News Kannada
Thursday, December 08 2022

ಉತ್ತರಕನ್ನಡ

ಕಾರವಾರ: ಬಾವಿಗೆ ಬಿದ್ದಿದ್ದ ಯುವತಿಯರನ್ನು ರಕ್ಷಣೆ ಮಾಡಿದ ಕಾನ್ಸಟೇಬಲ್

Bodies of two children recovered from well in Gujarat
Photo Credit : By Author

ಕಾರವಾರ: ಆಕಸ್ಮಿಕವಾಗಿ ಬಾವಿಗೆ ಬಿದ್ದ ಯುವತಿಯರನ್ನು ಕಾನ್ಸಟೇಬಲ್ ಸ್ವತಃ ಬಾವಿಗಿಳಿದು ರಕ್ಷಣೆ ಮಾಡಿದ್ದಾರೆ ಘಟನೆ ಕುಮಟಾದ ಅಳಕೋಡ ಗ್ರಾಪಂ ವ್ಯಾಪ್ತಿಯ ಸಾಂತೂರು ಗ್ರಾಮದಲ್ಲಿ ನಡೆದಿದೆ.

ಕತಗಾಲ ಪೋಲಿಸ್ ಉಪಠಾಣೆಯ ಕಾನ್ಸಟೇಬಲ್ ನಾರಾಯಣ ಗೌಡ ಯುವತಿರನ್ನು ರಕ್ಷಣೆ ಮಾಡಿದ ಪೊಲೀಸ್ ಪೇದೆಯಾಗಿದ್ದಾರೆ. ಸಾಂತೂರು ಗ್ರಾಮದ ಬಾವಿಯಲ್ಲಿ ನೀರು ತೆಗೆಯಲು ತೆರಳಿದ್ದ ವೇಳೆ ಯುವತಿಯರಿಬ್ಬರು ಆಯತಪ್ಪಿ ಬಾವಿಗೆ ಬಿದ್ದಿದ್ದು ಈ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸ್ ಪೇದೆ ನಾರಾಯಣ ಅಗ್ನಿಶಾಮಕದಳಕ್ಕೂ ಮಾಹಿತಿ ನೀಡಿದ್ದು, ಕುಮಟಾದಿಂದ ಆಗಮಿಸಲು 13 ಕಿ.ಮೀ. ದೂರವಿದ್ದಿದ್ದರಿಂದ ಅವರು ತಡವಾಗುವ ಸಾಧ್ಯತೆಗಳಿತ್ತು.

ಈ ವೇಳೆ ಯುವತಿಯರ ಜೀವಕ್ಕೆ ಅಪಾಯವಾಗುವ ಸಂಭವವಿದ್ದರಿಂದ ತಮ್ಮ ಸಿಬ್ಬಂದಿ ಆಂಜನೇಯರೊಂದಿಗೆ ಸೇರಿ ಜೀವದ ಹಂಗು ತೊರೆದು ಸುಮಾರು 30-35 ಅಡಿ ಆಳದ ಬಾವಿಗೆ ತಾವೇ ಇಳಿದಿದ್ದಾರೆ. ಹಗ್ಗ ಕಟ್ಟಿಕೊಂಡು ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಹರಸಾಹಸಪಟ್ಟು ಯುವತಿಯರನ್ನು ಬಾವಿಯಿಂದ ಮೇಲಕ್ಕೆತ್ತಿದ್ದು, ಅಪಾಯದಲ್ಲಿದ್ದವರ ಪ್ರಾಣವನ್ನು ಕಾಪಾಡಿದ್ದಾರೆ. ನಂತರ ಅಂಬ್ಯುಲೆನ್ಸ್ ಮೂಲಕ ಕತಗಾಲ ಪ್ರಾಥಮಿಕ ಆರೋಗ್ಯಕ್ಕೆ ತಂದು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕಾ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ.

ಪೊಲೀಸ್ ಪೇದೆಯ ಈ ಕಾರ್ಯಕ್ಕೆ ಪೊಲೀಸ್ ಸಿಬ್ಬಂದಿ, ಸ್ಥಳೀಯರು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

See also  ಗೋಕರ್ಣ: ಸೇವೆಯ ಸಮಾಧಾನ, ಸಂತೋಷ, ಭೋಗದಲ್ಲಿಲ್ಲ ಎಂದ ರಾಘವೇಶ್ವರ ಶ್ರೀ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು