News Kannada
Tuesday, December 06 2022

ಚಿಕಮಗಳೂರು

ಮೂಡಿಗೆರಿ: ಶಾಸಕ ಎಂ.ಪಿ ಕುಮಾರಸ್ವಾಮಿ ಮೇಲೆ ಹಲ್ಲೆ ನಡೆಸಿದ ಗ್ರಾಮಸ್ಥರು

Mudigeri: Villagers attack MLA M P Kumaraswamy
Photo Credit : News Kannada

ಮೂಡಿಗೆರಿ: ಕಾಡಾನೆ ದಾಳಿಗೆ ತುತ್ತಾಗಿ ಮಹಿಳೆಯೊಬ್ಬಳು ಮೃತಪಟ್ಟಿರುವ ವಿಚಾರವಾಗಿ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಹೊಡೆದಿರುವುದಲ್ಲದೆ ಅವರ ಬಟ್ಟೆಯನ್ನು ಹರಿದು ಹಾಕಿರುವ ಘಟನೆಯ ಜಿಲ್ಲೆಯ ಮೂಡಿಗೆರಿ ತಾಲೂಕಿನ ಕುಂದೂರಿನಲ್ಲಿ ನಡೆದಿದೆ.

ಗ್ರಾಮಸ್ಥರು ಅನಗತ್ಯವಾಗಿ ಹಲ್ಲೆ ಮಾಡಿದ್ದಾರೆ. ಇದು ವ್ಯವಸ್ಥಿತ ಪಿತೂರಿಯಾಗಿದೆ. ನಾನು ಆನೆಯನ್ನು ಸಾಕುತ್ತಿದ್ದೇನೆ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಪೊಲೀಸರ ವೈಫಲ್ಯವೂ ಇದೆ. ನಾನು ಅಲ್ಲೆ ಇರ್ತಿದ್ದೆ ಪೊಲೀಸ್ ಮಿಸ್ ಗೈಡ್ ಮಾಡಿ ಹೊರ ಕಳುಹಿಸಿದ್ರು, ಸಾರ್ವಜನಿಕರ ಸೇವೆ ಮಾಡಲು ಇರೋರು ಎಲ್ಲ ತಾಗ್ಯಕ್ಕೂ ರೆಡಿ ಇರ್ತೀವಿ, ಆ ಜಾಗ ಬಿಟ್ಟು ಕದಲ್ತಾ ಇರ್ಲಿಲ್ಲ’ಎಂದು ಶಾಸಕ ಎಂ. ಪಿ.ಕುಮಾರಸ್ವಾಮಿ ಹೇಳಿದ್ದಾರೆ.

ಕಾಡಾನೆ ದಾಳಿಯಿಂದ ಭಾನುವಾರ ಬೆಳಗ್ಗೆ ಶೋಭಾ ಎಂಬುವರು ಮೃತಪಟ್ಟಿದ್ದರು. ಘಟನೆಯಿಂದಾಗಿ ಗ್ರಾಮಸ್ಥರು ರೊಚ್ಚಿಗೆದ್ದಿದ್ದರು. ಸ್ಥಳೀಯ ಶಾಸಕರವಾಗಿರುವ ಎಂಪಿ ಕುಮಾರಸ್ವಾಮಿ ಅವರು ಬೆಳಗ್ಗೆ ಘಟನೆ ನಡೆದರೂ ಸಂಜೆಯ ತನಕ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬುದೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಸಂಜೆಯ ವೇಳೆಗೆ ಶಾಸಕರು ಸ್ಥಳಕ್ಕೆ ಬಂದಿದ್ದು, ಈ ವೇಳೆ ಮಾತಿನ ಚಕಮಕಿಯೊಂದಿಗೆ ಆರಂಭಗೊಂಡ ಆಕ್ರೋಶ ಥಳಿಸುವ ಮಟ್ಟಕ್ಕೆ ಮುಂದುವರಿದಿದೆ ಎನ್ನಲಾಗಿದೆ.

See also  ಶ್ರೀಗಂಧದ ಮರಗಳನ್ನು ಕಳವು ಮಾಡುತ್ತಿದ್ದ ಓರ್ವ ಆರೋಪಿಯ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು