ಚಿಕ್ಕಮಗಳೂರು: ಅಸಂಕ್ರಾಮಿಕ ಮತ್ತು ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲೆಯಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಡಿಎಚ್‌ಒ ಡಾ.ಉಮೇಶ್ ಹೇಳಿದರು.
ಆರೋಗ್ಯ ಇಲಾಖೆಯ ಯೋಜ ನಾ ಕಾರ್ಯಕ್ರಮಗಳ ಬಗ್ಗೆ ಆಯೋಜಿಸಿದ್ದ ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಆರ್‌ಸಿಎಚ್ ಕಾರ್ಯಕ್ರಮದಲ್ಲಿ ಎಲ್ಲ ಅರ್ಹ ದಂಪತಿಗಳನ್ನು ಪ್ರಸವ ಪೂರ್ವ ತಪಾಸಣೆಗೆ ದಾಖಲಿಸಿಕೊಂಡು ಕನಿಷ್ಠ ೪ ಬಾರಿ ತಜ್ಞರಿಂದ ಪರೀಕ್ಷಿಸಿ ಚಿಕಿತ್ಸೆ ನೀಡಲಾಗುವುದು. ಗಂಡಾಂತರ ಗರ್ಭಿಣ ಯರನ್ನು ಗುರು ತಿಸಿ ಜನನ ಸುರಕ್ಷತಾ ಕಾರ್ಯಕ್ರಮದಲ್ಲಿ ಸೂಕ್ತ ಸಲಹೆ, ಚಿಕಿತ್ಸೆ ನೀಡಲಾಗುವುದು ಎಂದರು.
ಹೆರಿಗೆಯಾದ ನಂತರ ಬಿಪಿಎಲ್ ಕುಟುಂಬದ ಮಹಿಳೆಗೆ ೬೦೦ ರೂ ಸಹಾಯಧನ, ಆಸ್ಪತ್ರೆಯಲ್ಲಿ ಜನಿಸಿದ ಎಲ್ಲ ಮಕ್ಕಳಿಗೆ ತಜ್ಞರಿಂದ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆಯ ಜತೆಗೆ ಬಿಸಿಜಿ, ಹೆಪಟೈಟಿಸ್-ಬಿ, ಪೊಲೀಯೋ, ವಿಟಮಿನ್ -ಕೆ ಲಸಿಕೆ ನೀಡಲಾಗುವುದು ಎಂದರು.
೧ ವರ್ಷದಿಂದ ೫ ವರ್ಷದ ಮಕ್ಕಳಿಗೆ ೬ ತಿಂಗಳಿಗೊಮ್ಮೆ ವಿಟಮಿನ್ ಎ ದ್ರಾವಣ ನೀಡಲಾಗುತ್ತಿದೆ. ಮಕ್ಕಳಲ್ಲಿ ಕಂಡುಬರುವ ಅತಿಸಾರ ಬೇಧಿ ನಿಯಂತ್ರಣಕ್ಕೆ ಪಾಕ್ಷಿಕ ಕಾರ್ಯ ಕ್ರಮ ನಡೆಸುತ್ತಿದ್ದೇವೆ ಎಂದರು.
ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ.ಬಾಲಕೃಷ್ಣ ಮಾತನಾಡಿ, ೨೦೨೫ ರೊಳಗೆ ಕ್ಷಯಮುಕ್ತ ಭಾರತ ಮಾಡ ಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾ ಡುತ್ತಿದ್ದೇವೆ. ಇದೊಂದು ಸಾಂಕ್ರಾ ಮಿಕ ರೋಗ. ಬೇಗ ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸಬೇಕು. ಎಲ್ಲ ಪಿಎಚ್ ಸಿ ಗಳಲ್ಲಿ ಕಫ ಪರೀಕ್ಷೆ ನಡೆಸಲಿದ್ದೇವೆ. ಪಾಸಿಟಿವ್ ಕಂಡುಬಂದಲ್ಲಿ ೬-೯ ತಿಂಗಳು ಚಿಕಿತ್ಸೆ ನಂತರ ಗುಣಮುಖರಾಗುತ್ತಾರೆ. ಆ ಸಮಯದಲ್ಲಿ ರೋ ಗಿಗೆ ೫೦೦ ರೂ ಪೌಷ್ಠಿಕ ಆಹಾರಕ್ಕಾಗಿ ನೀಡಲಾಗುವುದು. ನಿಕ್ಷಯ್‌ಮಿತ್ರ ಎಂಬ ಯೋಜನೆ ಅಡಿ ಇಂತಹ ಕ್ಷಯ ರೋಗಗಳ ಅಪೌಷ್ಠಿಕತೆ ತುಂ ಬಲು ದಾನಿಗಳು ಮುಂದೆ ಬಂದು ನೊಂದಾಯಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿ ತರ ಪ್ರಮಾಣ ತಗ್ಗಿದ್ದು ೨೦೧೧-೧೨ ರಲ್ಲಿ ೫೯೨ ಮಂದಿ ಸೋಂಕಿತರಿದ್ದರು, ಈಗ ಕೇವಲ ೧೫೦ ಮಂದಿ ಇದ್ದಾರೆ. ಅವರಿಗೂ ಉಚಿತ ಚಿಕಿತ್ಸೆ ದೊರೆ ಯುತ್ತಿದೆ ಎಂದರು.
ಕಳೆದ ವರ್ಷ ೧೯೭ ಡೆಂಗೆ , ೬ ಮಲೇರಿಯಾ, ೧೬ ಚಿಕುನ್ ಗುನ್ಯ ಪತ್ತೆಯಾಗಿದ್ದವು. ಈ ವರ್ಷ ೨ ತಿಂಗಳಲ್ಲಿ ೫ ಡೆಂಗೆ, ೧ ಚಿಕುನ್ ಗುನ್ಯ ಮಾತ್ರ ಪತ್ತೆಯಾಗಿವೆ ಎಂದರು.
ಕುಟುಂಬ ಕಲ್ಯಾಣ ಕಾರ್ಯಕ್ರಮ ದಡಿ ಶಾಶ್ವತ ವಿಧಾನ, ಅಂತರ ವಿಧಾ ನ ಹಾಗೂ ತುರ್ತು ಗರ್ಭ ನಿರೋಧಕ ಮಾತ್ರೆಗಳನ್ನು ನೀಡುವ ಮೂಲಕ ಅವರ ಇಚ್ಚೆಗೆ ಅನುಸಾರವಾದ ವಿಧಾನ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ ಎಂದರು.
ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಮಂಜು ನಾಥ ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಮು ದಾಯ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತರ ಮೂಲಕ ಸಾಂಕ್ರಾಮಿಕ ರೋಗಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಡಯಾ ಬಿಟಿಸ್, ಬಿಪಿ ಪರೀಕ್ಷೆ ಮಾಡಿ ಸರಕಾರ ಸೂಚಿಸಿರುವ ಮಾತ್ರೆಗಳನ್ನು ಅವರು ನೀಡುತ್ತಿದ್ದಾರೆ. ಕ್ಯಾಸನೂರು ಡಿಸೀಸ್ ಜಿಲ್ಲೆಯ ಕೊಪ್ಪ ಭಾಗದಲ್ಲಿ ಒಂದು ಪ್ರಕರಣ ಕಾಣಿಸಿಕೊಂಡಿದ್ದು ರೋಗಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಶೂನ್ಯ ಸ್ಥಿತಿಯಲ್ಲಿದೆ. ಎಚ್೨ಎನ್೩ ಗೆ ಭಯಬೀಳ ಬೇಕಿಲ್ಲ ಎಚ್ಚರಿಕೆ ಅಗತ್ಯ ಎಂದರು.
ಡಾ.ಅಶ್ವತ್ಥಬಾಬು ಮಾಹಿತಿ ನೀಡಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಎಂ.ರವಿ ಕಾರ್ಯಾಗಾರ ಉದ್ಘಾಟಿಸಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ. ಸೀಮಾ, ಆರೋಗ್ಯ ಅಧಿಕಾರಿ ಜಲಜಾಕ್ಷಿ ಇದ್ದರು.