ಕಾರವಾರ: ಮಹಾವಿದ್ಯಾಲಯದಲ್ಲಿ ವಿವಿಧ ಧರ್ಮ ಹಾಗೂ ಜಾತಿಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಸರ್ವರಿಗೂ ಸಮಾನ ಅವಕಾಶ ಹಾಗೂ ಸಮಾನ ಮಹತ್ವವನ್ನು ನೀಡುತ್ತದೆ ಎಂದು ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಅವರು ಹೇಳಿದರು.
ತಾಲೂಕಿನ ಉಳಗಾದ ಶಿವಾಜಿ ಎಜುಕೇಷನ್ ಸೊಸೈಟಿಯ ಮಹಾಸತಿ ಪದವಿಪೂರ್ವ ಮಹಾವಿದ್ಯಾಲಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದರು.
ವಿದ್ಯಾರ್ಥಿಗಳ ಬೌದ್ಧಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ದೈಹಿಕ ಬೆಳವಣಿಗೆಗೆ ಅವಶ್ಯವಾದ ಚಟುವಟಿಕೆಗಳನ್ನು ನಿರ್ವಹಿಸುತ್ತ ಸರ್ವೇ ಜನಾ ಸುಖಿನೋ ಭವಂತು ಎಂಬ ಧೇಯ್ಯ ವಾಕ್ಯವನ್ನು ಅಕ್ಷರಷಃ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದರು.
ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಶಿಕ್ಷಣದ ಜೊತೆಗೆ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಶೇಷ ಉತ್ತೇಜನ ನೀಡುತ್ತಿದ್ದು, ಸಾರ್ವಜನಿಕ ಪ್ರಶಂಸೆಗೆ ಪಾತ್ರವಾದ ಈ ವಿದ್ಯಾಲಯವಾಗಿದೆ. ತಾನು ಸಹ ಕಾಲೇಜಿನ ಹೆಚ್ಚಿನ ಅಭಿವೃಧ್ಧಿಗೆ ಹಾಗೂ ವಿವಿಧ ಕಾಲೇಜು ಕಾರ್ಯಕ್ರಮದಲ್ಲಿ ನನ್ನ ಕೈಲಾದ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ಕಾಲೇಜಿನಲ್ಲಿ ಸಭಾಭವನ ಅವಶ್ಯಕತೆ ಇರುವ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಯವರ ಮನವಿಯಂತೆ ವಿಧಾನ ಪರಿಷತ್ ಅನುದಾನ ನೀಡಿದ ವಿಧಾನ ಪರಿಷತ್ ಶಾಸಕರಾದ ಗಣಪತಿ ಉಳ್ವೇಕರ್ ಅವರು ಕಾಲೇಜಿನ ಸಭಾಭವನದ ಅಡಿಗಲ್ಲು ಕಾರ್ಯಕ್ರಮ ಸಹ ನೆರವೇರಿಸಿದರು.
ಉಳಗಾದ ಶಿವಾಜಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಸುನಿಲ್ ಗಾಂವ್ಕರ್, ಪ್ರಾಂಶುಪಾಲ ಹರೀಶ ನಾಯ್ಕ, ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಗಜಾನನ ನಾಯಕ ಹಾಗೂ ಇನ್ನಿತರರು ಇದ್ದರು.