ಬೈಂದೂರು: ಸ್ವಾತಂತ್ರ್ಯ ಹೋರಾಟಗಾರ ಬೈಂದೂರು ತಾಲೂಕಿನ ನಾಡ ಗ್ರಾಮದ ದಿ.ಚುಂಗಿಗುಡ್ಡೆ ಪರಮೇಶ್ವರ ಹೆಬ್ಬಾರ್ ಜನ್ಮಶತಾಬ್ಧಿ ಅಂಗವಾಗಿ ಅವರ ಜೀವನದ ಕುರಿತ ಶತಾರತಿ ಪುಸ್ತಕವನ್ನು ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಅವರು ಮರವಂತೆ ಸಾಧನಾ ಸಮುದಾಯ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಎಸ್.ಜನಾರ್ದನ ಮರವಂತೆ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು,ಸಂವೇದನ ಟ್ರಸ್ಟ್ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್ ಕೃತಿಯನ್ನು ಪರಿಚಯಿಸಿದರು,ಡಾ.ಕಿಶೋರ್ ಕುಮಾರ್ ಶೆಟ್ಟಿ,ಡಾ.ಕುಸುಮಾಕರ ಹೆಬ್ಬಾರ್,ವಿನಾಯಕ ರಾವ್,ಶರತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಮೋಹನದಾಸ ಹೆಬ್ಬಾರ್ ಮರವಂತೆ ಸ್ವಾಗತಿಸಿದರು,ಮೆಟ್ಟಿನಹೊಳೆ ಶಾಲೆ ಅಧ್ಯಾಪಕ ಮಂಜುನಾಥ ದೇವಾಡಿಗ ನಿರೂಪಿಸಿದರು,ಪುಸ್ತಕ ಸಂಪಾದಕ ಚುಂಗಿಗುಡ್ಡೆ ಪ್ರಕಾಶ ಹೆಬ್ಬಾರ ವಂದಿಸಿದರು.