ಚಿಕ್ಕಮಗಳೂರು: ಒಂದು ಸಣ್ಣ ಬೆಂಕಿ ಕಿಡಿ ಇಡೀ ಮನೆಯನ್ನೇ ಸುಡುವಂತೆ ಸಣ್ಣದಾಗಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆ ದೊಡ್ಡದಾಗಿ ಕಾಡುವ ಮೊದಲು ಎಚ್ಚೆತ್ತುಕೊಂಡು ವೈದ್ಯರಿಂದ ಅಗತ್ಯ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎಂದು ಸ್ವತಃ ವೈದ್ಯರೂ ಆದ ಸಂಸ್ಕೃತಿ ಚಿಂತಕಿ ಡಾ.ರಶ್ಮಿ ಕೆ.ಎನ್.ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬ್ರಾಹ್ಮಣ ಮಹಾಸಭಾ, ಎಕೆಬಿ ಎಂಎಸ್ ವಿಪ್ರ ಮಹಿಳಾ ವೇದಿಕೆಯ ಜಿಲ್ಲಾಘಟಕ ಹಾಗೂ ಜಿಲ್ಲಾ ಕಾರಾಗೃಹದ ಆಶ್ರಯದಲ್ಲಿ ನಗರದ ಕಾರಾಗೃಹ ಆವರಣದಲ್ಲಿ ಕೈದಿಗಳಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವನ್ನು ಯಾರಿಂದಲೂ ನಾವು ಎರವಲು ಪಡೆಯಲು ಸಾಧ್ಯವಿಲ್ಲ. ದುಶ್ಚಟಗಳಿಂದ ದೂರವಿದ್ದು, ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಲು ಸಾಧನೆ ಮಾಡಬೇಕು. ೩೫-೪೦ರ ವಯಸ್ಸಿನಲ್ಲಿ ಭವಿಷ್ಯಕ್ಕೆ ಪೂರಕ ಆರೋಗ್ಯ ಸಂಪಾದಿಸಿಕೊಳ್ಳಬೇಕು. ೬೦ ವರ್ಷವಾದರೂ ಎಲ್ಲಾ ಕೆಲಸವನ್ನು ಮಾಡುವ ಸಾಮರ್ಥ್ಯ ಉಳಿಸಿಕೊಳ್ಳಬೇಕು. ೮೦ ಆದರೂ ಸ್ವಾವಲಂಬಿಯಾಗಿ ಜೀವಿಸುವಂತಿರಬೇಕು ಎಂದು ಸಲಹೆ ನೀಡಿದರು.
ವಿಶ್ವಆರೋಗ್ಯ ಸಂಸ್ಥೆಯ ಪ್ರಕಾರ, ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸಮಸ್ಥಿತಿ ಇರುವುದೇ ಆರೋಗ್ಯ. ನಿರೋಗಿ ಎನಿಸಿಕೊಳ್ಳಲು ಈ ಎಲ್ಲಾ ವಿಚಾರಗಳಲ್ಲಿ ಸ್ವಾಸ್ಥ್ಯವಿರಲೇ ಬೇಕು ಎಂದರು.
ಜಿಲ್ಲಾಕಾರಾಗೃಹದ ಅಧೀಕ್ಷಕ ಎಸ್. ಎಸ್.ಮೇಟಿ ಮಾತನಾಡಿ, ಇತಿಹಾಸ ಗಮನಿಸಿದರೆ ಆರೋಗ್ಯ, ಶಿಕ್ಷಣ ಮತ್ತುಅನ್ನದಾನಕ್ಕೆಅತ್ಯಂತ ಮಹತ್ವ ಹಾಗೂ ಮೌಲ್ಯಯುತ ಸ್ಥಾನವಿತ್ತು. ಈ ಮೂರು ಅವಶ್ಯಕತೆಗಳು ಉಚಿತವಾಗಿ ದೊರೆಯುತ್ತಿತ್ತು. ಇಂದು ಆಧುನಿಕತೆಯ ಭರದಲ್ಲಿ ಈ ಮೂರೂ ಅಂಶಗಳು ಉದ್ಯಮವಾಗಿ ಪರಿಣಮಿಸಿವೆ. ಸಂದರ್ಭದಲ್ಲಿ ಬ್ರಾಹ್ಮಣ ಮಹಾಸಭಾ ಹಾಗೂ ವಿಪ್ರ ಮಹಿಳಾ ವೇದಿಕೆಯಂತಹ ಸಂಘ-ಸಂಸ್ಥೆಗಳು ಶಿಬಿರಗಳನ್ನು ಆಯೋಜಿಸುತ್ತಿರುವುದುಅರ್ಥಪೂರ್ಣಎಂದರು.
ಶಿಬಿರದ ನೇತೃತ್ವ ವಹಿಸಿದ್ದ ವೈದ್ಯಡಾ.ಡಿ.ಪಿ.ಮೋಹನ್ ಮಾತನಾಡಿ, ಆವೇಶಹಾಗೂ ಅಚಾತುರ್ಯದ ನಿರ್ಧಾ ರಗಳಿಂದ ಸಂಭವಿಸಿದ ಅಪರಾಧಕ್ಕೆ ಗುರಿಯಾಗಿಇಲ್ಲಿಜೈಲು ಸೇರಿರುವವರಲ್ಲಿ ಶೇ.೪೩ ರಷ್ಟು ಮಂದಿ ೩೦ ರಿಂದ ೪೫ ವರ್ಷದವರು. ಇದು ಆತಂಕದ ವಿಚಾರ. ಜೀವನದದುಡಿಯುವಉತ್ತುಂಗದ ಸ್ಥಿತಿ ಎಂದರೆ ೨೦ ರಿಂದ ೪೦ ವರ್ಷ.ಈ ೪೦ ವರ್ಷದಲ್ಲಿ ಅವಕಾಶಗಳು, ಧೈರ್ಯ-ಸ್ಥೈರ್ಯ ಶಕ್ತಿ ಎಲ್ಲವೂಇರುತ್ತದೆ.ಹೀಗೆ ಸಾಧನೆ ಮಾಡುವ ವಯಸ್ಸಿನಲ್ಲಿ ಹೀಗೆ ಕಾರಾಗೃಹದಲ್ಲಿ ಕಳೆಯುವಂತಾದರೆ ಜೀವನವೇ ವ್ಯರ್ಥವಾಗುತ್ತದೆ.ಮುಂದೆ ನ್ಯಾಯ ಸಿಕ್ಕಿ ಬಿಡುಗಡೆಯಾದ ಬಳಿಕ ಜನರ ಮನಗೆದ್ದುಜೀವನ ನಡೆಸಬೇಕು.ಇಲ್ಲಿದ್ದು ವೃತ್ತಿ ಕೌಶಲರೂಢಿಸಿಕೊಂಡಲ್ಲಿ ಮುಂದೆ ಬದುಕು ರೂಪಿಸಿಕೊಳ್ಳಬಹುದುಎಂದು ಕಿವಿಮಾತು ಹೇಳಿದರು.
ಬ್ರಾಹ್ಮಣ ಮಹಾಸಭಾದಅಧ್ಯಕ್ಷ ಪಿ.ಮಂಜುನಾಥಜೋಷಿ ಮಾತನಾಡಿ, ಸಮಾಜದಲ್ಲಿ ಮುಗ್ಧರುತಪ್ಪು ಮಾಡಿದಾಗ ಸಿಲುಕಿಕೊಳ್ಳುತ್ತಾರೆ. ಬುದ್ಧಿವಂತರು, ಚಾಣಾಕ್ಷರುತಪ್ಪು ಮಾಡಿದರೂ ಸಿಲುಕಿಕೊಳ್ಳುವುದಿಲ್ಲ. ಇಲ್ಲಿ ಬಂದಿರುವವರು ಈಗಾಗಲೇ ಸಾಕಷ್ಟು ಪರಿವರ್ತನೆ ಯಾಗಿರುವುದು ಸಹಜ. ಯಾರೂ ತಾಳ್ಮೆ ಕಳೆದುಕೊಳ್ಳದೆ ಸಾಧ್ಯವಾದಷ್ಟು ಬೇಗ ಬಿಡುಗಡೆಯಾಗು ವಂತೆ ಕೈದಿಗಳಿಗೆ ಸಲಹೆ ನೀಡಿದರು.
ಬ್ರಾಹ್ಮಣ ಮಹಾಸಭಾದಕಾರ್ಯದರ್ಶಿ ಎನ್.ಕೆ.ಅಶ್ವಿನ್ ಮಾತನಾಡಿ, ಕಾರಾಗೃಹದ ವಾತಾವರಣ ಸಕಾರಾತ್ಮಕವಾಗಿಇಲ್ಲಿ ಸಾಕಷ್ಟು ಕಲಾವಿದರುಇರುವುದು ಗಮನಕ್ಕೆ ಬಂತು.ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿಪ್ರ ಮಹಿಳಾ ವೇದಿಕೆಯಜಿಲ್ಲಾ ಸಂಚಾಲಕಿ ಎಸ್.ಶಾಂತ ಕುಮಾರಿ ಮಾತನಾಡಿ, ತಪ್ಪು ಮಾಡುವುದು ಮಾನವನ ಗುಣಗಳಲ್ಲಿ ಸಹಜ. ಒಂದು ತಪ್ಪು ಸಂಭವಿಸಿದ ಬಳಿಕವಷ್ಟೇ ಮನುಷ್ಯ ಎಚ್ಚೆತ್ತುಕೊಳ್ಳಲು ಸಾಧ್ಯ. ಹಾಗೆಯೇ ಇಲ್ಲಿಂದ ಬಿಡುಗಡೆಯಾದ ಬಳಿಕ ಉತ್ತಮಜೀವನ ರೂಪಿಸಿಕೊಳ್ಳುವಂತೆ ಕೈದಿಗಳಿಗೆ ಕಿವಿಮಾತು ಹೇಳಿದರು.
ಬಿಎಂಎಸ್ ನಿರ್ದೇಶಕಿ ಶಶಿಕಲ್ ಶಿವಶಂಕರ್ ಪ್ರಾರ್ಥನೆ, ಬಿಎಂಎಸ್ ಖಜಾಂಚಿ ಶ್ಯಾಮಲಾಎಂ.ರಾವ್ ಸ್ವಾಗತ, ಬಿಎಂಎಸ್ ನಿರ್ದೇಶಕಿ ಹಾಗೂ ವಿಪ್ರ ಮಹಿಳಾ ವೇದಿಕೆಯತಾಲ್ಲೂಕು ಸಂಚಾಲಕಿ ಸುಮಾ ಪ್ರಸಾದ್ ನಿರೂಪಣೆ, ಬಿಎಂಎಸ್ ನಿರ್ದೇ ಶಕಿ ಜಯಶ್ರೀ ಜೋಷಿ ವಂದನಾರ್ಪಣೆ ನೆರವೇರಿಸಿದರು. ಬ್ರಾಹ್ಮಣ ಮಹಾಸಭಾದ ಪದಾಧಿಕಾರಿ ಗಳು, ನಿರ್ದೇಶಕರು, ಕಾರಾಗೃಹದ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿದ್ದರು. ಅನಂತರ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಾರಾಗೃಹದ ಸುಮಾರು೬೦ ಮಂದಿಗೆಡಾ .ಡಿ.ಪಿ.ಮೋಹನ್ ನೇತೃತ್ವದ ವೈದ್ಯಕೀಯ ತಂಡ ಅಗತ್ಯ ಸಲಹೆ, ಶುಶ್ರೂಷೆ ನೀಡಿತು.