ಯಲ್ಲಾಪುರ: ತಾಲೂಕಿನ ಹಿಟ್ಟಿನಬೈಲ್ ಬಳಿಯ ಮಹಾರಾಷ್ಟ್ರ ಧಾಬಾ ಮುಂದೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಒಬ್ಬ ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೆದ್ದಾರಿಗೆ ಅಡ್ಡಲಾಗಿ ಅಪಘಾತಗೊಂಡ ಲಾರಿ ನಿಂತಿದ್ದರಿಂದ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರಕ್ಕೆ ವ್ಯತ್ಯಯವುಂಟಾಯಿತು. ಮಾಹಾರಾಷ್ಟ್ರದ ನಂದ್ಯಾಡದ ಲೋಹಾ ತಾಲೂಕಿನ ಹರನವಾಡದ ಪರಮೇಶ್ವರ ಲಕ್ಕಣದ ಖಲವಾಡ(25) ಮೃತ ವ್ಯಕ್ತಿಯಾಗಿದ್ದು, ಮದ್ಯಪ್ರದೇಶದ ಬೇತೂಲ್‌ನ ಪಟೇಲವಾಡದ ಜಸಪಾಲ್ ಸಿಂಗ್ ಕಸಾರಸಿಂಗ್(59), ಮಾಹಾರಾಷ್ಟ್ರದ ನಂದ್ಯಾಡದ ಲೋಹಾ ತಾಲೂಕಿನ ಹರನವಾಡದ ರಾಜು ಬಾಬುರಾವ್ ಎಳ್ಳೆ(24), ಮಧ್ಯಪ್ರದೇಶದ ಬೇತೂಲ್ ನ ಪಟೇಲವಾಡದ ದಿಲೀಪ್ ಮಾರುತಿ ಯವನ(24) ಗಾಯಗೊಂಡವರಾಗಿದ್ದಾರೆ.
ಅವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.