ಕಾರವಾರ: ಡಾ. ರಾಜ್ಕುಮಾರ್ ಕನ್ನಡಾ ಅಭಿಮಾನಿ ಬಳಗದ ವತಿಯಿಂದ ಬೆಂಗಳೂರಿನ ಎಚ್.ಎಸ್.ಶೆಟ್ಟಿ ಮೈಸೂರು ಮರ್ಕಂಟೈಲ್ನ ಕೋ. ಆಫ್ನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ನಗರದ ಬೈತಕೋಲ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕೋಡಿಭಾಗ ಹೆಣ್ಣುಮಕ್ಕಳ ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಮತ್ತು ಕೊಡೆಗಳನ್ನು ನೀಡಲಾಯಿತು.
ಡಾ. ರಾಜಕುಮಾರ್ ಕನ್ನಡಾಭಿಮಾನಿ ಬಳಗದ ಪರವಾಗಿ ಗೌರವಾಧ್ಯಕ್ಷ ಮಂಜುನಾಥ್ ನಾವೆ, ಅಧ್ಯಕ್ಷ ಟಿ.ಬಿ.ಹರಿಕಾಂತ, ಕಾರ್ಯದರ್ಶಿ ಸುರೇಶ ಶೆಟ್ಟಿ, ಸಂದೀಪ ಸಾಗರ, ಖಜಾಂಚಿ ಎಲ್.ಎಸ್.ಫರ್ನಾಂಡೀಸ್, ಎಚ್.ಎಸ್.ಶೆಟ್ಟಿ ಮೈಸೂರು ಮರ್ಕಂಟೈಲ್ನ ಕೋ. ಆಫ್ನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ವತಿಯಿಂದ ಟರ್ಮಿನಲ್ ಮ್ಯಾನೇಜರ್ ಸುರೇಶ, ಎಮ್.ಎಮ್.ಸಿ.ಎಎಲ್ನ ವಿನಾಯಕ, ಕೋಡಿಭಾಗ ಮತ್ತು ಬೈತಕೋಲ್ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಒಟ್ಟೂ ೮೦ ಮಕ್ಕಳಿಗೆ ಬ್ಯಾಗ್ ಮತ್ತು ಕೊಡೆ ನೀಡಲಾಯಿತು.