ಚಿಕ್ಕಮಗಳೂರು: ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕುರಿತು ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸುಳ್ಳಾಗಿದ್ದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಂ.ತಿಮ್ಮಶೆಟ್ಟಿ ಅವರು ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತ. ಸುಳ್ಳು ಸುದ್ದಿಗಳ ಊಹಾಪೋಹಗಳಿಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು ಎಂದು ಜೆಡಿಎಸ್ ವಿಧಾನ ಪರಿಷತ್ ಶಾಸಕಾಂಗ ಪಕ್ಷದ ನಾಯಕ ಎಸ್.ಎಲ್. ಬೋಜೇಗೌಡ ಅಂತಿಮವಾಗಿ ತೆರೆ ಎಳೆದರು.
ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಸಾಮಾಜಿಕ ಜಾಲತಾಣ ಹಾಗೂ ಪಕ್ಷ ವಿರೋಧಿಗಳಿಂದ ಬರುವ ಮಾತುಗಳಿಗೆ ಕಾರ್ಯಕರ್ತರು ಕಿವಿಕೊಡದಿರಿ. ಸ್ವಲ್ಪ ಅನಾರೋಗ್ಯದ ಸಮಸ್ಯೆಯಿಂದ ಕ್ಷೇತ್ರದ ಅಭ್ಯರ್ಥಿ ಬಳಲುತ್ತಿದ್ದರು. ಇದೀಗ ತಯಾರಾಗಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ ಎಂದು ಮಾಹಿತಿ ನೀಡಿದರು.
ಹಲವಾರು ವರ್ಷಗಳ ಕಾಲ ಜೆಡಿಎಸ್‌ನಲ್ಲಿ ಸೇವೆ ಸಲ್ಲಿಸಿದ್ದೇನೆ. ರಾಜ್ಯ ಮುಖಂಡರು ಸಹ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ತಮಗೂ ಹಾಗೂ ಜಿಲ್ಲಾಧ್ಯಕ್ಷರಿಗೆ ಅವಕಾಶ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಚುನಾವಣೆಯಲ್ಲಿ ಸ್ಪರ್ಧಿ ಸಲು ತಾವು ಸಾಧ್ಯವಿಲ್ಲ. ಆದ ಕಾರಣ ಕ್ಷೇತ್ರದಲ್ಲಿ ಸುಮಾರು ವರ್ಷಗಳಿಂದ ಪಕ್ಷನಿಷ್ಟೆ ಹಾಗೂ ಸಾಮಾಜಿಕ ಕಾರ್ಯ ಗಳನ್ನು ಒದಗಿಸುತ್ತಿರುವ ಬಿ.ಎಂ.ತಿಮ್ಮಶೆಟ್ಟಿ ಅವರಿಗೆ ಟಿಕೇಟ್ ನೀಡಬೇಕು ಎಂದು ಒತ್ತಾಯಿಸಿ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.
ನಗರದ ಕೆಲವು ಕಡೆಗಳಲ್ಲಿ ಪಕ್ಷದ ವಿರೋಧಿಗಳು ಅಭ್ಯರ್ಥಿ ವಿಷಯದಲ್ಲಿ ಬೋಜೇಗೌಡರು ಅನ್ಯಾಯ ಮಾ ಡಲಾಗುತ್ತಿದೆ ಎಂದು ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದಾರೆ. ಈ ಹಿಂದೆ ಬಿ.ಹೆಚ್.ಹರೀಶ್ ಸಮಯದಲ್ಲಿ ಇದೇ ಸುದ್ದಿಗಳನ್ನು ಹರಡಿಸಲಾಗಿತ್ತು. ಆದರೆ ಹಲವಾರು ವರ್ಷಗಳಿಂದ ಪ್ರಾಮಾಣಿಕವಾಗಿ ಪಕ್ಷಸೇವೆಯಲ್ಲಿ ತಾವು ಗುರು ತಿಸಿಕೊಂಡಿದ್ದೇವೆ. ಆ ನಿಟ್ಟಿನಲ್ಲಿ ಕ್ಷೇತ್ರದ ಅಭ್ಯರ್ಥಿ ಕುರಿತು ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ಕಾರ್ಯಕರ್ತರು ಕಿವಿಗೊಡದಿರಿ ಎಂದು ಸಲಹೆ ಮಾಡಿದರು.
ನಗರದ ಕೆಲವು ಕಡೆಗಳಲ್ಲಿ ಪಕ್ಷದ ವಿರೋಧಿಗಳು ಅಭ್ಯರ್ಥಿ ವಿಷಯದಲ್ಲಿ ಬೋಜೇಗೌಡರು ಅನ್ಯಾಯ ಮಾ ಡಲಾಗುತ್ತಿದೆ ಎಂದು ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದಾರೆ. ಈ ಹಿಂದೆ ಬಿ.ಹೆಚ್.ಹರೀಶ್ ಸಮಯದಲ್ಲಿ ಇದೇ ಸುದ್ದಿಗಳನ್ನು ಹರಡಿಸಲಾಗಿತ್ತು. ಆದರೆ ಹಲವಾರು ವರ್ಷಗಳಿಂದ ಪ್ರಾಮಾಣಿಕವಾಗಿ ಪಕ್ಷಸೇವೆಯಲ್ಲಿ ತಾವು ಗುರು ತಿಸಿಕೊಂಡಿದ್ದೇವೆ. ಆ ನಿಟ್ಟಿನಲ್ಲಿ ಕ್ಷೇತ್ರದ ಅಭ್ಯರ್ಥಿ ಕುರಿತು ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ಕಾರ್ಯಕರ್ತರು ಕಿವಿಗೊಡದಿರಿ ಎಂದು ಸಲಹೆ ಮಾಡಿದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರತಿ ಹೋಬಳಿ ಹಾಗೂ ಬೂತ್ ಸಮಿತಿ ಮುಖಂಡರ ಜೊತೆಗೂಡಿ ಹಗಲು-ರಾತ್ರಿ ಎನ್ನದೇ ಅಭ್ಯರ್ಥಿಯೊಂದಿಗೆ ತಾವು ಜವಾಬ್ದಾರಿಯನ್ನು ಹೊತ್ತು ಪಕ್ಷದ ಗೆಲುವಿಗಾಗಿ ಮುಂದಾಗಲಾಗಿದೆ. ಜೊತೆಗೆ ರಾಜ್ಯದಲ್ಲಿ ಹೆಚ್.ಡಿ.ಕೆ. ಅವರನ್ನು ಮುಖ್ಯಮಂತ್ರಿ ಮಾಡಲು ಪಣ ತೊಟ್ಟು ಜಿಲ್ಲೆಯಲ್ಲ್ಲೂ ಆಡಳಿತ ನಡೆಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಕ್ಷೇತ್ರದ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಅವರು ಇದೀಗ ಚುನಾವಣಾ ಪ್ರಚಾರದಲ್ಲಿ ತೊಡಗಲಿದ್ದಾರೆ. ತಾಲ್ಲೂಕಿನ ಎಲ್ಲಾ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರೊಂದಿಗೆ ಜೆಡಿಎಸ್ ಸಾಧನೆಗಳನ್ನು ಪ್ರತಿ ಮನೆ ಮನೆಗಳಿಗೆ ತಲುಪಿಸುವ ಕಾರ್ಯ ಮಾಡಲಿದ್ದು ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸುವುದೇ ಖಚಿತ ಎಂದು ಭವಿಷ್ಯ ನುಡಿದರು.
ಪಕ್ಷದ ಜಿಲ್ಲಾಧ್ಯಕ್ಷ ರಂಜನ್‌ಅಜಿತ್‌ಕುಮಾರ್ ಮಾತನಾಡಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬೋಜೇಗೌಡ ಅವರ ಕುಟುಂಬದ ಜೊತೆ ಅವಿಭಾವ ಸಂಬಂಧವಿದೆ. ಆ ನಿಟ್ಟಿನಲ್ಲಿ ಕ್ಷೇತ್ರಕ್ಕೆ ಬಿ.ಎಂ.ತಿಮ್ಮಶೆಟ್ಟಿ ಅವರನ್ನು ಎಲ್ಲರ ಒಪ್ಪಿಗೆ ಮೇರೆಗೆ ಅಭ್ಯರ್ಥಿ ಎಂದು ಆಯ್ಕೆ ಮಾಡಲಾಗಿದೆ ಎಂದ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿ ಕೇಡಿಗಳು ರವಾನಿಸುತ್ತಿರುವ ಸಂದೇಶಗಳಿಗೆ ಕಾರ್ಯಕರ್ತರು ಗೊಂದಲಗೊಳಗಬಾರದು ಎಂದು ತಿಳಿಸಿದರು.
ಕ್ಷೇತ್ರದ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಜೆಡಿಎಸ್‌ನೊಂದಿಗೆ ಸಾರ್ವಜನಿಕ ಸೇವೆಯಲ್ಲಿ ತೊಡಗಲಾಗಿದ್ದು ತಮ್ಮ ವೈಯಕ್ತಿಕ ಬದುಕಿಗಿಂತ ಪಕ್ಷಕ್ಕಾಗಿ ಹೆಚ್ಚು ಸೇವೆ ಸಲ್ಲಿಸಲಾಗಿದೆ. ಆದರೆ ಕೆಲವು ಆರೋಗ್ಯ ಸಮಸ್ಯೆಯಿಂದ ಸಣ್ಣಪುಟ್ಟ ಸಮಸ್ಯೆಗಳಾಗಿದೆಯೇ ಹೊರತು ಯಾವುದೇ ಚಿಂತೆಗೊಳ ಗಾಗಿಲ್ಲ. ಇದೀಗ ಸಂಪೂರ್ಣವಾಗಿ ಆರೋಗ್ಯವಂತರಾಗಿ ಚುನಾವಣೆಯನ್ನು ಎದುರಿಸಲು ಮುಂದಾಗಲಾಗಿದೆ ಎಂದು ಹೇಳಿದರು.
ಕಾರ್ಯಕರ್ತರ ದೊಡ್ಡಶಕ್ತಿಯಿಂದ ಪಂಚರತ್ನ ರಥಯಾತ್ರೆ ತಾಲ್ಲೂಕಿನಲ್ಲಿ ಅದ್ದೂರಿಯಾಗಿ ಯಶಸ್ವಿಗೊಂಡಿ ತು. ಆ ಯಶಸ್ಸನ್ನು ಸಹಿಸಲಾರದ ವಿರೋಧಿ ಪಕ್ಷದ ಮುಖಂಡರುಗಳು ಅಪಪ್ರಚಾರದಲ್ಲಿ ತೊಡಗಲಾಗಿದೆ. ಇನ್ನೂ ಮುಂದೆ ಗ್ರಾಮೀಣ ಹಾಗೂ ನಗರಮಟ್ಟದ ಹೆಚ್ಚು ಪ್ರಚಾರ ಕೈಗೊಂಡು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸುವ ಗುರಿಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಉಪಾಧ್ಯಕ್ಷ ಹೆಚ್.ಪಿ.ಲಕ್ಷ್ಮಣಗೌಡ, ಮಾಜಿ ಜಿಲ್ಲಾಧ್ಯಕ್ಷ ಹೆಚ್.ಎಸ್.ಮಂಜಪ್ಪ, ವಕ್ತಾರ ಹೊಲದಗದ್ದೆ ಗಿರೀಶ್, ನಗರಸಭಾ ಸದಸ್ಯರಾದ ಎ.ಸಿ.ಕುಮಾರಗೌಡ, ಗೋಪಿ, ದಿನೇಶ್, ಎಸ್ಸಿಎಸ್ಟಿ ಘಟಕದ ಜಿಲ್ಲಾಧ್ಯಕ್ಷ ದೇವಿಪ್ರಸಾದ್, ಅಲ್ಪಸಂಖ್ಯಾತರ ಘಟಕದ ನಿಸಾರ್ ಅಹ್ಮದ್, ಮುಖಂಡರುಗಳಾದ ಮಾನು ಮಿರಾಂಡ, ಚಂದ್ರಪ್ಪ, ಹುಣಸೇಮಕ್ಕಿ ಲಕ್ಷ್ಮಣ್, ಎನ್.ಎನ್.ಚಂದ್ರಶೇಖರ್, ಆನಂದ್ ನಾಯ್ಕ್, ಚಿದಾನಂದ್, ಜಯಂತಿ, ಸಿ.ಕೆ.ಮೂರ್ತಿ, ಇರ್ಷಾದ್, ಐ.ಡಿ.ಚಂದ್ರಶೇಖರ್, ಡಿ.ಕೆ.ಚಂದ್ರೇಗೌಡ, ದೇವರಾಜ್‌ಅರಸ್, ಮಲ್ಲೇದೇವರಪ್ಪ ಮತ್ತಿತ ರರಿದ್ದರು.