ವ್ಯಾಪ್ತಿಯ ಬಂಗಾರಪ್ಪ ನಗರದಲ್ಲಿ ಖಾಸಗಿ ಬಸ್ಸೊಂದು ಹಸುವಿಗೆ ಡಿಕ್ಕಿ ಹೊಡೆದ ಪರಿಣಾಮ ಜಾನುವಾರು ಸ್ಥಳದಲ್ಲೇ ಮೃತ ಪಟ್ಟಿದೆ.
ಶಿರವಾಡದ ಖಾಸಗಿ ರೆಸಾರ್ಟ್ ಒಂದರಲ್ಲಿ ಕಾರವಾರ ನೇವಲ್ ಬೇಸ್ ನ ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿಯೊಂದರ ಅಧಿಕಾರಿಗಳು ಹಾಗೂ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಹೀಗಾಗಿ ಅವರನ್ನು ಕರೆದೊಯ್ಯುಲು ಹಾಗೂ ಕರೆತರಲು ಪ್ರತಿದಿನ ಹತ್ತಾರು ಬಸ್ಸುಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಹೀಗೆ ಸಂಚರಿಸುವ ಬಸ್ಸುಗಳನ್ನು ಚಾಲಕರು ನಿರ್ಲಕ್ಷ್ಯತನದಿಂದ ಚಾಲನೆ ಮಾಡುತ್ತಿದ್ದು ಈ ಮೊದಲೇ ಹಲವಾರು ಜಾನುವಾರುಗಳು ಮೃತಪಟ್ಟಿವೆ.
ಸೋಮವಾರ ಸಂಭವಿಸಿದ ಘಟನೆಯಿಂದ ಕೆರಳಿದ ಸ್ಥಳೀಯರು ಬಸ್ಸನ್ನು ತಡೆದು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಕಾಮಗಾರಿ ಕಂಪನಿಯ ಅಧಿಕಾರಿಗಳನ್ನು ಕರೆಯಿಸುವಂತೆ ಹೇಳಿದ್ದು ಬಸ್ಸನ್ನು ಅಲ್ಲಿಯೇ ತಡೆ ಹಿಡಿದಿದ್ದಾರೆ. ಪದೇ ಪದೇ ಇಂತಹ ಘಟನೆಗಳಿಗೆ ಈ ಬಸ್ಸುಗಳು ಕಾರಣವಾಗುತ್ತಿದ್ದು ಮುಂದೆ ಇದು ಮಾನವರ ಜೀವ ಹಾನಿಗೂ ಕಾರಣವಾಗಬಹುದು ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ನಿಖರವಾಗಿಲ್ಲ. ಆ ಮೃತಪಟ್ಟ ಕರುವನ್ನು ನಾಲ್ಕು ಕುಡುಕರು ಎಲ್ಲಿಂದಲೋ ತಂದು ರಸ್ತೆಯ ಮಧ್ಯ ಹಾಕಿ ಒಂದು ಖಾಸಗಿ ಬಸ್ಸನ್ನು ನಿಲ್ಲಿಸಿ ಹಣದಾಸೆಗಾಗಿ ಆ ಚಾಲಕನ ಜೊತೆ ಜಗಳ ಮಾಡತೊಡಗಿದರು. ಆ ಚಾಲಕ ಪೊಲೀಸರನ್ನು ಕರೆಸಿದಾಗ D.S.P. ಬಂದು ಅವರ ಉಸಿರಿನ ಪರೀಕ್ಷೆ ಮಾಡಿದಾಗ ಎಲ್ಲರೂ ಮದ್ಯಪಾನ ಮಾಡಿರುವುದು ಗೊತ್ತಾಗಿದೆ. ಆಗ ಬಸ್ಸನ್ನು ಪೊಲೀಸರು ಬಿಟ್ಟು ಆ ನಾಲ್ಕು ಜನ ಕುಡುಕ ಕಿಡಿಗೇಡಿಗಳನ್ನು ಠಾಣೆಗೆ ಕರೆದೊಯ್ದರು.
ನಾನು ಈ ಘಟನೆಯನ್ನು ಕಣ್ಣಾರೆ ಕಂಡಿದ್ದೇನೆ. ಏಕೆಂದರೆ ನಾನೇ ಆ ಬಸ್ಸಿನ ಚಾಲಕ.