News Kannada
Tuesday, December 06 2022

ಉತ್ತರಕನ್ನಡ

ಕಾರವಾರ: ಕಾರ್ಮಿಕರ ದರ ಹೆಚ್ಚಳಕ್ಕೆ ಕಡಿವಾಣ ಅವಶ್ಯಕ- ಜ್ಞಾನೇಶ್ವರ ನಾಯ್ಕ

Photo Credit : By Author

ಕಾರವಾರ: ತಾಲೂಕಿನಲ್ಲಿ ದುಡಿಯುವ ಕಾರ್ಮಿಕರ ದರದ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಈ ಬಗ್ಗೆ ಕಡಿವಾಣ ಹಾಕಬೇಕಾದ ಅತ್ಯವಶ್ಯಕತೆ ಇದೆ ಎಂದು ಕಾರ್ಯನಿರ್ವಹಿಸಲು ಗುತ್ತಿಗೆದಾರರು ಮತ್ತು ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ರಚಿಸಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಜ್ಞಾನೇಶ್ವರ ನಾಯ್ಕ ಹೇಳಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನದಲ್ಲಿ ದಿನದಿಂದ ದಿನಕ್ಕೆ ಕಾರ್ಮಿಕರ ದರ ಹೆಚ್ಚುತ್ತಿದೆ. ಇದರಿಂದ ಗುತ್ತಿಗೆದಾರರು ಮಾತ್ರವಲ್ಲದೆ, ಜನರು ತೀವ್ರ ತೊಂದರೆ ಅನುಭವಿಸುವಂಥ ಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದ ಕರಾವಳಿಯ ಎಲ್ಲೂ ಇರದಷ್ಟು ಹೆಚ್ಚಿನ ದರ ಇಲ್ಲಿನ ಕಾರ್ಮಿಕರದ್ದಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಇಲ್ಲದೆ ಇದ್ದರೇ ಬೇರೆ ಕಡೆಯಿಂದ ಕಾರ್ಮಿಕರನ್ನು ತರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು. ವಿಧದ ಕಾರ್ಮಿಕರ ವೇತನ ನಿಗದಿಪಡಿಸಿ, ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸುವ ಹಾಗೂ ಗುತ್ತಿಗೆದಾರರಿಗಿರುವ ಕಾರ್ಮಿಕರ ಸಮಸ್ಯೆ ನೀಗಿಸುವ ಸಂಬಂಧ, ಸ್ಥಳೀಯವಾಗಿ ಕಾರ್ಮಿಕರ ಕೊರತೆ ಇದೆ.

ಉತ್ತರ ಕರ್ನಾಟಕದಿಂದ ಕೂಲಿ ಕೆಲಸಕ್ಕೆ ಬಂದವರು ಅಭಿವೃದ್ಧಿಯಾಗಿದ್ದಾರೆ. ನಮಗೆಲ್ಲ ಇದು ಸಂತಸದ ವಿಷಯವೇ. ಆದರೆ ಕಾರ್ಮಿಕರ ವೇತನ ಕಾರವಾರದಲ್ಲಿ ಮಿತಿ‌ಮೀರಿದೆ. ಕರಾವಳಿಯ ಯಾವ ಜಿಲ್ಲೆಯಲ್ಲೂ ನಮ್ಮಲ್ಲಿರುವಷ್ಟು ದರವಿಲ್ಲ. ಇಲ್ಲಿ ಇಂದಿನ ದರ ನಾಳೆ ಇರುವುದಿಲ್ಲ. ಅದು ಪ್ರತಿನಿತ್ಯ ಹೆಚ್ಚುತ್ತಲೆ ಇದೆ. ಕಾರ್ಮಿಕರ ಶೋಷಣೆ‌ಮಾಡುವುದು ಇದರ ಉದ್ದೇಶವಲ್ಲ. ಸರ್ಕಾರದ ಕಾರ್ಮಿಕ ಇಲಾಖೆಯ ಮಾರ್ಗಸೂಚಿಯಂತೆ ಗುತ್ತಿಗೆದಾರರು ಹಾಗೂ ಕಾರ್ಮಿಕರು ಇಬ್ಬರಿಗೂ ಅನುಕೂಲವಾಗುವಂತೆ ದರ ನಿಗದಿ ಮಾಡಲಾಗಿದೆ. ಎಂಟು ತಾಸಿನ‌ಗಿಂತ ಹೆಚ್ಚು ಸಮಯ ಕೆಲಸ ಮಾಡಿದರೆ ಹೆಚ್ಚಿನ ಹಣ ನೀಡಲಾಗುತ್ತದೆ. ಎಲ್ಲ ಸಂಘಟನೆಯವರು ಒಗ್ಗೂಡಿ ಒಂದು ಸಂಘಟನೆ ಮಾಡಿ ದರ ನಿಗದಪಡಿಸಿದ್ದೇವೆ. ಎಲ್ಲ ಇಲಾಖೆಗಳ ಅನುಮತಿ ಪಡೆದು ಕೂಲಿ ದರಪಟ್ಟಿಯನ್ನು ಸಾರ್ವಜನಿಕವಾಗಿ ಅಳವಡಿಸುತ್ತೇವೆ ಎಂದರು.

See also  ಕಾರವಾರ: ನಗರಸಭೆಯ ಸಾಮಾನ್ಯ ಸಭೆಯಲ್ಲಿ ಗಲಾಟೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು