News Kannada
Sunday, December 04 2022

ಉತ್ತರಕನ್ನಡ

ಕಾರವಾರ: ಹೈಕೋರ್ಟ್ ಆದೇಶವಿದ್ದರೂ ಜಾಗದ ಗಡಿ ಗುರುತಿಸಲು ನಿರ್ಲಕ್ಷ್ಯ, ರೈತರ ಆಕ್ರೋಶ

Karwar: Despite high court's order, farmers protest against lack of demarcation of boundary of land
Photo Credit : By Author

ಕಾರವಾರ: ಹೈಕೋರ್ಟ್ ಧಾರವಾಡ ಪೀಠದ ಆದೇಶವಿದ್ದರೂ ಹಳಿಯಾಳ ತಾಲೂಕಿನ ಸಾಂಬ್ರಾಣಿ ಹೋಬಳಿಯ ಕಾಳಗಿನಕೊಪ್ಪದ ಕೃಷಿ ಜಮೀನುಗಳ ಗಡಿ ಗುರುತಿಸದೆ ಸರ್ಕಾರ, ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಆ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆಂದು ಆರೋಪಿಸಿ ರೈತರು ಕಾರವಾರದ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿ ರೈತನಿಗೆ ನಾಲ್ಕು ಎಕರೆಯಂತೆ 297 ರೈತರಿಗೆ ಸರ್ಕಾರದಿಂದ 1969- 70ರಲ್ಲಿ ಕೃಷಿ ಜಮೀನು ಮಂಜೂರಾಗಿದೆ. ಆದರೆ ಈ ಜಮೀನುಗಳ ಗಡಿ ಗುರುತಿಸುವ ಕಾರ್ಯ ಈವರೆಗೆ ಆಗಿಲ್ಲ. ಈ ಬಗ್ಗೆ ಅಂದಿನಿಂದಲೂ ಸರ್ಕಾರ, ಅಧಿಕಾರಿಗಳಿಗೆ ರೈತರು ಮನವಿ ಮಾಡುತ್ತಲೇ ಬಂದರೂ ಈವರೆಗೆ ಯಾರೂ ಕೂಡ ಕಿವಿಗೊಟ್ಟಿಲ್ಲ. ಹೀಗಾಗಿ ಈ ಬಗ್ಗೆ ಹೈಕೋರ್ಟ್ ಧಾರವಾಡ ಪೀಠದಲ್ಲಿ ಸಂಬಂಧಪಟ್ಟ ರೈತರೆಲ್ಲ ಸೇರಿ 2013ರಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ 2015ರಲ್ಲಿ ರೈತರ ಪರ ಆದೇಶ ಮಾಡಿದೆ. ಕೂಡಲೇ ಜಮೀನುಗಳನ್ನ ಅಳತೆ ಮಾಡಿ, ಗಡಿ ಗುರುತಿಸಿ, ಸಾಗುವಳಿ ಮಾಡಲು ಅನುಕೂಲ ಮಾಡಿಕೊಡುವಂತೆ ತಿಳಿಸಿದೆ. ಆದರೂ ಸರ್ಕಾರ, ಅಧಿಕಾರಿಗಳು ಮಾತ್ರ ಈವರೆಗೆ ಆದೇಶ ಪಾಲಿಸಿಲ್ಲ.

ಕೋರ್ಟ್ ಆದೇಶವಿದ್ದರೂ ಸಹ ಅಧಿಕಾರಿಗಳು ಈ ಬಗ್ಗೆ ಯಾವುದೇ ಪ್ರಕ್ರಿಯೆಯಗಳನ್ನ ನಡೆಸದಿರುವುದು ರೈತರಿಗೆ ಮುಂದೇನು ಮಾಡಬೇಕು, ನ್ಯಾಯಕ್ಕಾಗಿ ಮತ್ಯಾರಿಗೆ ಕೇಳ್ಬೇಕು ಎನ್ನುವಂತೆ ಅತಂತ್ರರನ್ನಾಗಿಸಿದೆ. ಜಮೀನಿಗೆ ಸಂಬಂಧಿಸಿ ಎಲ್ಲಾ ದಾಖಲೆಗಳೂ ಸಿದ್ಧವಿದೆ‌. ಆದರೆ ಗಡಿ ಗುರುತಿಸದೆ ಸಮಸ್ಯೆಯಾಗಿದೆ. ಅಕ್ಕಪಕ್ಕದ ಜಮೀನುದಾರರು ಸರ್ಕಾರ ಮಂಜೂರಿಸಿದ ಜಮೀನು ಕೂಡ ತಮ್ಮದೆಂದು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರಂತೆ. ಹೀಗಾಗಿ ದಿಕ್ಕು ತೋಚದಂತಾಗಿರುವ ರೈತರು, ಜಿಲ್ಲಾಧಿಕಾರಿಗಳ ಕಚೇರಿಯೆದುರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ಜಿಲ್ಲಾಧಿಕಾರಿ ಕಚೇರಿಯ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿಗಳಿಗೆ ರೈತರು ತಮ್ಮ ಸಮಸ್ಯೆಗಳ ಬಗ್ಗೆ ಮನವಿ ರವಾನಿಸಿದ್ದಾರೆ ರೈತರ ಪರ ವಕೀಲ ಮೇಘರಾಜ ಮೇತ್ರಿ, ರೈತ ಮಂಜುನಾಥ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಹಳಿಯಾಳದ ತಾಲೂಕಿನ ರೈತರು ಇದ್ದರು. ಅಪರ ಜಿಲ್ಲಾಧಿಕಾರಿ ರಾಜು ಮೋಗವೀರ್ ಅವರು ಮನವಿ ಸ್ವೀಕರಿಸಿದರು.

See also  ಹರಪನಹಳ್ಳಿ:ಆಕಸ್ಮಿಕ ಬೆಂಕಿ ತಗುಲಿ ಮೂರು ಕುರಿ ಸಜೀವ ದಹನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು