ಬೀರೂರು: ಜೆ.ಡಿ.ಎಸ್ ಪಕ್ಷ ಸೇರ್ಪಡೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿನ ನಾಯಕರು ಪಕ್ಷದ ಬಾಗಿಲು ತಟ್ಟುತಿದ್ದು ಮುಂಬರುವ ದಿನಗಳಲ್ಲಿ ರಾಜ್ಯ ನಾಯಕರ ಸಮ್ಮುಖದಲ್ಲಿ ಸೇರ್ಪಡೆಯಾಗಲಿ ದ್ದಾರೆ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸುಭದ್ರವಾಗಿದ್ದು, ನಮ್ಮಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷದ ರಾಜ್ಯ ವರಿಷ್ಠರು ಏನು ತೀರ್ಮಾನ ಕೈಗೊಂಡು ಟಿಕೇಟ್ ಅಂತಿಮ ಗೊಳಿಸುತ್ತಾರೆಯೋ ಅಂತಹ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಜಯಗಳಿಸಿಕೊಡುವುದು ನಮ್ಮ ಆಧ್ಯ ಕರ್ತವ್ಯವಾಗಿದ್ದು, ಎಲ್ಲಾ ಕಾರ್ಯಕರ್ತರು ಇದಕ್ಕೆ ಬದ್ದರಾಗಿದ್ದಾರೆ ಎಂದರು.
ಈ ಹಿಂದೆ ದಿ.ಕೃಷ್ಣಮೂರ್ತಿ ಶಾಸಕ ರಾಗಿ ಮುಂದುವರೆದಿದ್ದ ಸಂದರ್ಭದಲ್ಲಿ ನಮ್ಮ ಪಕ್ಷತೊರಿದಿದ್ದರು ಸಹ ಮುಂದಿನ ದಿನಗಳಲ್ಲಿ ದತ್ತರಂತಹವರನ್ನು ಶಾಸಕರನ್ನಾಗಿ ಆಯ್ಕೆ ಮಾಡಲು ಪಕ್ಷ ಹೋರಾಟ ನಡೆಸಿ ಜೆಡಿಎಸ್‌ನ್ನು ಕಡೂರು ಕ್ಷೇತ್ರದಲ್ಲಿ ನೆಲೆಯೂರುವಂತೆ ಮಾಡಿತ್ತು. ವಿರೋಧ ಪಕ್ಷದವರು ಜೆಡಿಎಸ್ ಪಕ್ಷವನ್ನು ಲೆಕ್ಕಕ್ಕಿಲ್ಲಎಂದು ಮಾತನಾಡುತ್ತಾರೆ ಅಂತವರಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ಕೊಡಲಾಗುವುದು. ದತ್ತರವರು ಪಕ್ಷ ತ್ಯಜಿಸಿರುವುದರಿಂದ ಯಾವುದೇ ನಷ್ಠವಿಲ್ಲ. ಅದು ಅವರಿಗೆ ನಷ್ಠ ಪಕ್ಷಕ್ಕಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಬಿ.ಪಿ.ನಾಗರಾಜ್ ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ದೇವೆಗೌಡರ ಸಹಕಾರ ಪಡೆದು ದತ್ತರವರು ರಾಜ್ಯ ನಾಯಕರಾಗಿ ಹೊರಹೊಮ್ಮಿದ್ದಾರೆಯೋ ಹೊರತು ಅವರ ಸ್ವಂತ ಬಲದಿಂದಲ್ಲ, ಅವರಿಗೆ ಪಕ್ಷದ ನಾಯಕರು ಎಲ್ಲರೀತಿಯ ಸಹಕಾರ ನೀಡಿ ಎಂ.ಎಲ್ಸಿ ಮತ್ತು ಶಾಸಕರನ್ನಾಗಿ ಜನ ಆಯ್ಕೆ ಮಾಡಿದ್ದರು.
ಆದರೆ ಅವರು ಪಕ್ಷ ತ್ಯಜಿಸಿ ಹೋದರು ಇದರಿಂದ ಪಕ್ಷಕ್ಕೆ ಯಾವುದೇ ನಷ್ಠವಿಲ್ಲ. ಜೆ.ಡಿಎಸ್ ಪಕ್ಷಕ್ಕೆ ದುಡಿಯುವ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಬೆಳೆಸುತ್ತಿದ್ದಾರೆ ನಮ್ಮ ನಾಯಕ ಕುಮಾರಣ್ಣ. ದತ್ತರವರು ಜೆಡಿಎಸ್ ಕಾರ್ಯಕರ್ತರು ತುಂಬಿದ್ದ ಬಸ್ಸಿಗೆ ಚಾಲಕರಾಗಿದ್ದರು. ಆದರೆ ಅನಿ ರ್ಯ ಕಾರಣಗಳಿಂದ ಆ ಸ್ಥಾನದಿಂದ ಇಳಿದು ಹೋಗಿದ್ದಾರೆ ಅಷ್ಟೆ. ಪಕ್ಷದಲ್ಲಿ ಆ ಚಾಲಕನ ಸ್ಥಾನ ತುಂಬುವಲ್ಲಿ ನಿಷ್ಠಾವಂತ ಪರವಾನಗಿ ಹೊಂದಿದ ಅನೇಕರು ಸರತಿ ಸಾಲಿನಲ್ಲಿದ್ದಾರೆ. ಕಡೂರಿನಲ್ಲಿರುವ ಬಸ್ಸನ್ನು ಬೆಂಗಳೂರಿನ ವಿಧಾನಸೌಧಕ್ಕೆ ಕರೆದೊಯ್ಯಲು ಅನೇಕ ತೆನೆಹೊತ್ತವರು ದೇವೆಗೌಡರ ಗರಡಿಯಲ್ಲಿ ತಯಾರಾಗಿದ್ದಾರೆ ಎಂದರು.
ಕಡೂರು ಕ್ಷೇತ್ರದಲ್ಲಿ ಇತಿಹಾಸ ಕಂಡರಿ ಯದಂತಹ ಭ್ರಷ್ಟಚಾರ ನಡೆಯುತ್ತಿದ್ದರು ಸಹ ಶಾಸಕರು ಕಣ್ಣಿದ್ದು ಕುರುಡರಾಗಿ ಜಾಣ್ಮೆ ಪ್ರದರ್ಶಿಸುತ್ತಿದ್ದಾರೆ. ಸಾಮಾನ್ಯ ಜನರಿಗು ಸಹ ಈ ಭ್ರಷ್ಟ ಆಡಳಿತವನ್ನು ಮುಂದಿನ ದಿನಗಳಲ್ಲಿ ಕಿತ್ತೊಗೆದು ರೈತ, ಜನಸಾಮಾನ್ಯರ ಪರವಾದ ಜೆಡಿಎಸ್‌ನ್ನು ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ತರುವುದು ಶತಸಿದ್ದ ಎಂದರು.
ತಾಲ್ಲೂಕು ಅಧ್ಯಕ್ಷರಿಂದ ನಗರಘಟಕದ ಅಧ್ಯಕ್ಷರಾಗಿ ಅಧಿಕಾರ ಪತ್ರ ಸ್ವೀಕರಿಸಿ ಮಾತನಾಡಿದ ನೂತ ಅಧ್ಯಕ್ಷ ಹೇಮಂತ್ ಕುಮಾರ್, ಪಕ್ಷ ನಿಷ್ಠೆ ಉಳ್ಳವರಿಗೆ ಪಕ್ಷ ಸಂಘಟನೆ ನೀಡುವ ಜವಾಬ್ದಾರಿಯನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ನೀಡಿರುವುದು ಸಂತಸ ತಂದಿದೆ.
ಪಕ್ಷವನ್ನು ಕಡೂರು ವಿಧಾನಸಭಾಕ್ಷೇತ್ರದಲ್ಲಿ ಬಲಗೊಳಿಸುವಲ್ಲಿ ಎಲ್ಲರ ಸಹಕಾರ ಪಡೆದು ಕಾರ್ಯನಿರ್ವಹಿಸುತ್ತೇನೆ. ಬರುವ ಚುನಾವಣೆ ಎದುರಿಸಲು ತಾಲ್ಲೂಕು ಅಧ್ಯಕ್ಷರ ಜೊತೆಗೂಡಿ ೨೫೦ ಭೂತ್ ಮಟ್ಟದಕಾರ್ಯಕರ್ತರೊಂದಿಗೆ ಮುಂಬರುವ ಚುನಾವಣೆಯಲ್ಲಿ ಜನಪರ ಆಡಳಿತ ನೀಡಿರಾಜ್ಯಕ್ಕೆ ಮುಖ್ಯಮಂತ್ರಿಯಾಗಲಿರುವ ಕುಮಾರಣ್ಣನಿಗೆ ಕಡೂರು ಕ್ಷೇತ್ರದಿಂದ ಒಬ್ಬ ಶಾಸಕರನ್ನು ನೀಡಲು ಅವಿರತ ಶ್ರಮ ಪಡುವುದಾಗಿ ತಿಳಿಸಿ, ಈ ಮಟ್ಟದ ರಾಜಕೀಯಕ್ಕೆ ಬೆಳಸಿದ ದಿವಂಗತ ಧರ್ಮೇಗೌಡರ ಗರಡಿ ಕಾರಣ ಅವರು ನಮ್ಮ ಹೃದಯದಲ್ಲಿ ಶಾಶ್ವತವಾಗಿದ್ದಾರೆ ಎಂದರು.
ಜೆಡಿಎಸ್ ನಗರ ಘಟಕದ ಕಾರ್ಯಾಧ್ಯಕ್ಷ ರಾಜೇಶ್, ಹಿರಿಯರಾದ ಸಗುನಪ್ಪ, ಖಲೀಲ್‌ಅಹಮದ್, ಸಂಪಿ ಕುಮಾರ್, ಶಿವು, ಅಯೂಬ್, ರವಿ, ಸೇರಿದಂತೆ ಮತ್ತಿತರರು ಇದ್ದರು.