ಕಾರವಾರ: ಜಿಲ್ಲೆಯಲ್ಲಿ ನೀರಿನ ಪ್ರಮಾಣ ಜಾಸ್ತಿ ಇದ್ದರು ಕೂಡ ಹಲವಾರು ಸಮಸ್ಯೆಗಳಿವೆ, ಅಂತರ್ಜಲ ನೀರಿನ ಸಮಸ್ಯೆ ಹಾಗೂ ಅದರ ಗುಣಮಟ್ಟದ ನಿವಾರಣೆ ಮತ್ತು ಅಭಿವೃದ್ಧಿಗಾಗಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಪ್ರಿಯಾಂಗಾ ಎಂ. ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೇಂದ್ರ ಜಲಸಂಪನ್ಮೂಲ, ಗಂಗಾ ಪುನಶ್ಚೇತನ, ಕೇಂದ್ರಿಯ ಅಂತರ್ಜಲ ಮಂಡಳಿ, ಹಾಗೂ ಜಿಲ್ಲಾ ಪಂಚಾಯತ್‌ಸಂಯುಕ್ತಾಶ್ರಯದಲ್ಲಿ ಒಂದು ದಿನದ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, 2020 ರಿಂದ 2024 ರ ವರೆಗೂ ಜಲ ಜೀವನ ಮಿಷನ್‌ಅಭಿಯಾನದಡಿ ಮನೆ ಮನೆಗೆ ಸ್ವಚ್ಚ ಕುಡಿಯುವ ನೀರು ಪೂರೈಕೆಗಾಗಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶ ಹೊಂದಿದ್ದು ಈಗಾಗಲೇ ಮುಂದಿನ 2 ವರ್ಷಗಳ ಅವಧಿಯಲ್ಲಿ ಮಾಡಬೇಕಾದ ಕಾಮಗಾರಿ ಪಟ್ಟಿಯನ್ನು ತಾಯಾರು ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಕುಡಿಯುವ ನೀರನ ಯೋಜನೆ ಅಡಿಯಲ್ಲಿ 300 ಕೋಟಿಗೂ ಅಧಿಕ ವೆಚ್ಚದಲ್ಲಿ ಸುಮಾರು 918 ಡಿಆರ್.ಪಿ ಕಾಮಗಾರಿ ಶುರುವಾಗಿದ್ದು, 500 ಕಾಮಗಾರಿಗಳು ಚಾಲನೆಯಲ್ಲಿವೆ ಎಂದರು.
ಜಿಲ್ಲೆಯಲ್ಲಿ ನೀರಿನ ಮಟ್ಟ ಜಾಸ್ತಿ ಇದ್ದರು ಕೂಡ 200, 300 ಅಡಿ ಗಳಷ್ಟು ಕೊಳವೆಬಾವಿಗಳನ್ನು ಕೊರಿಸಿದರು ಪ್ರತಿಷತ 30 ರಷ್ಟು ಕೊಳವೆಬಾವಿಗಳು ವಿಫಲವಾಗುತ್ತಿವೆ. ನೀರಿನ ಗುಣಮಟ್ಟದಲ್ಲೂ ನಮಗೆ ದೂರು ಕಂಡು ಬರುತ್ತಿದ್ದು, ನೀರಿನಲ್ಲಿ ಕೆಮಿಕಲ್, ಫ್ಯ್ಲುರೆಡ್‌ಯುಕ್ತ ಆಸಿಡಿಕ್‌ಕಂಡು ಬರುತ್ತಿವೆ. ಇವೆಲ್ಲವುಗಳನ್ನು ಸರಿಪಡಿಸಲು ಮೊದಲು ಸಂಬಂಧ ಪಟ್ಟ ಸಿಬ್ಬಂದಿಗಳಿಗೆ ತರಬೇತಿ ಅವಶ್ಯಕತೆ ಇದ್ದು ಈ ಕಾರ್ಯಾಗಾರವು ಅವರುಗಳಿಗೆ ಅನುಕೂಲವಾಗಲಿದೆ ಎಂದರು.
ಕಾರ್ಯಾಗಾರದಲ್ಲಿ ನಿವೃತ್ತ ಭೂಗೊಳಶಾಸ್ತ್ರಜ್ಞ ಹಾಗೂ ಡಿಜಿಎಮ್‌ಕಾರವಾರ ಡಾ. ಜಿ.ವಿ ಹೆಗಡೆ ಇವರು ತಮ್ಮ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಿಜ್ಞಾನಿ ಸಿಜಿಡಬ್ಲ್ಯೂಬಿ, ಎಸ್.ಡಬ್ಲ್ಯೂ.ಆರ್. ಬೆಂಗಳೂರು ದಾಮಲಾರ್, ಕಾರವಾರ ಕಾರ್ಯನಿರ್ವಾಹಕ ಇಂಜೀನಿಯರ್ ಆರ್.ಡ್ಬ್ಲೂಎಸ್ ಮತ್ತು ಎಸ್ಡಿ ಪ್ರಕಾಶ, ಬೆಳಗಾವಿ ಪಿ.ಬಿ ಸಂಗೀತಾ, ಜಿಲ್ಲಾ ಜಲಮಂಡಳಿ ಸಿಬ್ಬಂದಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಾರ್ಯಾಕ್ರಮದಲ್ಲಿ ಇದ್ದರು.