ಕಾರವಾರ: ಮಾನವನ ವಾಸ ಸ್ಥಳಗಳಿಂದ ದೂರವಿದ್ದು, ಸುರಕ್ಷಿತ ಕಾಡಿನೊಳಗೆ ವಾಸಿಸುವ ಹಾರ್ನ್ ಬಿಲ್ ಗಳು ಕಾಣಸಿಗುವುದು ಅಪರೂಪ. ಆದರೆ, ಅಂಕೋಲಾ ತಾಲೂಕಿನ ಗ್ರಾಮವೊಂದರ ಮನೆಗೆ ಪ್ರತಿದಿನವೂ ಹಾರ್ನ್ ಬಿಲ್ ಭೇಟಿ ನೀಡುತ್ತಿದೆ. ಕುಟುಂಬದ ಸದಸ್ಯರೊಂದಿಗೆ ಬೆರೆತು ಆಟವಾಡುತ್ತದೆ.
ಹಾರ್ನ್ ಬಿಲ್ ಗಳಲ್ಲಿ ಏಳು ಪ್ರಕಾರಗಳಿದ್ದು ಪಶ್ಚಿಮ ಘಟ್ಟದ ಕಾಡುಗಳಲ್ಲಿ ನಾಲ್ಕು ಪ್ರಕಾರದ ಹಾರ್ನ್ ಬಿಲ್ ಕಾಣಸಿಗುತ್ತವೆ. ಇವುಗಳಲ್ಲಿ ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ ಅಥವಾ ಗ್ರೇಟ್ ಪೈಡ್ ಹಾರ್ನ್ ಬಿಲ್ ಗಳು ಅಪರೂಪದ್ದೂ, ಬಹಳ ನಾಚಿಕೆ ಸ್ವಭಾವದ್ದು ಹಾಗೂ ಗಾತ್ರದಲ್ಲಿಯೂ ಬಹಳ ದೊಡ್ಡದಾಗಿದೆ. ಆದರೆ ಈ ಹಕ್ಕಿ ಈ ಮನೆಯವರೊಂದಿಗೆ ಬೆರೆತಿರುವ ರೀತಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸುತ್ತದೆ.
ಅಚ್ಚರಿ ಎಂಬಂತೆ ಈ ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದ ಗೋಪಾಲ್ ನಾಯಕ ಎನ್ನುವವರ ಮನೆಗೆ ಪ್ರತಿದಿನ ಭೇಟಿ ನೀಡುತ್ತಿದೆ. ಗೋಪಾಲ್ ಅವರೊಂದಿಗೆ ಆಟ ಆಡಿ, ಮನೆಯವರು ಕೊಟ್ಟ ಹಣ್ಣುಗಳನ್ನು ತಿಂದು ಮತ್ತೆ ವಾಪಸ್ ಮರಗಳನ್ನೇರುತ್ತಿದೆ. ಹೀಗೆ ಕಳೆದ ಮೂರು ತಿಂಗಳಿನಿಂದ ಈ ಹಾರ್ನ್ ಬಿಲ್ ನಾಯಕ ಅವರ ಕುಟುಂಬದ ಸದಸ್ಯರ ಸಂಗ ಬೆಳೆಸಿಕೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ, ಜೊಯಿಡಾ ಹಾಗೂ ಇನ್ನಿತರ ದಟ್ಟಾರಣ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣುವ ಹಾರ್ನ್ ಬಿಲ್ ಈಗ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಆಗಾಗ ಕಾಣಸಿಗುತ್ತಿದೆ. ಸಾಮಾನ್ಯವಾಗಿ ಹಾರ್ನ್ ಬಿಲ್ ಜೋಡಿಯಲ್ಲಿಯೇ ಕಾಣುತ್ತವೆ. ತನ್ನ ಸಂಗಾತಿಯ ಜೊತೆಯಲ್ಲೇ ಇರುವ ಇವು, ಅನೇಕ ವರ್ಷಗಳ ಹಿಂದೆ ಈ ಪಕ್ಷಿಯನ್ನು ಅರಣ್ಯ ಪ್ರದೇಶದಲ್ಲಿ ಬೇಟೆಯಾಡಿ, ಅಹಾರಕ್ಕೆ ಉಪಯೋಗ ಮಾಡಲಾಗುತ್ತಿತ್ತು. ಜೋಡಿಯಲ್ಲಿ ಇರುವ ಹಾರ್ನ್ ಬಿಲ್ ಪಕ್ಷಿಗಳನ್ನು ಒಂದರ ಸಾವಾದರೆ ಇನ್ನೊಂದು ಆಹಾರ ಸೇವಿಸದೆ ಮೃತಪಡುತ್ತಿತ್ತು.
ಕಾಲಕ್ರಮೇಣ ಬದಲಾದ ಸನ್ನಿವೇಶದಲ್ಲಿ ಜನರು ಇವುಗಳ ಬೇಟೆಯಾಡುವುದನ್ನು ಬಿಟ್ಟಿದ್ದಾರೆ. ಅದಕ್ಕೂ ಮುಖ್ಯವಾಗಿ ಅರಣ್ಯ ಇಲಾಖೆಯಿಂದ ಜನ ಜಾಗೃತಿ ಹಾಗೂ ಕಠಿಣ ಕ್ರಮದಿಂದಾಗಿ ಹಾರ್ನ್ ಬಿಲ್ ಗಳ ರಕ್ಷಣೆ ಇಂದು ಸಾಧ್ಯವಾಗಿದೆ. ದಾಂಡೇಲಿ-ಜೊಯಿಡಾದ ಅರಣ್ಯ ದಲ್ಲಿ ಹೆಚ್ಚಿನ ಪ್ರಮಾಣದ ಹಾರ್ನ್ ಬಿಲ್ ಕಾಣಸಿಗುವುದರಿಂದ ಅರಣ್ಯ ಇಲಾಖೆಯಿಂದ ಹಾರ್ನ್ ಬಿಲ್ ಉತ್ಸವ ಸಹ ಮಾಡಲಾಗುತ್ತದೆ. ಹಾರ್ನ್ ಬಿಲ್ ಪಕ್ಷಿಗಳು ಅರಣ್ಯದಲ್ಲಿ ಲಭಿಸುವ ಸಣ್ಣಪುಟ್ಟ ಹಣ್ಣುಗಳನ್ನು ಆಹಾರವಾಗಿ ಸೇವಿಸುತ್ತವೆ. ವಿಚಿತ್ರವೆಂದರೆ ಜನರಿಂದ ದೂರವಾಗಿಯೇ ಇರುವ ಹಾರ್ನ್ ಬಿಲ್ ಅಂಕೋಲಾದಲ್ಲಿ ಜನಸ್ನೇಹಿ ಪಕ್ಷಿಯಾಗಿರುವುದು, ಅರಣ್ಯ ಇಲಾಖೆಯ ಅಧಿಕಾರಿಗಳಲ್ಲೂ ಕೌತುಕ ಮೂಡಿಸಿದೆ.
ಅಂಕೋಲಾದಲ್ಲಿ ಹಾರ್ನ್ ಬಿಲ್ ಸಂಗ ಬೆಳೆಸಿಕೊಂಡ ಗೋಪಾಲ ನಾಯಕ ಹೇಳುವಂತೆ, ಅಚ್ಚರಿ ಎಂಬಂತೆ ಈ ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದ ಗೋಪಾಲ್ ನಾಯಕ ಎನ್ನುವವರ ಮನೆಗೆ ಪ್ರತಿದಿನ ಭೇಟಿ ನೀಡುತ್ತಿದೆ. ಗೋಪಾಲ್ ಅವರೊಂದಿಗೆ ಆಟ ಆಡಿ, ಮನೆಯವರು ಕೊಟ್ಟ ಹಣ್ಣುಗಳನ್ನು ತಿಂದು ಮತ್ತೆ ವಾಪಸ್ ಮರಗಳನ್ನೇರುತ್ತಿದೆ. ಹೀಗೆ ಕಳೆದ ಮೂರು ತಿಂಗಳಿನಿಂದ ಈ ಹಾರ್ನ್ ಬಿಲ್ ನಾಯಕ ಅವರ ಕುಟುಂಬದ ಸದಸ್ಯರ ಸಂಗ ಬೆಳೆಸಿಕೊಂಡಿದೆ ಎನ್ನುತ್ತಾರೆ.
ಅರಣ್ಯ ರಕ್ಣಕ ಗೋಪಾಲ ನಾಯ್ಕ ಪ್ರಕಾರ ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಹಾರ್ನ್ ಬಿಲ್ ಸಂರಕ್ಷಿತ ವಲಯ ಎಂದು ಘೋಷಿಸಿದ್ದ ಕಾರಣಕ್ಕೆ ಸಾವಿರಾರು ಪ್ರವಾಸಿಗರು ಇದರ ವೀಕ್ಷಣೆಗೆ ಅಲ್ಲಿಗೆ ತೆರಳುತ್ತಾರೆ. ಅಪರೂಪಕ್ಕೆ ಮಾತ್ರ ಈ ಹಾರ್ನ್ ಬಿಲ್ ಗಳು ಪ್ರವಾಸಿಗರ ಕಣ್ಣಿಗೆ ಬೀಳುತ್ತವೆ. ಆದರೆ ಅಂಕೋಲಾದ ಗೋಪಾಲ ನಾಯಕರ ಮನೆಗೆ ಪ್ರತಿದಿನ ಭೇಟಿ ನೀಡುವ ಮೂಲಕ ಈ ಹಾರ್ನ್ ಬಿಲ್ ಎಲ್ಲರಿಗೂ ಅಚ್ಚರಿಗೊಳಿಸಿದೆ ಎನ್ನುತ್ತಾರೆ.